Advertisement

ರೈಲ್ವೆ ನಿಲ್ದಾಣದಲ್ಲಿ ನ್ಯಾಪ್ಕಿನ್‌ ಮಾರಾಟ

06:00 AM May 27, 2018 | |

ಹೊಸದಿಲ್ಲಿ: ರೈಲು ನಿಲ್ದಾಣಗಳ ಒಳಗೆ ಹಾಗೂ ಹೊರಗೆ ಇರುವಂಥ ಶೌಚಾಲಯಗಳಲ್ಲಿ ಹೊರಗೆ ಕಾಂಡೋಮ್‌ಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದರಿಂದ ರೈಲ್ವೆ ಪ್ರಯಾಣಿಕರ ಜೊತೆಗೆ, ನಿಲ್ದಾಣದ ಸುತ್ತಲಿನ ಜನರಿಗೂ ಅನುಕೂಲ ಕಲ್ಪಿಸಲಿದೆ. ಈ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿ ಅನುಮೋದಿಸಿದೆ.

Advertisement

ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಮೂಲಸೌಕರ್ಯದ ಕೊರತೆಯಿಂದಾಗಿ ಸಮೀಪದ ಸ್ಲಂ ಹಾಗೂ ಇತರ ಭಾಗಗಳ ಜನರು ಬಯಲು ಶೌಚ ಮಾಡುವುದು ಹಾಗೂ ಸ್ಟೇಷನ್‌ ವ್ಯಾಪ್ತಿಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ಕಂಡುಬಂದಿದೆ. ಇದು ನೈರ್ಮಲ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕಿದೆ. ಹೀಗಾಗಿ ರೈಲು ನಿಲ್ದಾಣದ ಸಮೀಪದ ಪ್ರದೇಶ ಗಳಲ್ಲಿ ಶೌಚಾಲಯ ನಿರ್ಮಿಸಲೂ ನಿರ್ಧರಿಸಲಾಗಿದೆ. 

ಪ್ರತಿ ರೈಲ್ವೆ ನಿಲ್ದಾಣದಲ್ಲೂ ಕಟ್ಟಡದ ಒಳಗೆ ಮತ್ತು ಹೊರಗೆ ಶೌಚಾಲಯವನ್ನು ನಿರ್ಮಿಸಲಾಗುತ್ತದೆ. ಇದಕ್ಕೆ ಅಗತ್ಯವಿರುವ ಮೊತ್ತವನ್ನು ಸಿಎಸ್‌ಆರ್‌ ನಿಧಿಯಿಂದ ಒದಗಿಸಿಕೊಳ್ಳಲಾಗುತ್ತದೆ ಎಂದು ಮಂಡಳಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next