Advertisement
ಪ್ರೀತಿ-ಪ್ರೇಮಗಳ ಹೃನ್ಮನಪೂರ್ವಕ, ಹೃನ್ಮನ ಬೆಸೆಯುವ ಅಸಂಖ್ಯಾತ ಪ್ರಸಂಗ-
Related Articles
Advertisement
ಭಗವಂತನ ವರಪ್ರಸಾದ ಪಡೆಯುವಲ್ಲಿ ಭಗವಂತನಲ್ಲಿ ನಾವಿಡುವ ಪ್ರೀತಿ-ಪ್ರೇಮ ಗಣನೀಯವಾಗಿ ಪರಿಗಣನೆಗೆ ಬರುತ್ತದೆ.
ಪ್ರೀತಿ-ಪ್ರೇಮ ಅಮರತ್ವದ ಪ್ರತೀಕ, ಹೊಂದಾಣಿಕೆಯ ದ್ಯೋತಕ, ನಂಬಿಕೆಯ ಮೂಲಾಧಾರ, ಸುಮನಸ್ಸಿನ ಸಂಕೇತ ವಾಗಿದ್ದು ಸ್ವಸ್ಥ ಸಮಾಜದ ಹೆಗ್ಗುರುತಾಗಿದೆ. ನಮ್ಮ ಬದುಕಿನ ಹುಟ್ಟಿನಿಂದ ಬಾಲ್ಯ, ಶೈಶಾವಸ್ಥೆ, ಯೌವ್ವನ, ಮುದಿತನದ ವಿವಿಧ ಮಜಲುಗಳಲ್ಲಿನ ಜೀವನದಲ್ಲಿ ಪ್ರೀತಿ-ಪ್ರೇಮ ಅನವರತ ರೂಪ ತಾಳಿ ಹಾಸು ಹೊಕ್ಕಾದಲ್ಲಿ ಬಾಳಿನ ದಿವ್ಯತೆ, ಭವ್ಯತೆ, ಆನಂದವೇ ಬೇರೆ ರೀತಿಯದ್ದು. ದೆೃವ ಪ್ರೇಮದಿಂದ ತಂದೆ -ತಾಯಿ, ಹಿರಿ ಯರು, ಕುಟುಂಬ, ಸಮಾಜ, ಗುರು, ಪ್ರಕೃತಿ, ಪ್ರಾಣಿ-ಪಕ್ಷಿ, ದೇಶ… ಪ್ರೇಮಗಳು ರಕ್ತಗತವಾದರೆ ಬಾಳಿನ ವ್ಯಕ್ತಿತ್ವ ಸದಾ ಭೂಷಣ ಪ್ರಾಯವಾಗಿ ಕಂಗೊಳಿಸುವುದು. ಸಾಧನೆಗೆ ಪ್ರೇರಣಾಸ್ರೋತವಾಗುವುದು.
ದ್ವೇಷ, ಕೋಪ-ತಾಪ, ವೆೃಮನಸ್ಸು, ಮತ್ಸರ,ವಿರಸ, ಬೇಸರ, ಭಿನ್ನಾಭಿಪ್ರಾಯ ಇತ್ಯಾದಿ ಗಳ ಅಂಕುಶಕ್ಕೆ ಪ್ರೀತಿ-ಪ್ರೇಮವೇ ರಾಮ ಬಾಣ. ದೆೃಹಿಕ ಆರೋಗ್ಯಕ್ಕೂ ಇವು ದಿವ್ಯ ಔಷಧ ಎಂಬುದು ಸಾಬೀತಾಗಿದೆ.
