Advertisement

ಲಾಕ್‌ಡೌನ್‌ ಸಂಕಷ್ಟ; ಆಸ್ತಿ ತೆರಿಗೆ ಹೆಚ್ಚಳಕ್ಕೆ ಜನಜಾಗೃತಿ ವೇದಿಕೆ ವಿರೋಧ

10:38 AM May 29, 2020 | Suhan S |

ಬಾಗಲಕೋಟೆ: ಸ್ವಯಂ ಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್‌) ಪದ್ಧತಿ ಅನುಸಾರ ಶೇ. 5ರ ರಿಯಾಯಿತಿ ಸಹಿತ ತೆರಿಗೆ ಪಾವತಿ ದಿನಾಂಕವನ್ನು ಪೌರಾಡಳಿತ ಇಲಾಖೆ ಮೇ 31ರವರೆಗೆ ವಿಸ್ತರಿಸಿದ್ದು, ಅದನ್ನು ಡಿಸೆಂಬರ್‌ 31ರವರೆಗೆ ವಿಸ್ತರಿಸುವಂತೆ ಹುನಗುಂದದ ನಾಗರಿಕ ಸೇವಾ ಸಮಿತಿ ಹಾಗೂ ಇಳಕಲ್ಲದ ಜನ ಜಾಗೃತಿ ವೇದಿಕೆ ಒತ್ತಾಯಿಸಿವೆ.

Advertisement

ಎರಡೂ ಸಮಿತಿಗಳ ಪದಾಧಿಕಾರಿಗಳು ಗುರುವಾರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ಆಸ್ತಿ ತೆರಿಗೆ ಹೆಚ್ಚಳದ ನಿರ್ಧಾರವನ್ನು ಸರ್ಕಾರ 1ನೇ ಹಂತದ ಲಾಕ್‌ಡೌನ್‌ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡಿತ್ತು. ಕೋವಿಡ್ ಭೀಕರತೆ ದಿನೆ ದಿನೇ ಹೆಚ್ಚಾಗುತ್ತಿದ್ದು, ಮುಂದೇನೆಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ. ಇದರಿಂದ ಎಲ್ಲ ವರ್ಗಗಳ ಜನರು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಈ ಹಂತದಲ್ಲಿ ಸರ್ಕಾರ ತೆರಿಗೆದಾರರಿಗೆ ಸೂಕ್ತ ರಿಯಾಯ್ತಿ ಕೊಡಬೇಕು ಎಂದು ಆಗ್ರಹಿಸಿದರು.

ಇಳಕಲ್‌ ನಗರಸಭೆ ಶೇ. 20 ಮತ್ತು ಹುನಗುಂದ ಪುರಸಭೆ ಶೇ. 25ತೆರಿಗೆ ಹೆಚ್ಚಳ ಈಗಾಗಲೇ ಪ್ರಕಟಿಸಿವೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಜನರಿಗೆ ಮತ್ತಷ್ಟು ಹೊರೆಯಾಗಿದೆ. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, 2020-2021ನೇ ಆರ್ಥಿಕ ವರ್ಷಕ್ಕೆ ತೆರಿಗೆ ಹೆಚ್ಚಳದ ಕ್ರಮ ಕೈಬಿಡಬೇಕು. ಈ ವರ್ಷದ ಆಸ್ತಿ ತೆರಿಗೆ ಪಾವತಿಗಾಗಿ ಡಿ.31ರವರೆಗೆ ವಿಸ್ತರಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಸಂಘಟನೆಗಳ ಪ್ರಮುಖರಾದ ನಾಗರಾಜ ಹೊಂಗಲ್‌, ವಕೀಲ ವಿ.ಆರ್‌ ಜನಾದ್ರಿ, ಜಿ.ಬಿ ಕಂಬಾಳಿಮಠ, ಕೃಷ್ಣ ಜಾಲಿಹಾಳ, ಮಲ್ಲು ಮಡಿವಾಳರ, ಉಮೇಶ ಕೆಂಭಾವಿಮಠ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next