Advertisement

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ವಿದ್ಯಾರ್ಥಿನಿಗೆ ಬಹುಮಾನಗಳ ಮಹಾಪೂರ

03:16 PM Feb 11, 2022 | Team Udayavani |

ಮಂಡ್ಯ:ಮಂಗಳವಾರ ಪಿಎಇಸ್‌ ಕಾಲೇಜಿನಲ್ಲಿ ಕೇಸರಿ ಶಾಲುಗಳನ್ನು ಧರಿಸಿದ್ದ ವಿದ್ಯಾರ್ಥಿಗಳತ್ತ ಏಕಾಂಗಿಯಾಗಿ ಮುನ್ನುಗ್ಗಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್‌ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು, ಆಕೆಗೆ ಹಲವು ಮುಸ್ಲಿಂ ಮುಖಂಡರು ಜನ ಪ್ರತಿನಿಧಿಗಳು ಬಹುಮಾನಗಳನ್ನು ನೀಡಿದ್ದಾರೆ.

Advertisement

ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕ ಜೇಶಾನ್ ಸಿದ್ಧಿಕಿ ಅವರು ಗುರುವಾರ ಮುಸ್ಕಾನ್‌ ಅವರ ಮನೆಗೆ ಭೇಟಿ ನೀಡಿ ಪ್ರಶಂಸೆ ಸೂಚಿಸಿ ಉಡುಗೊರೆಗಳನ್ನು ನೀಡಿದ್ದಾರೆ.

ಹಿಜಾಬ್ ಧರಿಸುವ ಹಕ್ಕನ್ನು ತಡೆಯಲು ಪ್ರಯತ್ನಿಸಿದ ಫ್ಯಾಸಿಸ್ಟರ ವಿರುದ್ಧ ದೃಢವಾಗಿ ನಿಂತ ಕರ್ನಾಟಕದ ಸಿಂಹಿಣಿಯನ್ನು ಭೇಟಿಯಾದೆ. ನಾನು ಧೈರ್ಯಶಾಲಿ ಹುಡುಗಿ ಮುಸ್ಕಾನ್ ಖಾನ್ ಮತ್ತು ಅವರ ಕುಟುಂಬವನ್ನು ಭೇಟಿಯಾದೆ, ಆಕೆಗೆ ಮೆಚ್ಚುಗೆಯ ಟೋಕನ್ ನೀಡಿ, ಅವಳ ಧೈರ್ಯವನ್ನು ಶ್ಲಾಘಿಸಿದೆ! ಎಂದು ಟ್ವೀಟ್ ಮಾಡಿದ್ದಾರೆ.

ಅವರದ್ದು ತಪ್ಪಿಲ್ಲ, ನನ್ನದೂ ತಪ್ಪಿಲ್ಲ

ಅವರ ಸಂಸ್ಕೃತಿ ಅವರದ್ದು. ನಮ್ಮ ಸಂಸ್ಕೃತಿ ನಮ್ಮದು. ಅವರು ನನ್ನ ಬಳಿ ಬಂದು ಜೈಶ್ರೀ ರಾಮ್‌ ಎಂದು ಘೋಷಣೆ ಕೂಗಿದರು. ಅದು ಅವರ ಧರ್ಮ, ಅದೇ ರೀತಿ ನಾನು ಅಲ್ಲಾ ಹು ಅಕºರ್‌ ಎಂದು ಕೂಗಿದೆ. ಇದು ನನ್ನ ಧರ್ಮ. ಇದರಲ್ಲಿ ಅವರದ್ದು ತಪ್ಪಿಲ್ಲ. ನನ್ನದೂ ತಪ್ಪಿಲ್ಲ. ಎಲ್ಲರಿಗೂ ಸ್ವಾತಂತ್ರ್ಯ. ಅದಕ್ಕೆ ಅವರು ವಿರೋಧ ಮಾಡುವಂತಿಲ್ಲ ಎಂದು ವಿದ್ಯಾರ್ಥಿನಿ ಮುಸ್ಕಾನ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

Advertisement

ಹಿಜಾಬ್‌ ತೆಗೆಯುವಂತೆ ಹೈಕೋರ್ಟ್‌ ಆದೇಶ ನೀಡಿದರೆ ತೆಗೆಯುವುದು ಕಷ್ಟ. ಅದು ನಮ್ಮ ಹಕ್ಕು ಎಂದಿದ್ದಾರೆ.

ತಪ್ಪೇನು ?

ಆಕೆ ಧೈರ್ಯವಂತೆ, ಆಕೆಗೆ ಉಡುಗೊರೆ ನೀಡುವುದರಲ್ಲಿ ತಪ್ಪೇನಿದೆ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದ್ದಾರೆ.

5 ಲಕ್ಷ ಬಹುಮಾನ?
ಅಲ್ಲಾಹು ಅಕ್ಬರ್‌ ಎಂದು ಘೋಷಣೆ ಕೂಗಿದ ವಿದ್ಯಾರ್ಥಿನಿ ಮುಸ್ಕಾನ್‌ಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಕ್ತಿಯೊಬ್ಬರು ಪೋಸ್ಟ್‌ ಮಾಡಿದ್ದಾರೆ. ಇರ್ಜನ್‌ ಅಡ್ಡೂರ್‌ ಎಂಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ, ಜಮಾತೇ ಹೇ ಹಿಂದ್‌ನ ಪ್ರಮುಖ ಮೌಲಾನ ಮಹಮೂದ ಮದನಿ ಅವರು 5 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ. ಆ ಹಣವು ಆದಷ್ಟು ಬೇಗ ಅವಳ ಕುಟುಂಬಕ್ಕೆ ಸೇರಲಿ. ಸಹೋದರಿಯು ಉನ್ನತ ಶಿಕ್ಷಣಕ್ಕೆ ಉಪಯೋಗಿಸಲಿ ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ 5 ಲಕ್ಷ ರೂ. ಬಹುಮಾನ ಘೋಷಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ ಮುಸ್ಕಾನ್‌, ನಮಗೆ ಗೊತ್ತಿಲ್ಲ. ಆದರೆ ಅದು ವೈರಲ್‌ ಆಗುತ್ತಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next