Advertisement

ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ: ಡಿಕೆಶಿ ಗೆ ರೇಣುಕಾಚಾರ್ಯ ವ್ಯಂಗ್ಯ

03:18 PM Jun 11, 2020 | keerthan |

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಿಜೆಪಿಯ ಒಬ್ಬ ಕಾರ್ಯಕರ್ತನಿಗೆ ಸಮ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನೂ ಅಲ್ಲ ಎನ್ನುವಂತಹವರು. ಹಾಗಾಗಿ ಅವರ ಬಗ್ಗೆ ಪಕ್ಷ, ಸರ್ಕಾರಕ್ಕೆ ಯಾವ ಹೆದರಿಕೆಯೂ ಇಲ್ಲ. ಭಯವೂ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಲಾಕ್ ಡೌನ್ ನಿಯಮದ ಕಾರಣ ಅವರ ಪದಗ್ರಹಣ ಸಮಾರಂಭಕ್ಕೆ ಅನುಮತಿ ನೀಡಲಾಗಿಲ್ಲ ಹೊರತು ಅವರು ಅಧ್ಯಕ್ಷರಾಗುತ್ತಾರೆ. ಪಕ್ಷ, ಸರ್ಕಾರಕ್ಕೆ ಏನೋ ಆಗುತ್ತದೆ ಎಂಬ ಹೆದರಿಕೆಯಿಂದ ಅಲ್ಲ ಎಂದು ತಿಳಿಸಿದರು.

ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಸಾಮಾನ್ಯ ಕಾರ್ಯಕರ್ತ. ಎಂ.ಟಿ.ಬಿ. ನಾಗರಾಜ್, ಎಚ್.ಡಿ. ವಿಶ್ವನಾಥ್ ಟಿಕೆಟ್ ಬಗ್ಗೆ ಮಾತನಾಡೊಲ್ಲ. ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಬಿಜೆಪಿಯಲ್ಲಿ ವಲಸೆ, ಮೂಲ ಎಂಬ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಂದೇ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ಸಾಂವಿಧಾನಿಕ ಹುದ್ದೆ. ಕ್ಯಾಬಿನೆಟ್ ದರ್ಜೆಯ ಕಾರಣದಿಂದ ಸಹಜವಾಗಿ ಎಲ್ಲಾ ಸೌಲಭ್ಯ ನೀಡಲಾಗಿದೆ. ನಾನು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ಹುದ್ದೆ ಪಡೆದಿಲ್ಲ. ನಾನು ಓರ್ವ ಕೋವಿಡ್ ವಾರಿಯರ್ ಆಗಿ ಕೆಲಸ ಮಾಡಿದ್ದೇನೆ. ನಾನು ಎಂದಿಗೂ ಸಚಿವ ಸ್ಥಾನ ಕೇಳಿಯೇ ಇಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next