Advertisement

ಸ್ವಯಂ ಉದ್ಯೋಗಕ್ಕೆ ಸಾಲ: ಪ್ರಧಾನಿಗೆ ದೇವೇಗೌಡ ಪತ್ರ

12:10 PM Jul 22, 2017 | |

ಕಲಬುರಗಿ: ಶೈಕ್ಷಣಿಕ ಸಾಲ ಮನ್ನಾ ಮಾಡುವುದು, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಆರಂಭಿಸಲು ಬ್ಯಾಂಕುಗಳಿಂದ 5ರಿಂದ 10ಲಕ್ಷ ರೂ. ಸಾಲ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಮಾಜಿ ಪ್ರಧಾನಿ ದೇವೇಗೌಡರು ಭರವಸೆ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಈಶಾನ್ಯ ವಲಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ.ಅಂಬಲಗಿ ಹಾಗೂ ಇತರರು ಭೇಟಿ ಮಾಡಿ ಪರಿಸ್ಥಿತಿ ಕುರಿತು ಗಮನಕ್ಕೆ ತಂದಾಗ ಈ ಕುರಿತು ಮೋದಿ ಅವರಿಗೆ ಪತ್ರ ಬರೆದು ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಪತ್ರ ಬರೆಯುತ್ತೇನೆಂದು ಭರವಸೆ ನೀಡಿದ್ದಾಗಿ ಅಂಬಲಗಿ ತಿಳಿಸಿದ್ದಾರೆ. ಅಲ್ಲದೆ, 371 (ಜೆ) ಕಲಂ ಅಡಿಯಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ವೃತ್ತಿಪರ ಪ್ರವೇಶದಲ್ಲಿ ಮತ್ತು ನಿರುದ್ಯೋಗಿ ಯುವಕರಿಗೆ ಉದ್ಯೋಗದಲ್ಲಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಶೇ. 8 ರಷ್ಟು ಮೀಸಲಾತಿಯನ್ನು ಸರಕಾರ ನೀಡುತ್ತಿಲ್ಲ. ಆದ್ದರಿಂದ ಕಲಂ ಸಂಪೂರ್ಣ ಜಾರಿ ಆಗುತ್ತಿಲ್ಲ. ಆದ್ದರಿಂದ ತಾವುಗಳು ಜಾರಿ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದು ಗೌಡರಿಗೆ ಅಂಬಲಗಿ ಮನವಿ ಮಾಡಿದ್ದಾರೆ.

ಗೌಡರು, ಈ ಕುರಿತು ಪ್ರಧಾನಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದು, ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದಾಗಿ ಹೇಳಿದ್ದಾರೆ. 371 (ಜೆ) ಕಲಂ ಸಂರ್ಪೂಣ ಜಾರಿಗೆ ಬದ್ಧ ಎಂದಿದ್ದಾರೆ ಎಂದು ತಿಳಿಸಿದ್ದಾರೆ. ರಾಮಚಂದ್ರ ನಾಟೀಕಾರ, ಬಸವರಾಜ, ಸೂರ್ಯಕಾಂತ ಜೀವಣಗಿ, ಬಸವರಾಜ ರಾಜಾಪುರ, ಸೂರ್ಯಕಾಂತ ಕುಲಕರ್ಣಿ, ಕೃಷ್ಣ ಭಟ್‌ ಜೋಶಿ ಇತರರು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next