Advertisement

ಹಜ್‌ ಯಾತ್ರೆಗೆ ಲಾಟರಿ  6701 ಮಂದಿ ಆಯ್ಕೆ

01:00 AM Jan 18, 2019 | Team Udayavani |

ಬೆಂಗಳೂರು: ಭಾರತೀಯ ಹಜ್‌ ಸಮಿತಿಯು ಪ್ರಸಕ್ತ ಸಾಲಿನ ಹಜ್‌ಯಾತ್ರೆಗಾಗಿ ರಾಜ್ಯದಿಂದ 6701 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಹಜ್‌ಯಾತ್ರಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಪ್ರಕ್ರಿಯೆಗೆ ಬುಧವಾರ ಚಾಲನೆ ನೀಡಲಾಯಿತು.

Advertisement

ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್‌ ಸಚಿವ ಜಮೀರ್‌ ಅಹಮದ್‌ ಕಾರ್ಯಕ್ರಮದಲ್ಲಿ ಮಾತನಾಡಿ, ಸೌದಿ ಅರೇಬಿಯಾ ಸರ್ಕಾರವು ಭಾರತೀಯ ಹಜ್‌ ಸಮಿತಿಗೆ 1,23,900 ಮಂದಿಯ ಕೋಟಾ ಹಂಚಿಕೆ ಮಾಡಿದೆ. 2011ರ ಜನಗಣತಿಯನ್ನು ಆಧರಿಸಿ ಮುಸ್ಲಿಮರ ಜನಸಂಖ್ಯೆಗೆ ಅನುಗುಣವಾಗಿ ವಿವಿಧ ರಾಜ್ಯಗಳಿಗೆ ಕೋಟಾ ನಿಗದಿ ಮಾಡಲಾಗಿದ್ದು, ಕರ್ನಾಟಕಕ್ಕೆ 6701 ಮಂದಿಯ ಕೋಟಾ ನಿಗದಿ ಮಾಡಿದೆ ಎಂದರು.

ಇಂದು ಲಾಟರಿ ಮೂಲಕ 5884 ಮಂದಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಹಜ್‌ ಸಮಿತಿಯು 13,995 ಅರ್ಜಿಗಳನ್ನು ಸ್ವೀಕರಿಸಿದ್ದು, ಈ ಪೈಕಿ 7298 ಪುರುಷರು, 6685 ಮಹಿಳೆಯರು ಹಾಗೂ 12 ಮಕ್ಕಳು ಅರ್ಜಿ ಸಲ್ಲಿಸಿದ್ದರು ಎಂದು ಹೇಳಿದರು.

ಲಾಟರಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗದವರು ಯಾವುದೇ ಕಾರಣಕ್ಕೂ ಯಾರ ಮೂಲಕವೂ ಒತ್ತಡ ಹೇರುವ ಪ್ರಯತ್ನವನ್ನು ಮಾಡಬೇಡಿ. ಆನ್‌ಲೈನ್‌ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next