Advertisement

Love Reddy Movie Review: ಕಾಡುವ ಪ್ರೀತಿ ಹೊಸ ರೀತಿ

05:07 PM Nov 23, 2024 | Team Udayavani |

ಪ್ರೇಮಕಥೆಗಳಿಗಿರುವ ಮೂಲಗುಣವೆಂದರೆ ಎಲ್ಲೋ ಒಂದು ಕಡೆ ಅದು ಪ್ರೇಕ್ಷಕರ ಹೃದಯದ ಬಾಗಿಲನ್ನು ಬೇಗನೆ ಬಡಿಯುತ್ತವೆ. ಬೇಕೋ ಬೇಡವೋ ಕೆಲವು ದೃಶ್ಯಗಳಂತೂ ಕಾಡುತ್ತವೆ. “ಲವ್‌ ರೆಡ್ಡಿ’ ಕೂಡಾ ಒಂದು ಕಲುಕುವ ಪ್ರೇಮಕಥೆ. ದೃಶ್ಯದಿಂದ ದೃಶ್ಯಕ್ಕೆ ಈ ಚಿತ್ರ ಪ್ರೇಕ್ಷಕರನ್ನು ಆವರಿಸುತ್ತಾ ಹೋಗುವುದು ಚಿತ್ರದ ಪ್ಲಸ್‌.

Advertisement

ಸಾಮಾನ್ಯವಾಗಿ ಎಲ್ಲಾ ಚಿತ್ರಗಳು ಕಥೆಯನ್ನು ಟ್ರ್ಯಾಕ್‌ಗೆ ತರಲು ಮೊದಲರ್ಧವನ್ನು ಬಳಸಿಕೊಳ್ಳುತ್ತವೆ. ಇಲ್ಲೂ ಅಷ್ಟೇ ಹುಡುಗ, ಹುಡುಗಿ, ಬಸ್ಸು, ಪ್ರೀತಿ, ಪ್ರೇಮ, ಕುಟುಂಬ ಹೀಗೆ ಸಾಗುವಲ್ಲಿಗೆ ಫ‌ಸ್ಟ್‌ಹಾಫ್ ಮುಗಿದಿರುತ್ತದೆ. ಆದರೆ, ಸಿನಿಮಾದ ನಿಜವಾದ ಅಚ್ಚರಿ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಡೀ ಸಿನಿಮಾ ಹೊಸ ರೂಪ ಪಡೆದುಕೊಳ್ಳುತ್ತದೆ. ಆ ಮಟ್ಟಿನ ಟ್ವಿಸ್ಟ್‌ ಇಲ್ಲಿ ಸಿಗುತ್ತದೆ.

ತಿರುವು, ಆತಂಕ, ಮೌನ… ಎಲ್ಲವೂ ಇಲ್ಲಿ ಪ್ರಾಪ್ತವಾಗಿದೆ. ಇದು ಆಂಧ್ರ-ಕರ್ನಾಟಕ ಗಡಿಭಾಗದ ಕಥೆ. ಮೂಲ ಚಿತ್ರ ತೆಲುಗಿನಲ್ಲಿ ಬಿಡುಗಡೆಯಾಗಿ ಸೈ ಎನಿಸಿಕೊಂಡಿದೆ. ಆದರೆ, ಚಿತ್ರದೊಳಗೆ ಬಹುತೇಕ ಕನ್ನಡಿಗರೇ ನಟಿಸಿದ್ದಾರೆ. ಚಿತ್ರದಲ್ಲಿ ಬಳಸಿರುವ ಕನ್ನಡ ಈ ಕಥೆಗೆ ತುಂಬಾ ಸೂಕ್ತವಾಗಿದೆ.

ನಾಯಕ ತ್ರದ ನಿರ್ದೇಶಕ. ಚಿತ್ರದಲ್ಲಿ ಅಂಜನ್‌ ರಾಮಚಂದ್ರ ಹಾಗೂ ಶ್ರಾವಣಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಎನ್‌.ಟಿ. ರಾಮಸ್ವಾಮಿ, ಜ್ಯೋತಿ ಮದನ್‌ ಸೇರಿದಂತೆ ಇತರರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next