ಮುಂಬಯಿ: ಒಂದು ಸಿನಿಮಾ ನಿರ್ಮಾಣ ಮಾಡುವುದು ಅಷ್ಟು ಸುಲಭದ ಮಾತಲ್ಲ. ಕೋಟಿ ಕೋಟಿ ಬಂಡವಾಳ ಹಾಕಿದರೆ ಹೆಚ್ಚಿನ ಲಾಭದ ನಿರೀಕ್ಷೆ ನಿರ್ಮಾಪಕರಲ್ಲಿ ಇರುತ್ತದೆ.
ಕೆಲವೊಮ್ಮೆ ಯಾವ ದೊಡ್ಡ ಸ್ಟಾರ್‌ಗಳಿದ್ದರೂ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲು ಕಾಣುತ್ತದೆ. ಆದರೆ ಸೋಲು ಕಂಡರೂ ಕೋಟಿ ಗಳಿಕೆಯನ್ನಾದರೂ ಸಿನಿಮಾ ಕಾಣುತ್ತದೆ. ಇಲ್ಲೊಂದು ಸಿನಿಮಾ ಹೀನಾಯ ಸೋಲು ಕಂಡಿದ್ದು ಮಾತ್ರವಲ್ಲದೆ ಹಾಕಿದ ಹಣಕ್ಕೆ ವಾಪಾಸ್ ಆಗಿ ನಯಾಪೈಸೆಯೂ ಸಿಕ್ಕಿಲ್ಲ.!
ಇದನ್ನೂ ಓದಿ: BBK11: ಶಾಕಿಂಗ್.! ಫಿನಾಲೆವರೆಗೂ ಬರ್ತಾರೆ ಅನ್ಕೊಂಡಿದ್ದ ಆ ಸ್ಪರ್ಧಿ ಇವತ್ತೇ ಮನೆಯಿಂದ ಔಟ್?
2023ರಲ್ಲಿ ʼದಿ ಲೇಡಿ ಕಿಲ್ಲರ್ʼ (The Lady Killer) ಎನ್ನುವ ಸಿನಿಮಾವೊಂದು ಬಂದಿತ್ತು. ಈ ಸಿನಿಮಾವನ್ನು ಅಜಯ್ ಬಹ್ಲ್ ನಿರ್ದೇಶನ ಮಾಡಿದ್ದರು. ಪ್ರಧಾನ ಪಾತ್ರದಲ್ಲಿ ಭೂಮಿ ಪೆಡ್ನೇಕರ್ (Bhumi Pednekar) ,ಅರ್ಜುನ್ ಕಪೂರ್ (Arjun Kapoor) ನಟಿಸಿದ್ದರು. ಸಿನಿಮಾಕ್ಕೆ ಭೂಷಣ್ ಕುಮಾರ್ ಅವರ ಟಿ-ಸೀರೀಸ್ ಬಂಡವಾಳ ಹಾಕಿತ್ತು.
ಸುಮಾರು 45 ಕೋಟಿ ಬಜೆಟ್‌ನಲ್ಲಿ ಬಂದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ಅರ್ಜುನ್, ಭೂಮಿ ಪಡ್ನೇಕರ್‌ನಂತಹ ಸ್ಟಾರ್ ಕಾಸ್ಟ್ ಇದ್ದೂ ಸಿನಿಮಾ ಗಳಿಸಿದ್ದು ಕೇವಲ 60 ಸಾವಿರ ರೂಪಾಯಿನಷ್ಟೇ.!
ರಿಲೀಸ್ ಆದ ಮೊದಲ ದಿನ ಭಾರತದಾದ್ಯಂತ 293 ಟಿಕೆಟ್‌ಗಳಷ್ಟೇ ಸೇಲ್ ಆಗಿತ್ತು. ಕೊನೆಯವರೆಗೂ ಸಿನಿಮಾದ ಒಟ್ಟು 500 ಟಿಕೆಟ್‌ಗಳಷ್ಟೇ ಸೇಲ್ ಆಗಿತ್ತು. ಲೈಫ್ ಟೈಮ್ ಸಿನಿಮಾ ಗಳಿಸಿದ್ದು 60 ಸಾವಿರ ರೂಪಾಯಿನ್ನಷ್ಟೇ.
ಇಷ್ಟು ಹೀನಾಯವಾಗಿ ಸೋಲಲು ಕಾರಣವೇನು? :
ಈ ಸಿನಿಮಾದ ಚಿತ್ರೀಕರಣ ಪೂರ್ಣವಾಗಿ ಶೂಟ್ ಆಗಿರಲಿಲ್ಲ. ಕ್ಲೈಮ್ಯಾಕ್ಸ್ ಸಂಪೂರ್ಣವಾಗಿರಲಿಲ್ಲ. ಹೀಗಾಗಿ ಸಿನಿಮಾ ಯಾವುದೇ ಪ್ರಚಾರವಿಲ್ಲದೆಯೇ ರಿಲೀಸ್ ಆಗಿತ್ತು. ಪರಿಣಾಮ ಸಿನಿಮಾ ನೋಡಿದ ಪ್ರೇಕ್ಷಕರು ನೆಗಟಿವ್ ರೆಸ್ಪಾನ್ಸ್ ನೀಡಿದ್ದರು. ಇದೇ ಕಾರಣದಿಂದ ಓಟಿಟಿಯ ಯಾವ ಫ್ಲಾಟ್ ಫಾರ್ಮ್ ಕೂಡ ಸಿನಿಮಾ ಖರೀದಿಗೆ ಮುಂದೆ ಬಂದಿಲ್ಲ. ಇದೇ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ಸಿನಿಮಾ ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಲು ಅಪ್ಲೋಡ್ ಮಾಡಲಾಗಿದೆ. 2.4 ಮಿಲಿಯನ್ ವೀಕ್ಷಣೆ ಕಂಡಿದೆ. ಅರ್ಜುನ್, ಭೂಮಿ ಅವರ ನಟನೆ ಬಗ್ಗೆ ಪ್ರಶಂಸಿಸಿ ಸಿನಿಮಾದ ಬಗ್ಗೆ ಭಾರೀ ಟೀಕೆಯ ಮಾತುಗಳನ್ನು ವೀಕ್ಷಕರು ಆಡಿದ್ದಾರೆ. ಈ ಸಿನಿಮಾ ಭಾರತೀಯ ಚಿತ್ರರಂಗದ ದೊಡ್ಡ ಫ್ಲಾಪ್ ಸಿನಿಮಾವಾಗಿದೆ.