ಪಂಚಭೂತಗಳು ಸಂಗಮಿಸಿರುವ ಈ ಜಗತ್ತು ಎಂಬತ್ತು ಲಕ್ಷ ಜೀವರಾಶಿಗೂ ಸೇರಿದ್ದು. ಎಲ್ಲರಿಗೂ ಬದುಕುವ ಹಕ್ಕು, ರೀತಿ-ನೀತಿಯನ್ನು ಪ್ರಕೃತಿ ದಯಪಾಲಿಸಿದೆ. ಈ ರೀತಿ-ನೀತಿ ಪ್ರಕಾರ ಬದುಕಿದಲ್ಲಿ ಬಾಳು ಸುಗಮವಾಗುವುದು. ಆದ ಕಾರಣ ಮಾನವ-ಮಾನವರೊಂದಿಗೆ ಮಾತ್ರವಲ್ಲ ಪ್ರಕೃತಿಯೊಡಗೂಡಿ ಸಕಲ ಚರಾಚರಗಳ ಬದುಕಿಗೂ ಪ್ರೇರಕರಾಗಬೇಕು. ಸಮಗ್ರ ಪ್ರಕೃತಿಯ ಪ್ರೀತಿ- ಪ್ರೇಮ ಮಾನವನ ಬದುಕಿನ ಅವಿಚ್ಛಿನ್ನ ಭಾಗವಾಗಬೇಕು. ಹೀಗಾದಲ್ಲಿ ಮಾತ್ರ ಪ್ರಕೃತಿ ಪುರುಷ ಪ್ರೇಮ ಮುಂದುವರಿಯುವುದು.
ಇಂದು ಪ್ರಕೃತಿಯೊಂದಿಗೆ ಮಾನವನ ದುರಾಸೆ, ದುರಹಂಕಾರದ ದುಂಡಾ ವರ್ತನೆಯ ಅಟ್ಟಹಾಸ, ಬರ್ಬರತೆ ಯಿಂದಾಗಿಯೇ ಪ್ರಕೃತಿ ಮಾತೆ ಮುನಿದು ವಿವಿಧ ಅವತಾರ ತಾಳುತ್ತಿ¨ªಾಳೆ ಎಂಬ ಬೀಭತ್ಸ ಚಿತ್ರಣ ನಮ್ಮೆಲ್ಲರ ಮುಂದೆ ಪ್ರಸ್ತುತವಾಗುತ್ತಿದೆ.
ಇನ್ನು ನಮ್ಮ ಸಾಮಾಜಿಕ ಜೀವನದ ಎಲ್ಲ ದುಗುಡ, ದುಮ್ಮಾನಗಳಿಗೆ ಪ್ರಧಾನ ಕಾರಣವೇ ಪ್ರೀತಿ-ಪ್ರೇಮದ ಕೊರತೆ. ಪ್ರೀತಿ ಜಗತ್ತನ್ನೇ ಗೆಲ್ಲುವ ಸಾಮರ್ಥ್ಯ ಹೊಂದಿರುವ ಅಮೂಲ್ಯ ಅಸ್ತ್ರ. ಪ್ರೀತಿ- ಪ್ರೇಮವನ್ನು ಹೃನ್ಮನದಲ್ಲಿ ಅವಿಭಾಜ್ಯವನ್ನಾಗಿಸಿ ಬಾಳಿನ ನಕಾರಾತ್ಮಕತೆಯನ್ನು ವ್ಯರ್ಜಿಸಿ ಬಾಳಬಂಡಿಯಲ್ಲಿ ಪಯಣಿಸಬೇಕು. ಈ ಸುಮಧುರ ಪಯಣ ಪ್ರತಿಯೋರ್ವರ ಬಾಳಿನಲ್ಲಿ ಸುವಾಸನೆ ಬೀರು ವುದು ನಿಸ್ಸಂಶಯ. ಈ ಪ್ರಯಾಣದಲ್ಲಿ ನಾವು ಭಾಗಿಯಾಗಬೇಕಾಗಿರುವುದು ನಮ್ಮ ಆದ್ಯತೆಯಾಗಬೇಕು.
- ಸಂದೀಪ್ ನಾಯಕ್ ಸುಜೀರ್, ಮಂಗಳೂರು