ಹೌದು, ಎನ್ನುತ್ತಿದೆ ಈ ವರದಿ. ಜೀವನ ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದ್ದು, ಭವಿಷ್ಯದಲ್ಲಿ ಆತಂಕ ತಪ್ಪಿದ್ದಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅದೇ ಕಾರಣಕ್ಕಾಗಿ ಆತಂಕಕ್ಕೆ ಒಳಗಾಗಿರುವ ಅನಿವಾಸಿ ಭಾರತೀಯ ಕುಟುಂಬಗಳು ತವರಿಗೆ ಮರಳುತ್ತಿವೆ. ಆದರೆ ಈಗಾಗಲೇ ಅದೆಷ್ಟು ಕುಟುಂಬಗಳು ಮರಳಿವೆ ಎನ್ನುವುದರ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
Advertisement
ಅಷ್ಟಕ್ಕೂ ಈ ಅಂಶ ಬೆಳಕಿಗೆ ಬಂದದ್ದು ಹೈದರಾಬಾದ್ ನ ಶಾಲೆಗಳಿಂದ. ಕಳೆದ ಕೆಲ ವಾರಗಳಲ್ಲಿ ಈ ಶಾಲೆಗಳಲ್ಲಿ ಎನ್.ಆರ್.ಐ.ಗಳ ಮಕ್ಕಳ ಅಡ್ಮಿಷನ್ ಗಳು ಹಠಾತ್ತಾಗಿ ಹೆಚ್ಚಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಂ.ಎಸ್. ಗ್ರೂಪ್ ಶಾಲೆಗಳ ಅಧ್ಯಕ್ಷ ಎಂ.ಎ. ಲತೀಫ್, “ನಮ್ಮ ಗ್ರೂಪ್ ಗೆ ಸೇರಿದ ಶಾಲೆಗಳಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೌದಿಯಿಂದ ಮರಳಿದ ಪೋಷಕರ ಮಕ್ಕಳಾಗಿದ್ದಾರೆ. ಅವರಲ್ಲಿ ಹೆಣ್ಣು ಮಕ್ಕಳೇ ಜಾಸ್ತಿ ಇದ್ದಾರೆ. ಪೋಷಕರಲ್ಲಿ ದೇಶಕ್ಕೆ ಮರಳಿದ ಕಾರಣ ಕೇಳಿದಾಗ, ಸೌದಿ ಅರೇಬಿಯಾದಲ್ಲಿ ದೈನಂದಿನ ವೆಚ್ಚ ದುಬಾರಿಯಾಗಿದೆೆ. ಅನಿವಾಸಿ ಭಾರತೀ ಯರು ಜೀವನ ಸಾಗಿಸುವುದೇ ಕಷ್ಟವಾಗುತ್ತಿದೆ. ಹೀಗಾಗಿ ಬಹಳ ಮಂದಿ ಕುಟುಂಬ ಸದಸ್ಯರನ್ನೆಲ್ಲ ತವರಿಗೆ ಕಳುಹಿಸುತ್ತಿದ್ದಾರೆ ಎನ್ನುವ ಅಂಶ ಗೊತ್ತಾಯಿತು” ಎಂದಿದ್ದಾರೆ. ಇದರಂತೆ ಹೈದರಾಬಾದ್ ಇನ್ನೂ ಕೆಲವು ಶಾಲೆಗಳಿಗೆ ಅನಿವಾಸಿ ಭಾರತೀಯರು ತಮ್ಮ ಮಕ್ಕಳನ್ನು ಸೇರಿಸಿರುವ ಬಗ್ಗೆ ವರದಿಯಾಗಿದೆ.