Advertisement
ಈಗ ಇಂಥದೊಂದು ಬದಲಾವಣೆ ಹೆಚ್ಚಿದೆ. ಅಲ್ಲಲ್ಲಿ ಈ ಥರದ ಬೆಳವಣಿಗೆಗಳು ನಮ್ಮ ಕಣ್ಣಿಗೆ ಬೀಳುತ್ತಿವೆ. ದೊಡ್ಡ ದೊಡ್ಡ ನಗರಗಳಲ್ಲಿ ಸಾಮಾನ್ಯವೇ ಆದರೂ ಪ್ರೀತಿ, ಅಪ್ಪುಗೆ, ಮುತ್ತು ಎಲ್ಲಿ ಮಾಡಿದರೂ ಒಂದೇ! ನೋಡುವ ಕಣ್ಣುಗಳೂ ಒಂದೇ. ಅಷ್ಟಕ್ಕೂ ಎಲ್ಲರೂ ಮನುಷ್ಯರೇ ತಾನೆ? ಅಲ್ಲಿ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸದೆ ಮುಂದೆ ಹೋದರೂ ಮನಸ್ಸಿನಲ್ಲೊಂದು ಮರಕುಟಿಗ ಕೆಲಸ ಮಾಡತೊಡಗುತ್ತದೆ. ಅದರಾಚೆಯ ಊರುಗಳಲ್ಲಿ ನೋಡುವ, ಮಾತನಾಡುವ ಕ್ರಿಯೆಗಳು ಹೆಚ್ಚೇ ಬಿಡಿ!
ಹೌದು, ಇದನ್ನು Public Display of Affectio ಅಂತಾರೆ. ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ಪ್ರೀತಿಯನ್ನು ಪ್ರದರ್ಶಿಸುವುದು. ಬಸ್, ಪಾರ್ಕ್, ಸಿನೆಮಾ ಹಾಲ್, ಟ್ರೈನ್, ಹೋಟೆಲ್ ಮುಂತಾದೆಡೆ ಇವೆಲ್ಲಾ ನಿಮಗೆ ಕಾಣ ಸಿಗುತ್ತವೆ. ಇತ್ತೀಚೆಗೆ ಈ ಕಈಅಯನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಅಭ್ಯಸಿಸುವ ಪ್ರಯತ್ನಗಳು ಆಗಿವೆ. ಕೊನೆಕೊನೆಗೆ ಅದೊಂದು ಗೀಳಾಗುವ ಅಪಾಯವಿದೆ ಅನ್ನುತ್ತಾರೆ ತಜ್ಞರು. ಇದಕ್ಕೆ ಜಗತ್ತಿನ ಬಹುತೇಕ ದೇಶಗಳಲ್ಲಿ ಅನುಮತಿ ಇದೆ. ಅಲ್ಲೆಲ್ಲಾ ಇದು ಖುಲ್ಲಂ ಖುಲ್ಲಂ. ಆದರೆ ಭಾರತದಲ್ಲಿ ಅದಕ್ಕೆ ಅವಕಾಶವಿಲ್ಲ. ಕಾನೂನು ಅದನ್ನು ಮಾನ್ಯ ಮಾಡಿಲ್ಲ. ಅಂಥದ್ದು ಈ ದೇಶದ ಸಂಸ್ಕೃತಿಯಲ್ಲಿ ಇಲ್ಲ ಅನ್ನುತ್ತದೆ ಕಾನೂನು. ಅದು ಮುಂದೆ ಪಡೆದುಕೊಳ್ಳಬಹುದಾದ ಅಪಾಯದ ಬಗ್ಗೆ ಕಾನೂನಿಗೆ ಒಂದು ಕಾಳಜಿ ಇದೆ!
Related Articles
ಕಾರಣಗಳೇನು ಕಮ್ಮಿ ಇಲ್ಲ. ಎಂದಿಗಿಂತ ಈಗ ಹರೆಯಕ್ಕೆ ಪಾಶ್ಚಾತ್ಯದ ಲೇಪನ ಹೆಚ್ಚಿದೆ. ಯೌವನ ಅನುಕರಣೆಗೆ ಬಿದ್ದಿದೆ. ಈಗ ಎಲ್ಲವೂ ಬೆರಳ ತುದಿಯಲ್ಲಿ ಲಭ್ಯವಿವೆ. ಯೌವನದ ಕಾಲವೇ ಒಂದು ಹುಚ್ಚುತನದ್ದು. ಅದು ಸದಾ ಪ್ರಯೋಗಕ್ಕೆ ಒಡ್ಡಿಕೊಳ್ಳಲು ಕಾಯುತ್ತಿರುತ್ತದೆ.
