ನವದೆಹಲಿ: ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಜುಲೈ 01ರಿಂದ ಮತ್ತಷ್ಟು ಇಳಿಕೆ ಮಾಡುವ ಮೂಲಕ ತೈಲ ಮಾರಾಟ ಕಂಪನಿಗಳು ಗ್ರಾಹಕರಿಗೆ ಭಾರೀ ನಿರಾಳತೆ ನೀಡಿದೆ. ಇಂದಿನಿಂದ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 198 ರೂಪಾಯಿಯಷ್ಟು ಇಳಿಕೆ ಮಾಡಿರುವುದಾಗಿ ತಿಳಿಸಿದೆ.
ಇದನ್ನೂ ಓದಿ:ಪ್ರವಾದಿ ವಿರುದ್ಧ ಹೇಳಿಕೆ: ನೂಪುರ್ ಶರ್ಮಾ ಬಹಿರಂಗವಾಗಿ ದೇಶದ ಕ್ಷಮೆಯಾಚಿಸಬೇಕು: ಸುಪ್ರೀಂ
ಇಂದಿನಿಂದ ವಾಣಿಜ್ಯ ಬಳಕೆಯ 19 ಕೆಜಿ ಪ್ರತಿ ಸಿಲಿಂಡರ್ ಬೆಲೆ 198ರೂಪಾಯಿಷ್ಟು ಇಳಿಕೆಯಾಗಿದ್ದು, ಇದರೊಂದಿಗೆ ಪ್ರತಿ ಸಿಲಿಂಡರ್ ಬೆಲೆ ಇದೀಗ 2021ರೂಪಾಯಿಗೆ ಇಳಿಕೆಯಾದಂತಾಗಿದೆ. ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಪ್ರತಿ ಸಿಲಿಂಡರ್ ಬೆಲೆ ಈ ಮೊದಲು 2,219 ರೂ. ಇದ್ದಿದ್ದು, ಈಗ 2,021 ರೂಪಾಯಿಗೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 19ಕೆಜಿ ವಾಣಿಜ್ಯ ಬಳಕೆ ಸಿಲಿಂಡರ್ ಗೆ 2,295 ರೂ. ಇದ್ದಿದ್ದು, ಈಗ 2,097 ರೂ.ಗೆ ಇಳಿಕೆಯಾಗಿದೆ. ಕೋಲ್ಕತಾದಲ್ಲಿ 2,322 ರೂಪಾಯಿಂದ 2,140 ರೂ.ಗೆ ಇಳಿಕೆಯಾಗಿದೆ. ಮುಂಬಯಿಯಲ್ಲಿ 2,171.50 ರೂಪಾಯಿಯಿಂದ 1,981 ರೂಪಾಯಿಗೆ ಇಳಿಕೆಯಾಗಿದೆ. ಚೆನ್ನೈನಲ್ಲಿ 2,373 ರೂಪಾಯಿಯಿಂದ 2,186 ರೂಪಾಯಿಗೆ ಇಳಿಕೆಯಾಗಿದೆ.
ಜೂನ್ 01ರಂದು ತೈಲ ಮಾರಾಟ ಕಂಪನಿ 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು 135 ರೂಪಾಯಿಯಷ್ಟು ಇಳಿಕೆ ಮಾಡಿತ್ತು. ಮೇ 19ರಂದು ದೇಶದಲ್ಲಿ ಮನೆ ಬಳಕೆ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಲಾಗಿತ್ತು.