ಮಾಗಡಿ: ಮಾಗಡಿ-ಗುಡೇಮಾರನಹಳ್ಳಿ ಕೆಶಿಫ್ ರಸ್ತೆ ನಡುವೆ ಕೆಆರ್‌ಡಿಸಿಎಲ್ ಒಂದು ಶೆಡ್ ರೂಪಿಸಿ ಟೋಲ್ ವಸೂಲಿಗೆ ಇಳಿ ದಿರುವುದು ರೈತರ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ. ಕೂಡಲೇ ಸರ್ಕಾರ ಎಚ್ಚೆತ್ತು ಟೋಲ್ ವಸೂಲಿ ಕೇಂದ್ರ ವನ್ನೇ ರದ್ದುಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಮಾಗಡಿ-ಗುಡೇಮಾರನಹಳ್ಳಿ ಕೆಶಿಫ್ ರಸ್ತೆಯಲ್ಲಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಟೋಲ್ ಕೌಂಟರ್ ಮಾಡಿದ್ದು ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ. ಕೂಡಲೇ ಟೋಲ್ ರದ್ದುಗೊಳಿಸಿದರೆ ರೈತರ ಪರ ಮುಖ್ಯಮಂತ್ರಿ ಯಡಿಯೂರಪ್ಪ, ತಾಲೂಕಿನ ಯೋಗ್ಯ ಡಿಸಿಎಂ ಡಾ ಅಶ್ವತ್ಥ ನಾರಾಯಣ್ ಎಂದು ಜನ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ತುಳುನಾಡಿನ ಧರ್ಮ ಪುರಿಯಿಂದ-ಆಂಧ್ರದ ಮಡಕಶಿರಾ ವರೆಗೆ ಸಾವಿರಾರು ಹಳ್ಳಿಗಳ ರೈತರು ಇದ ರಿಂದ ನೋವು ನಷ್ಟ ಅನುಭಸುವುದನ್ನು ಮೊದಲು ತಪ್ಪಿಸಿ ಎಂದರು.
ಡಿಸಿಎಂಗೆ ಬಹಿರಂಗ ಪತ್ರ: ಮಾಗಡಿ ಗುಡೇಮಾರನಹಳ್ಳಿ ಕೆಶಿಫ್ ರಸ್ತೆ ಅಗಲ ವಾಗಿಲ್ಲ. ರೋಡ್ ಡಿವೈಡರ್ ಕೂಡ ಇಲ್ಲ. ಸಣ್ಣ ರೈತರು ಅವರ ಯೋಗ್ಯತೆಗೆ ತಕ್ಕಂತೆ ಪುಟ್ಟ ಹಳೆಯ ಕಾರುಗಳನ್ನು ಹೊಂದಿ ದ್ದಾರೆ. ಅವರು ಟೋಲ್ ಕಟ್ಟುವುದಕ್ಕಿಂತಲೂ ಮೊದಲು ಯಡಿಯೂರಪ್ಪನ ಸರ್ಕಾರದ ಮೊದಲ ಸುಲಿಗೆ ಎಂದು ಹೇಳಿಕೊಳ್ಳು ವಲ್ಲಿ ನೀವೇ ಆಸ್ಪದ ಕೊಟ್ಟಂತಾಯಿತು ಎಂದು ಸಿಎಂ ಮತ್ತು ಡಿಸಿಎಂಗೆ ಬಹಿರಂಗ ಪತ್ರಬರೆದಿರುವು ದಾಗಿ ಹಿರಿಯ ಲೇಖಕ ಖಂಡಪರಶು ತಿಳಿಸಿದ್ದಾರೆ.
ದರಪಟ್ಟಿ ಹೀಗಿದೆ..: ಲಘುವಾಹನ ಸಿಂಗಲ್ ಸಂಚಾರಕ್ಕೆ 45 ರೂ, ರಿಟರ್ನ್ 24 ಗಂಟೆಯೊಳಗೆ 65 ರೂ, ತಿಂಗಳಿಗೆ 1,430 ರೂ, ಸರಕು ವಾಹನ ಹಾಗೂ ಮಿನಿ ಬಸ್ ಸಿಂಗಲ್ ಸಂಚಾರಕ್ಕೆ 70 ರೂ, ರಿಟರ್ನ್ 24 ಗಂಟೆಯೊಳಗೆ 105 ರೂ, ತಿಂಗಳಿಗೆ 2,305 ರೂ, ಬಸ್ಸು ಸಂಚಾರ: ಬಸ್, ಟ್ರಕ್ 2-3 ಆಕ್ಸಿಲ್ ವಾಣಿಜ್ಯ ವಾಹನ ಸಿಂಗಲ್ ಸಂಚಾರಕ್ಕೆ 145-150 ರೂ, ರಿಟರ್ನ್ 24 ಗಂಟೆಯೊಳಗೆ 220 ರೂ, ತಿಂಗಳಿಗೆ 4,835 ಮತ್ತು 4,920 ರೂ., ಭಾರೀ ನಿರ್ಮಾಣ ಯಂತ್ರಗಳ ಸಿಂಗಲ್ ಸಂಚಾರಕ್ಕೆ 225 ರೂ, ರಿಟರ್ನ್ 24 ಗಂಟೆಯೊಳಗೆ 340 ರೂ, ತಿಂಗಳಿಗೆ 7,580 ರೂ, ಭಾರಿ ಗಾತ್ರದ ವಾಹನ ಸಿಂಗಲ್ ಸಂಚಾರಕ್ಕೆ 275 ರೂ, ರಿಟರ್ನ್ 24 ಗಂಟೆಯೊಳಗೆ 415 ರೂ, ತಿಂಗಳಿಗೆ 9,225 ರೂ ವಸೂಲಿ ಮಾಡಲು ದರಪಟ್ಟಿ ಪ್ರಕಟಿಸಲಾಗಿದೆ.
* ತಿರುಮಲೆ ಶ್ರೀನಿವಾಸ್