ಮುಂಬಯಿ: ವೃದ್ಧ ಪ್ರಯಾಣಿಕರೊಬ್ಬರು ವ್ಹಿಲ್ ಚೇರ್ ಗಾಗಿ ಕಾದು ಕಾದು ಸುಸ್ತಾಗಿ ಬಳಿಕ ನಡೆದುಕೊಂಡು ಹೋಗಲು ಹೋಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಮುಂಬಯಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಏರ್ ಇಂಡಿಯಾ ವಿಮಾನದಲ್ಲಿ ನ್ಯೂಯಾರ್ಕ್ ನಿಂದ ಮುಂಬೈಗೆ ಬಂದಿಳಿದ ವೃದ್ಧ ದಂಪತಿ, ವ್ಹಿಲ್ ಚೇರ್ ಗಾಗಿ ಬೇಡಿಕೆ ಇಟ್ಟಿದ್ದಾರೆ ಆದರೆ ವ್ಹಿಲ್ ಚೇರ್ ತರಲು ಸಿಬ್ಬಂದಿ ತಡ ಮಾಡಿದ್ದಾನೆ ಇದರಿಂದ ವಿಮಾನ ಕೈ ತಪ್ಪುತ್ತೆ ಎಂಬ ಭಯದಿಂದ ವೃದ್ಧ ದಂಪತಿ ನಡೆದುಕೊಂಡು ತಮ್ಮ ಎಮಿಗ್ರೇಷನ್ ಪ್ರಕ್ರಿಯೆ ಮುಗಿಸಲು ಹೋಗಿದ್ದಾರೆ ಈ ವೇಳೆ ವೃದ್ಧ ಕುಸಿದು ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸಿಬಂದಿಗಳು ಅವರನ್ನು ಎಬ್ಬಿಸಿ ವಿಮಾನ ನಿಲ್ದಾಣದಲ್ಲಿದ್ದ ವೈದ್ಯರ ಬಳಿ ಪರಿಶೀಲಿಸಿದ್ದಾರೆ ಈ ವೇಳೆ ವ್ಯಕ್ತಿಯು ಉಸಿರಾಡುತ್ತಿರಲಿಲ್ಲ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದ ವೇಳೆ ವ್ಯಕ್ತಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಘಟನೆ ಫೆಬ್ರವರಿ 12 ರಂದು ಸಂಭವಿಸಿದ್ದು ಎನ್ನಲಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ವಿಮಾನಯಾನ ಸಂಸ್ಥೆಯ ವಕ್ತಾರರು ಪ್ರಯಾಣಿಕನಿಗೆ 80 ವರ್ಷಕ್ಕಿಂತ ಮೇಲ್ಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅಲ್ಲದೆ ದಂಪತಿ ಗಾಲಿ ಕುರ್ಚಿಗೆ ಬೇಡಿಕೆ ಇಟ್ಟಿದ್ದರು ಆದರೆ ಗಾಲಿ ಕುರ್ಚಿ ಖಾಲಿ ಇರದ ಕಾರಣ ಸ್ವಲ್ಪ ಹೊತ್ತು ಕಾಯಲು ಹೇಳಿದ್ದಾರೆ ಆದರೆ ದಂಪತಿ ಸ್ವಲ್ಪ ಹೊತ್ತು ಕಾದು ಗಾಲಿ ಕುರ್ಚಿ ಸಿಗದ ಕಾರಣ ತನ್ನ ಸಂಗಾತಿಯ ಜೊತೆ ನಡೆದುಕೊಂಡು ಹೋಗಿದ್ದಾಗ ದುರದೃಷ್ಟಕರ ಕುಸಿದು ಬಿದ್ದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಸಂತ್ರಸ್ತರ ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ನೆರವನ್ನು ನೀಡುತ್ತಿದೆ ಎಂದು ಏರ್ ಇಂಡಿಯಾ ತಿಳಿಸಿದೆ ಮತ್ತು ವ್ಹಿಲ್ ಚೇರ್ ಸಹಾಯವನ್ನು ಮುಂಗಡ ಕಾಯ್ದಿರಿಸುವ ಎಲ್ಲಾ ಪ್ರಯಾಣಿಕರಿಗೆ ಸಹಾಯವನ್ನು ನೀಡುವ ಭರವಸೆಯನ್ನು ನೀಡಿದರು.
ಇದನ್ನೂಓದಿ: INDvsENG; ಟೆಸ್ಟ್ ಕ್ರಿಕೆಟ್ ನಲ್ಲಿ 500ನೇ ವಿಕೆಟ್ ಪಡೆದ ರವಿಚಂದ್ರನ್ ಅಶ್ವಿನ್