Advertisement

ಮಹಾರಾಣಿ ಕಾಲೇಜಿನ್ನು ಕ್ಲಸ್ಟರ್‌ ವಿವಿ

12:35 PM Sep 05, 2017 | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ತ್ರಿಭಜನೆಯ ನಂತರ ಪ್ರತ್ಯೇಕವಾಗಿ ಕಾರ್ಯಾರಂಭಿಸಿವೆ. ಆದರೆ, ನಗರದ ಹೃದಯಭಾಗದ ಮಹಾರಾಣಿ ಮಹಿಳಾ ವಿಜ್ಞಾನ, ಕಲಾ, ವಾಣಿಜ್ಯ ಹಾಗೂ ನಿರ್ವಹಣೆಶಾಸ್ತ್ರ ಕಾಲೇಜು ಮತ್ತು ಗೃಹವಿಜ್ಞಾನ ಕಾಲೇಜು ಈ ಮೂರು ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಹೊರಗುಳಿದಿದೆ.

Advertisement

ಕಾರಣ, ರಾಜ್ಯ ಸರ್ಕಾರವು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಮಹಾರಾಣಿ ಕಲಾ, ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ಕಾಲೇಜು, ಸರ್ಕಾರಿ ವಿಎಚ್‌ಡಿ ಗೃಹ ವಿಜ್ಞಾನ ಸಂಸ್ಥೆಯನ್ನು ಸೇರಿಸಿ ಕ್ಲಸ್ಟರ್‌ ವಿಶ್ವವಿದ್ಯಾಲಯದ
ಸ್ಥಾನಮಾನ ಕಲ್ಪಿಸಿದೆ. ಹೀಗಾಗಿ ಈ ಮೂರೂ ಕಾಲೇಜುಗಳು ಮೂರೂ ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಪ್ರತ್ಯೇಕ ಸ್ಥಾನಮಾನ ಸಿಗುವುದರಿಂದ ಈ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಲಭ್ಯವಾಗಲಿದೆ.

ಕ್ಲಸ್ಟರ್‌ ವಿವಿಯ ಉದ್ದೇಶ: ಇದೊಂದು ಏಕಾತ್ಮಕ ವಿಶ್ವವಿದ್ಯಾಲಯವಾಗಿದೆ. ಇಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಯುವ ಸಂಶೋಧಕರಿಗೆ ಹೊಸ ವಿಷಯದ ಸಂಶೋಧನೆಗೆ ಬೇಕಾದ ಸೂಕ್ತ ಪರಿಸರ ಕಲ್ಪಿಸಿ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಗೆ
ಉತ್ತೇಜನ ನೀಡಲಾಗುತ್ತದೆ.

ವಿರಳ ಸಂಶೋಧನೆಗಳನ್ನು ಪ್ರಶಸ್ತಗೊಳಿಸಲು ಸಂಪರ್ಕ, ಸಹಯೋಗ ಮತ್ತು ಸಹಕಾರದ ವೇದಿಕೆ ಕಲ್ಪಿಸಲಾಗುತ್ತದೆ.
ಜ್ಞಾನಾಭಿವೃದ್ಧಿಗಾಗಿ ಹೊಸ ಅವಕಾಶಗಳೊಂದಿಗೆ ಉತ್ತಮ ಸಾಂಪ್ರದಾಯಿಕ ಪದ್ಧತಿ ಜೋಡಿಸುವುದರ ಜತೆಗೆ ಕಾರ್ಮಿಕ ಮಾರುಕಟ್ಟೆ ಮಾಹಿತಿ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟವನ್ನು ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರತ್ಯೇಕ ಸ್ಥಾನಮಾನ: ಮಹಾರಾಣಿ ಕ್ಲಸ್ಟರ್‌ ವಿಶ್ವವಿದ್ಯಾಲಯಕ್ಕೆ ಪ್ರತ್ಯೇಕ ಕುಲಪತಿ ನೇಮಕ ಮಾಡಲಾಗುತ್ತದೆ. ಕುಲಪತಿ ನೇಮಕಕ್ಕೂ ಪೂರ್ವದಲ್ಲಿ ವಿಶೇಷಾಧಿಕಾರಿ ನೇಮಿಸುವ ಅಧಿಕಾರವು ಸರ್ಕಾರಕ್ಕೆ ಇದೆ. ಸಾಮಾನ್ಯ ವಿಶ್ವ
ವಿದ್ಯಾಲಯದಂತೆ ಇಲ್ಲಿಯೂ ಸಿಂಡಿಕೇಟ್‌ ಕೌನ್ಸಿಲ್‌, ವಿದ್ಯಾವಿಷಯಕ ಪರಿಷತ್‌ ಜತೆಗೆ ಎಲ್ಲಾ ವಿಭಾಗವೂ ಇರುತ್ತದೆ. ಆದರೆ, ಕಾಲೇಜಿನ ಸಂಯೋಜನೆ ಇರುವುದಿಲ್ಲ. ರಾಜ್ಯ ವಿಶ್ವವಿದ್ಯಾಲಯಗಳಂತೆ ಪ್ರತ್ಯೇಕ ಪರೀಕ್ಷಾಂಗ ವಿಭಾಗ ಇರುತ್ತದೆ. ತಮ್ಮದೇ ಆದ ಪರೀಕ್ಷಾ ಮಾದರಿಯನ್ನು ಅಳವಡಿಸಿ ಕೊಳ್ಳಲು ಅವಕಾಶ ಇದೆ. ಯಾವುದೇ
ವಿಶ್ವವಿದ್ಯಾಲಯಕ್ಕೆ ಹೊಂದಿಕೊಳ್ಳದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. 

Advertisement

ರಾಜು ಖಾರ್ವಿಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next