Advertisement

Amaravati: ತಿರುಪತಿಯಲ್ಲಿ ಮುರಿದಿದ್ದ ರಾಮನ ಬೆರಳು ದುರಸ್ತಿ!

09:13 PM Nov 24, 2024 | Team Udayavani |

ಅಮರಾವತಿ: ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಭಗ್ನಗೊಂಡಿದ್ದ ಮೂರ್ತಿಯ ಬೆರಳನ್ನು ರಿಪೇರಿ ಮಾಡಲಾಗಿದೆ. ಇದು 1000 ವರ್ಷಗಳಷ್ಟು ಹಳೆಯದಾದ ಮೂರ್ತಿ ಎಂದು ಟಿಟಿಡಿ ಹೇಳಿದೆ.

Advertisement

2021ರಲ್ಲಿ ಪವಿತ್ರ ಸ್ನಾನ ಮಾಡಿಸುವ ವೇಳೆ ಪಂಚಲೋಹದ ರಾಮನ ಮೂರ್ತಿಯ ಎಡಗೈನಲ್ಲಿನ 1 ಬೆರಳು ಮುರಿದು ಹೋಗಿತ್ತು. ತಕ್ಷಣವೇ ಈ ವಿಷಯವನ್ನು ಟಿಟಿಡಿಯ ಗಮನಕ್ಕೆ ತಂದಿದ್ದು, ಬೆರಳು ಸರಿಪಡಿಸಲು ಕೋರಲಾಗಿತ್ತು ಎಂದು ದೇವಸ್ಥಾನದ ಮುಖ್ಯ ಅರ್ಚಕ ವೇಣುಗೋಪಾಲ ದೀಕ್ಷಿತರು ಹೇಳಿದ್ದಾರೆ.

ಬೆರಳು ಮುರಿದ ಬಳಿಕ ಚಿನ್ನದಿಂದ ತಯಾರಿಸಿದ ಬೆರಳನ್ನು ತಾತ್ಕಾಲಿಕವಾಗಿ ಅಳವಡಿಸಿ ಪೂಜಾ ವಿಧಿಗಳನ್ನು ನಡೆಸಲಾಗುತ್ತಿತ್ತು. ಇದೀಗ ಹೊಸ ಬೆರಳನ್ನು ತಯಾರಿಸಲಾಗಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ನಡೆಸುವ ಮೂಲಕ ಅದನ್ನು ಮೂರ್ತಿಗೆ ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಿರುಪತಿ ದೇವಸ್ಥಾನದಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮೂರ್ತಿಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಮುಂದಿನ ಬಾರಿ 2030ರಲ್ಲಿ ಈ ಕಾರ್ಯ ನಡೆಯುತ್ತದೆ ಎಂದು ಟಿಟಿಡಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next