Advertisement

ಮಹದಾಯಿ ಹೋರಾಟ ಗೆಲ್ಲಲು ಗೋವಾ ಸಂಸದರು, ಶಾಸಕರು ಸರಿಯಾಗಿ ಅಧ್ಯಯನ ಮಾಡಬೇಕಿದೆ

05:26 PM Jan 12, 2023 | Team Udayavani |

ಪಣಜಿ: ಮಹದಾಯಿ ಹೋರಾಟ ಗೆಲ್ಲಲು ಗೋವಾ ಸಂಸದರು, ಶಾಸಕರು ಸರಿಯಾಗಿ ಅಧ್ಯಯನ ಮಾಡಬೇಕು. ಮಹದಾಯಿ ಬಗ್ಗೆ ಗೋವಾದ ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯವಿದೆ. ಅದಕ್ಕಾಗಿಯೇ ಸಂಸತ್ತು, ದೆಹಲಿ ದರ್ಬಾರ್  ಮತ್ತು ಇತರ ವೇದಿಕೆಗಳಲ್ಲಿ, ನಿಖರವಾದ ಭಾಗವನ್ನು ಪ್ರಸ್ತುತಪಡಿಸಲಾಗುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕರ್ನಾಟಕದ ಪ್ರತಿನಿಧಿಗಳು ತಮ್ಮ ರಾಜ್ಯದ ಹಿತಾಸಕ್ತಿಯನ್ನು ಪ್ರತಿಪಾದಿಸುತ್ತಾರೆ, ಈ ಪರಿಸ್ಥಿತಿಯನ್ನು ಬದಲಾಯಿಸಲು, ನಮ್ಮ ನೀರಿನ ಅಗತ್ಯತೆಗಳು, ನಮ್ಮ ನದಿಗಳು ಮತ್ತು ನೈಸರ್ಗಿಕ ನೀರಿನ ಮೂಲಗಳ ಬಗ್ಗೆ ನಾವು ಮಾಹಿತಿ ಪಡೆಯಬೇಕು ಎಂದು ಪರಿಸರ ಹೋರಾಟಗಾರ ರಾಜೇಂದ್ರ ಕೇರ್ಕರ್ ಅವರು  ಮಾರ್ಶೆಲ್‍ನಲ್ಲಿ ಆಯೋಜಿಸಿದ್ದ  “ಆಮಚಾ ಮಾದಾಯ್ ಆಮಕಾ ಜಾಯ್” ಸಾರ್ವಜನಿಕ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮಹದಾಯಿ ಜೊತೆಗೆ ರಾಜ್ಯದಲ್ಲಿನ ನದಿಗಳ ಬಗ್ಗೆ ಅಧ್ಯಯನ ಮಾಡಬೇಕಾಗಿದೆ, ಎಷ್ಟು ನದಿಗಳಿವೆ ಎಂಬುದರ ಬಗ್ಗೆಯೂ ನಮಗೆ ನಿರ್ಲಕ್ಷ್ಯವಿದೆ. ಒಂದು ವರದಿಯು ಒಂಬತ್ತು ನದಿಗಳನ್ನು ಪಟ್ಟಿ ಮಾಡಿದೆ. ಪರಿಸರವಾದಿಗಳು ಮಾಹಿತಿ ನೀಡಿದ ನಂತರ 11 ನದಿಗಳನ್ನು ನೋಂದಾಯಿಸಲಾಗಿದೆ. ಕೇವಲ ತಾಯಿ ಎಂದು ಹೇಳಿದರಾಗಿಲ್ಲ ಅವಳನ್ನು ನೋಡಿಕೊಳ್ಳಬೇಕು. ನಮ್ಮ ಸಂಸ್ಕøತಿಯನ್ನು ನದಿಗಳ ದಡದಲ್ಲಿ ರಚಿಸಲಾಗಿದೆ. ನದಿಯ ದಡದಲ್ಲಿ ಹಲವು ತಲೆಮಾರುಗಳು ವಾಸಿಸುತ್ತಿವೆ. ನೀರೇ ಜೀವನವಾಗಿದೆ ಆದರೆ  ರಾಜ್ಯದ ಮಹದಾಯಿ ಮತ್ತು ಎಲ್ಲಾ ನದಿಗಳ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪತ್ರಿಕೆಯೊಂದರ ಸಂಪಾದಕರಾಗಿರುವ ರಾಜು ನಾಯ್ಕ ಮಾತನಾಡಿ- ‘ಮಹದಾಯಿ’ ಹೋರಾಟಕ್ಕೆ ಸಮರ್ಥ ರಾಜಕೀಯ ನಾಯಕನ ಅಗತ್ಯವಿದೆ. ಅದಕ್ಕೆ ವಿಧಾನ ಸಭೆ, ಲೋಕಸಭೆಯಲ್ಲಿ ಪರಿಸರ ಅಧ್ಯಯನ ಇರುವ ನಾಯಕ ಬೇಕು. ಪರಿಸರವಾದಿ ರಾಜೇಂದ್ರ ಕೇರ್ಕರ್ ಅವರಂತಹ ಹೋರಾಟಗಾರರು  ರಾಜಕೀಯಕ್ಕೆ ಬರಬೇಕು. ಅವರು ಖಂಡಿತವಾಗಿಯೂ ಗೋವಾದ ಪರಿಸರೀಯ ಭಾಗವನ್ನು ಪ್ರದರ್ಶಿಸುತ್ತಾರೆ ಎಂದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಯೂರಿ ಅಲೆಮಾಂವ, ಶಾಸಕ ಕಾರ್ಲೋಸ್ ಫೆರೇರಾ, ಆಪ್ ನಾಯಕರಾದ ಪ್ರತಿಮಾ ಕುಟಿನ್ಹೋ, ದತ್ತಾರಾಮ್ ದೇಸಾಯಿ, ತೃಣಮೂಲದ ಸಾಮಿಲ್ ವಲ್ವೈಕರ್, ದಿಲೀಪ್ ಬೋರ್ಕರ್, ರಮೇಶ್ ಗವಾಸ್, ಫಾ. ಎರಿಕ್ ಪೆರೇರಾ, ಮಧು ಗಾಂವ್ಕರ್ ಸೇರಿದಂತೆ ಅನೇಕ ಪರಿಸರವಾದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಕ್ತಾರರು ಹಾಗೂ ಪರಿಸರ ಪ್ರೇಮಿಗಳಿಂದ ಮಹದಾಯಿಗಾಗಿ ಸಾರ್ವಜನಿಕ ಹೋರಾಟ ನಡೆಸಲು ತೀರ್ಮಾನಿಸಲಾಯಿತು.

ಇದನ್ನೂ ಓದಿ: ನಾಡದೋಣಿ ಮೀನುಗಾರರಿಗೆ ಕೇಂದ್ರದಿಂದ 25 ಲಕ್ಷ ಲೀಟರ್ ಹೆಚ್ಚುವರಿ ಸೀಮೆ ಎಣ್ಣೆ ಬಿಡುಗಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next