Advertisement
ಮೇಲಾಗಿ ಶೇಖ್ ಮೂಲತ ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮದವರು. ಎಂಟು ಮಕ್ಕಳಲ್ಲಿ ಕೊನೆಯವರು. ಕುಟುಂಬದಲ್ಲಿ ಇವರು ಒಬ್ಬರೇ ಶಿಕ್ಷಣ ಪಡೆದವರು ಎನ್ನುವ ಹೆಗ್ಗಳಿಕೆ ಬೇರೆ ಇದೆ.
ಅಮೆರಿಕಾ, ಶ್ರೀಲಂಕಾ, ನೇಪಾಳ, ಇಂಡೋನೇಷಿಯಾ ಹೀಗೆ ಸುಮಾರು 60 ದೇಶದ ನಾಣ್ಯಗಳ ಸಂಗ್ರಹ ಮಾಡಿದ್ದಾರೆ. 180ಕ್ಕೂ ಅಪರೂಪ ನೋಟುಗಳೂ ಇವರಲ್ಲಿವೆ. 200 ವರ್ಷದಷ್ಟು ಹಳೆಯ ಅಂದರೆ 1818 ಕಾಲದ ನಾಣ್ಯಗಳನ್ನು ಕೂಡಿಟ್ಟಿದ್ದಾ ರೆ. ನಮ್ಮ ದೇಶದ ನಯಾ ಪೈಸೆ, ಆಣೆಗಳು, ತೂತಿನ ನಾಣ್ಯಗಳು ಕೆನಡಾ ಮತ್ತು ನೇಪಾಳದ ಪ್ಲಾಸ್ಟಿಕ್ ನೋಟುಗಳು ಇವರಲ್ಲುಂಟು. 50 ದೇಶದ ಅಂಚೆ ಚೀಟಿ ಮತ್ತು ಜಗತ್ತಿನ ಅತೀ ವಿಶೇಷ ಚಿತ್ರಗಳನ್ನೂ ಸಂಗ್ರಹಿಸಿದ್ದಾ ರೆ. ವಿಜ್ಞಾನ ಮಾದರಿಗಳ ಪ್ರಯೋಗ :
ಶೇಖ್, ನಾಣ್ಯ ಸಂಗ್ರಹಣೆಯ ಜೊತೆಗೆ ಶಾಲೆಯಲ್ಲಿ ಹಲವು ವಿಜ್ಞಾನದ ಮಾದರಿ ತಯಾರಿಸಿ¨ªಾರೆ. ವಿದ್ಯಾರ್ಥಿಗಳಿಗೆ ರಾಜ್ಯದ ರಾಜಧಾನಿ ಹೆಸರನ್ನು ಸುಲಭವಾಗಿ ತಿಳಿಯಲು ಮ್ಯಾಜಿಕ… ಮ್ಯಾಚಿಂಗ್ ಬೋರ್ಡ್ ತಯಾರಿಸಿದ್ದಾರೆ. ಹೆಲಿಕಾಪ್ಟರ್ ಮಾದರಿ, ತಾಜ್ ಮಹಲ್, ಕೆಂಪುಕೋಟೆ, ತಮ್ಮ ಸ್ವಂತ ಶಾಲೆಯ ಕಟ್ಟಡ, ಗಾಂಧಿ ಚರಕ ಸೇರಿದಂತೆ ಹಲವು ಮಾದರಿ ತಯಾರಿಸಿದ್ದಾರೆ. ಟ್ಯಾಕ್ಟರ್ ಟ್ಯೂಬ, ದಪ್ಪ ತಂತಿ, ಬಳಸಿ ಎಸೆದ ಪ್ಲಾಸ್ಟಿಕ್ ಚಮಚ, ಚೆಂಡನ್ನು ಬಳಸಿ 15-8 ಅಡಿಯ ಡೈನೋಸಾರನ್ನು ತಯಾರಿಸಿದ್ದಾ ರೆ. ಇವೆಲ್ಲ ಮಾದರಿಗಳನ್ನು ಕೇವಲ 250 ರೂ.ಗಳಿಗಿಂತ ಕಡಿಮೆ ವೆಚ್ಚದಲ್ಲಿ ತಯಾರಿಸಿರುವುದು ವಿಶೇಷ.
Related Articles
Advertisement