Advertisement
ಸಾಲದು ಎಂಬಂತೆ ದೃಶ್ಯ ಮಾಧ್ಯಮಗಳು ಅದನ್ನು ಚುರುಕುಗೊಳಿಸಿ ನಾಗಾಲೋಟಕ್ಕೆ ಹಚ್ಚಿವೆ. ಟಿವಿಯಲ್ಲಿ, ಸಿನಿಮಾಗಳಲ್ಲಿ ಅದನ್ನು ವೈಭವೀಕರಿಸಿ ತೋರಿಸುವುದರಿಂದ ಜನತೆ ಆ ಕಡೆ ಹೆಚ್ಚು ಆಕರ್ಷಿತವಾಗುತ್ತಿದೆ. ಯುವ ಜನರನ್ನು ಉತ್ತೇಜಿಸಲು ತರುತ್ತಿರುವ ಸಿನೆಮಾ ಇತ್ಯಾದಿಗಳಲ್ಲಿ ಪಾಶ್ಚಾತ್ಯ ಆಚರಣೆಗಳು ಬಹುಪಾಲು ಸೇರಿಕೊಂಡಿವೆ. ಇಲ್ಲಿನವರಿಗೆ ರಂಗಾಗಿ ಕಾಣುವುದರಿಂದ ವಿಶೇಷವೆನಿಸುತ್ತದೆ.
ಇದು ತರವೇ!?ಕಾಲ ಬದಲಾಗಿಲ್ಲವೆ? ಇದನ್ನು ಕೂಡ ಬದಲಾವಣೆ ಅಂತ ಒಪ್ಪಿಕೊಂಡರಾಯ್ತು. ಇದು ಮನುಷ್ಯ ಸಹಜ ಅನ್ನುವವರಿದ್ದಾರೆ. ಬೇಡವೇ ಬೇಡ ಅನ್ನುವವರೂ ಇದ್ದಾರೆ. ಇದ್ಯಾವುದಕ್ಕೂ ಸೊಪ್ಪು ಹಾಕದೆ, ಪ್ರೀತಿ ಪ್ರದರ್ಶನ’ ಸಾಗಿಯೇ ಇದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಸಭ್ಯ ಹಿನ್ನೆಲೆಯಲ್ಲಿ ಬಂದ ಸಮಾಜ ಇಂಥ ನಡವಳಿಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾವಣೆಯಾದರೂ ಇನ್ನೂ ಆ ಮಟ್ಟಿಗೆ ಸಮಾಜ ಪೂರಕವಾಗಿಲ್ಲ. ಆದರೆ ಮುಂದಿನ ಬದಲಾವಣೆಗಳನ್ನು ಬಲ್ಲವರ್ಯಾರು!? ಕಾನೂನು ಏನು ಹೇಳುತ್ತದೆ?
ಕಈಅ ಗೆ ಕಾನೂನಿನಲ್ಲಿ ಅವಕಾಶವಿಲ್ಲ. ಭಾರತೀಯ ದಂಡಕಾಯ್ದೆ ಸೆಕ್ಷನ್ 294 ಪ್ರಕಾರ ಇಂತಹ ಪ್ರಯತ್ನಗಳಿಗೆ ಮೂರು ತಿಂಗಳು ಜೈಲು ಮತ್ತು ದಂಡವಿದೆ. ನಿಮಗೆ ನೆನಪಿದೆಯಾ? 2007 ರಲ್ಲಿ ದೆಹಲಿಯಲ್ಲಾದ ಘಟನೆಯಿದು. ಏಡ್ಸ್ ಜಾಗೃತಿಯ ಕಾರ್ಯಕ್ರಮದಲ್ಲಿ ನಟ ರಿಚರ್ಡ್ ಗೇರ್, ನಟಿ ಶಿಲ್ಪಾ ಶೆಟ್ಟಿಗೆ ತೆರೆದ ವೇದಿಕೆಯ ಮೇಲೆಯೆ ಚುಂಬಿಸಿದ. ಈ ಸಂಬಂಧವಾಗಿ ವಿರೋಧಗಳಾದವು. ನ್ಯಾಯಾಲಯ ಅವನ ಮೇಲೆ ಬಂಧನದ ವಾರೆಂಟ್ ಜಾರಿಗೊಳಿಸಿತು. ಸದಾಶಿವ್ ಸೊರಟೂರು