Advertisement
ಜು. 26ರಂದು ರಾತ್ರಿ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಆಶ್ರಯದಲ್ಲಿ ಮುಂಬಯಿ ಪ್ರವಾಸದಲ್ಲಿದ್ದ ಶ್ರೀ ಮಹಾಗಣಪತಿ ಮಕ್ಕಳ ಹಾಗೂ ಮಹಿಳಾ ಯಕ್ಷಗಾನ ಮಂಡಳಿ ಕಾಟಿಪಳ್ಳ ಸುರತ್ಕಲ್ ತಂಡದ ಸಮಾರೋಪ ಹಾಗೂ ಸಮ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಕ್ಷಗಾನ ಗಂಡು ಕಲೆ ಎಂದೇ ಪ್ರಸಿದ್ಧಿ ಪಡೆದಿದ್ದರೂ, ಮಹಿಳೆಯರು ಕೂಡ ಕಲಾರಂಗದಲ್ಲಿ ಮೇಳೈಸಲು ಸಾಧ್ಯವಿದೆ ಎಂಬುವುದನ್ನು ಮಹಿಳಾ ಯಕ್ಷಗಾನ ಮಂಡಳಿಯವರು ತೋರಿಸಿಕೊಟ್ಟಿದ್ದಾರೆ. ಅವರಿಗೆ ಕ್ಷೇತ್ರದ ದೇವಿಯ ಅನುಗ್ರಹ ಸದಾ ಇರಲಿ ಎಂದು ಅಣ್ಣಿ ಶೆಟ್ಟಿ ಅವರು ಹಾರೈಸಿ ಕಲಾವಿದರನ್ನು ಅಭಿನಂದಿಸಿದರು.
Related Articles
Advertisement
ಬಳಗದ ಕಲಾವಿದರ ಪರವಾಗಿ ವಸುಂಧರಾ ಹರೀಶ್ ಶೆಟ್ಟಿ ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ, ಮುಂಬಯಿಯ ಪ್ರವಾಸ ನಮ್ಮ ಪಾಲಿಗೆ ಅವಿಸ್ಮರಣೀಯ. ಅದರ ಶ್ರೇಯಸ್ಸು ಅಜೆಕಾರು ಕಲಾಭಿಮಾನಿ ಬಳಗಕ್ಕೆ ಸೇರುತ್ತದೆ. ನಮ್ಮನ್ನು ಸದಾ ಪ್ರೋತ್ಸಾಹಿಸುತ್ತಿರುವ ತಂಡದ ನಿರ್ದೇಶಕಿ ಪೂರ್ಣಿಮಾ ಯತೀಶ್ ರೈ ಅವರಿಗೆ ಋಣಿಯಾಗಿದ್ದೇವೆ. ಮುಂಬಯಿಯ ಸಮಸ್ತ ಕಲಾರಸಿಕರಿಗೆ, ಕಲಾ ಸಂಘಟಕರ ಪ್ರೀತಿ, ಗೌರವಕ್ಕೆ ನಮನಗಳು ಎಂದು ಹೇಳಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ಪಾಲ್ಗೊಂಡ ನವಿಮುಂಬಯಿ ಹೊಟೇಲ್ ಓನರ್ ಅಸೋಸಿಯೇಶನ್ ಅಧ್ಯಕ್ಷ ದಯಾನಂದ ಶೆಟ್ಟಿ, ಉಪಾಧ್ಯಕ್ಷ ಜಯಪ್ರಕಾಶ್
ಶೆಟ್ಟಿ, ಉದ್ಯಮಿ ಶಂಕರ್ ಶೆಟ್ಟಿ ಮೂರೂರು, ಬೋಂಬೆ ಬಂಟ್ಸ್ ಅಸೋಸಿಯೇಶನ್ ಗೌರವ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ, ಉದ್ಯಮಿ ಸತೀಶ್ ಶೆಟ್ಟಿ ಕೊಟ್ರಾಡಿಗುತ್ತು, ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ತುಳು-ಕನ್ನಡ ವೆಲ್ಫೆàರ್ ಅಸೋಸಿಯೇಶನ್ ಕಾಮೋಟೆ ಅಧ್ಯಕ್ಷ ಬೋಳ ರವಿ ಪೂಜಾರಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಉಪಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ ಮೊದಲಾದವರು ಮಾತನಾಡಿ ಶುಭಹಾರೈಸಿದರು.
ಅತಿಥಿಗಳಾಗಿ ಉದ್ಯಮಿಗಳಾದ ನಾಗೇಶ್ ಶೆಟ್ಟಿ, ಜೀತು ಶರ್ಮಾ, ಮೋಹಿತ್ ಗಂಭೀರ್, ಬೊಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಅವರ ಪತ್ನಿ ಶಾರದಾ ಎಸ್. ಶೆಟ್ಟಿ, ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳನ್ನು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಪುಷ್ಪಗುತ್ಛ
ರಣಿಕೆಯನ್ನಿತ್ತು ಗೌರವಿಸಿದರು. ಹಿಮ್ಮೇಳ-ಮುಮ್ಮೇಳ ಕಲಾ ವಿದರನ್ನು ಅಭಿನಂದಿಸಲಾಯಿತು. ಕಲಾವಿದೆ ಸೌಜನ್ಯಾ ಶೆಟ್ಟಿ ಅವರು ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಮ್ಮಾನ ಪತ್ರ ವಾಚಿಸಿದರು. ಇತರ ಸಮ್ಮಾನಿತರ ಸಮ್ಮಾನ ಪತ್ರವನ್ನು ಅಶೋಕ್ ಪಕ್ಕಳ ಅವರು ವಾಚಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಲಾ ಸಂಘಟಕ ಕರ್ನೂರು ಮೋಹನ್ ರೈ ವಂದಿಸಿದರು. ಇದೇ ಸಂದರ್ಭದಲ್ಲಿ ಮುಂಬಯಿ ಪ್ರವಾಸದ ಕೊನೆಯ ಪ್ರಸಂಗ ಜಾಂಬವತಿ ಕಲ್ಯಾಣ-ಅಗ್ರಪೂಜೆ ಯಕ್ಷಗಾನ ಪ್ರದರ್ಶನಗೊಂಡಿತು. ಚಿತ್ರ : ಸುಭಾಷ್ ಶಿರಿಯಾ