Advertisement
ಶನಿವಾರ ರಾತ್ರಿಯೇ 20ಕ್ಕೂ ಅಧಿಕ ಮಾಜಿ ಸಚಿವ, ಮಾಜಿ ಶಾಸಕರು ನಗರಕ್ಕೆ ಆಗಮಿಸಿದ್ದು ಸಭೆ ನಡೆಯುವ ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದಾರೆ. ಮಾಜಿ ಸಚಿವರಾದ ರೇಣುಕಾಚಾರ್ಯ ಹಾಗೂ ಎಸ್.ಎ. ರವೀಂದ್ರನಾಥ್ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿ (ಜ.14) ದೊಡ್ಡ ಸಮಾವೇಶ ಮಾಡಿ ಪಕ್ಷದೊಳಗಿನ ವಿರೋಧಿಗಳಿಗೆ ಶಕ್ತಿ ಪ್ರದರ್ಶಿಸಬೇಕು. ತನ್ಮೂಲಕ ವಿಜಯೇಂದ್ರರಿಗೆ ಬಲ ತುಂಬಬೇಕು ಎಂಬ ಉದ್ದೇಶದಿಂದಲೇ ಸಭೆ ಸೇರಲಾಗುತ್ತಿದೆ ಎಂಬ ಮಾಹಿತಿ ಆಪ್ತ ವಲಯದಲ್ಲಿ ಕೇಳಿ ಬಂದಿದೆ.
ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಆಗಿದ್ದು ಅವರ ನೇತೃತ್ವದಲ್ಲಿ 17 ಸಂಸದ ಸ್ಥಾನ ಗೆದ್ದಿದ್ದೇವೆ. ಮುಂದೆ ಪಕ್ಷವನ್ನ ಬಲಪಡಿಸಲು ಮಾಜಿ ಶಾಸಕರು ನಿರ್ಣಯಿಸಿ ಈ ಸಭೆ ನಡೆಸಿದ್ದೇವೆ. ಬೆಳಿಗ್ಗೆ 11 ಗಂಟೆಗೆ ಮುಖ್ಯ ಸಭೆ ನಡೆಸುತ್ತೇವೆ. ಸಭೆ ಬಳಿಕ ನಿರ್ಣಯ ತಿಳಿಸುತ್ತೇವೆ. ಯಾರ ಉಚ್ಚಾಟನೆ ಮಾಡುವಂತೆ ಒತ್ತಾಯಿಸಲು ಈ ಸಭೆ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
Related Articles
Advertisement
ಸಭೆಗಾಗಿ ನಗರಕ್ಕೆ ಬಂದ ಪ್ರಮುಖರು:ಎಂ.ಪಿ. ರೇಣುಕಾಚಾರ್ಯ, ಎಸ್.ವಿ. ರಾಮಚಂದ್ರಪ್ಪ , ಸಂಪಗಿ, ಬ್ಯಾಡಗಿ ವಿರೂಪಾಕ್ಷಪ್ಪ ಬಳ್ಳಾರಿ, ರಾಣಿಬೆನ್ನೂರು ಅರುಣಕುಮಾರ್ ಪೂಜಾರ, ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮೂರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೆಟ್ಗುಡ್ಡ, ಸುರೇಶ್ ಮಾರಿಹಾಳ್. ವಿಶ್ವನಾಥ್ ಪಟೇಲ್.