ಪಡುಬಿದ್ರಿ: ಸುಂದರ ದೇವಾಲಯ ನಿರ್ಮಾಣ ವಾಗಿದೆ. ಪ್ರತಿಷ್ಠೆ, ಬ್ರಹ್ಮಕಲ ಶಾದಿಗಳೂ ನೆರ ವೇರಿವೆ. ಪೂರ್ಣ ಸಾನ್ನಿಧ್ಯ ದೊಂದಿಗೆ ಭಕ್ತರಾಧೀನಳಾಗಿರುವ ಮಹಾಲಕ್ಷ್ಮೀಯೆಡೆಗೆ ಭಕ್ತರು ಇನ್ನಷ್ಟು ಸಂಖ್ಯೆಯಲ್ಲಿ ಆಗಮಿಸಬೇಕು. ಹಾಗಾ ದಾಗ ಆಕೆಯ ಸಾನಿಧ್ಯವೂ ಮತ್ತಷ್ಟು ವೃದ್ಧಿಯಾಗುವುದು. ಎಲ್ಲರಿಗೂ ಆಕೆ ಸನ್ಮಂಗಲವನ್ನುಂಟು ಮಾಡುವಳು ಎಂದು ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಹೇಳಿದರು.
ಅವರು ಸೋಮವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಬ್ರಹ್ಮ ಕಲಶೋತ್ಸವದ ಬಳಿಕ ನಡೆಯುತ್ತಿರುವ ಮಹಾರಥೋತ್ಸವ, ಚತುಃಪವಿತ್ರ ನಾಗಮಂಡಲ ಸೇವೆಗಳ ಪ್ರಯುಕ್ತ ಆಯೋಜಿಸಲಾದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಸಮ್ಮಾನ
ತಂತ್ರಿಗಳಾದ ವೇ| ಮೂ| ರಾಘವೇಂದ್ರ ತಂತ್ರಿ ಕುಕ್ಕಿಕಟ್ಟೆ, ವಾಸ್ತು ಶಾಸ್ತ್ರಜ್ಞ ವಿ| ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಪ್ರಧಾನ ಅರ್ಚಕ ವೇ| ಮೂ| ರಾಘವೇಂದ್ರ ಉಪಾಧ್ಯಾಯ, ಅರ್ಚಕ ವಿಷ್ಣುಮೂರ್ತಿ ಉಪಾಧ್ಯಾಯ ಅವರನ್ನು ಶ್ರೀಗಳು ಸಮ್ಮಾನಿಸಿದರು.
ಅನ್ನ ದಾಸೋಹದಲ್ಲಿ ಸಹಕರಿಸಿದ ಹರಿಯಪ್ಪ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್ ಹಾಗೂ ದ.ಕ. ಮೊಗವೀರ ಮಹಾಜನ ಸಂಘದ ಗೌ| ಪ್ರ| ಕಾರ್ಯದರ್ಶಿ ಸುಧಾಕರ ಕುಂದರ್ ಅವರನ್ನು ಡಿ.ಕೆ. ಶಿವಕುಮಾರ್ ಗೌರವಿಸಿದರು.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ| ಜಿ. ಶಂಕರ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಗೌ| ಪ್ರ| ಕಾರ್ಯದರ್ಶಿ ಸುಧಾಕರ ಕುಂದರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾ ಡಳಿತ ಸಮಿತಿಯ ಅಧ್ಯಕ್ಷ ವಾಸು ದೇವ ಸಾಲ್ಯಾನ್, ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ, ಸುಬ್ರಹ್ಮಣ್ಯ ಭಟ್, ರಾಘವೇಂದ್ರ ಉಪಾಧ್ಯಾಯ, ವಿಷ್ಣುಮೂರ್ತಿ ಉಪಾಧ್ಯಾಯ, ಸೇಕ್ರೆಡ್ ಹಾರ್ಟ್ ಚರ್ಚ್ ಉಚ್ಚಿಲದ ಧರ್ಮಗುರುಗಳಾದ ರೆ| ಫಾ| ಜೋಸ್ವಿ, ಭಾಸ್ಕರ ನಗರ ಸಯ್ಯದ್ ಅರಬೀ ಜುಮ್ಮಾ ಮಸೀದಿಯ ಖತೀಬರಾದ ಶಾಹುಲ್ ಹಮೀದ್ ನಹೀಮಿ, ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಸತೀಶ್ ಅಮೀನ್ ಬಾಕೂìರು, ಕಿನ್ನಿಗೋಳಿ ಉದ್ಯಮಿ ಶೇಖರ ಸಾಲ್ಯಾನ್, ಮುಂಬಯಿ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷ ಸದಾನಂದ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಮಧ್ಯವಲಯದ ಅಧ್ಯಕ್ಷ ಸುಕುಮಾರ್ ಶ್ರೀಯಾನ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಶಾಸಕ ಗೋಪಾಲ ಪೂಜಾರಿ, ಉಡುಪಿ ಜಿಲ್ಲಾ ಡಿಸಿಸಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಿಥುನ್ ರೈ, ಪ್ರಸಾದ್ ಕಾಂಚನ್ ವೇದಿಕೆಯಲ್ಲಿದ್ದರು.
ಡಾ| ಜಿ. ಶಂಕರ್ ಸ್ವಾಗತಿಸಿದರು. ದಾಮೋದರ ಶರ್ಮ ನಿರ್ವಹಿಸಿದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಶಂಕರ ಸಾಲ್ಯಾನ್ ವಂದಿಸಿದರು.
ಅವಕಾಶಗಳ ಸದ್ಬಳಕೆ ಮಾಡೋಣ: ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಹೆಣ್ಣು ಕುಟುಂಬದ ಕಣ್ಣು ಎನ್ನುತ್ತಾರೆ. ಭಾರತ ಭೂಮಿಯನ್ನು ನಮ್ಮ ತಾಯಿ ಎನ್ನುತ್ತೇವೆ. ಹೆಣ್ಣಿಗೆ ನಾವು ತಾಯಿಯ ಸ್ಥಾನವನ್ನು ಕೊಟ್ಟವರೂ ಆಗಿದ್ದೇವೆ. ಹಾಗಾಗಿ ಶ್ರೀ ಮಹಾಲಕ್ಷ್ಮೀ ದೇವಿಯನ್ನು ನಂಬಿ ಮೊಗವೀರರು ತಮ್ಮ ವೃತ್ತಿ ನಡೆಸುತ್ತಾರೆ. ಮೊಗವೀರ ಮಾತೆಯರೂ ಮನೆಯವರ ವ್ಯಾಪಾರ ವಹಿವಾಟಿನಲ್ಲೂ ಜತೆಗಿರುತ್ತಾರೆ. ಹಾಗಾಗಿ ಮಾನವ ಧರ್ಮವೇ ದೊಡ್ಡದು. ಎಲ್ಲ ಅವಕಾಶ ಸದ್ಬಳಕೆ ಮಾಡಿಕೊಳ್ಳೋಣ ಎಂದರು.