Advertisement

ಲಾರ್ಡ್ಸ್‌ ಟೆಸ್ಟ್‌: ಇಂಗ್ಲೆಂಡ್‌ ಗೆಲುವಿಗೆ 277 ರನ್‌ ಸವಾಲು

11:12 PM Jun 04, 2022 | Team Udayavani |

ಲಂಡನ್‌: ಇಲ್ಲಿನ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಜಯ ಸಾಧಿಸಲು ಇಂಗ್ಲೆಂಡ್‌ ತಂಡವು 277 ರನ್‌ ತೆಗೆಯುವ ಸವಾಲನ್ನು ಪಡೆದಿದೆ.

Advertisement

ಮೂರನೇ ದಿನದಾಟ ಸಾಗುತ್ತಿದ್ದು ಇಂಗ್ಲೆಂಡ್‌ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಕಳೆದುಕೊಂಡಿದ್ದು 164 ರನ್‌ ಗಳಿಸಿದೆ. 34 ರನ್‌ ಗಳಿಸಿದ ಜೋ ರೂಟ್‌ ಮತ್ತು ಬೆನ್‌ ಫೋಕ್ಸ್‌ ಆಡುತ್ತಿದ್ದಾರೆ.

ಈ ಮೊದಲು ಇಂಗ್ಲೆಂಡಿನ 141 ರನ್‌ ಉತ್ತರವಾಗಿ ದ್ವಿತೀಯ ಇನ್ನಿಂಗ್ಸ್‌ ಆಡಿದ್ದ ನ್ಯೂಜಿಲ್ಯಾಂಡ್‌ ಡ್ಯಾರಿಲ್‌ ಮಿಚೆಲ್‌ ಅವರ ಶತಕ ಮತ್ತು ಟಾಮ್‌ ಬ್ಲಿಂಡೆಲ್‌ ಅವರ 96 ರನ್‌ ನೆರವಿನಿಂದ 285 ರನ್‌ ಗಳಿಸಿ ಆಲೌಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next