Advertisement
ತಳಭಾಗದಲ್ಲಿ ಒಂದಿಷ್ಟು ನೀರಿನಲ್ಲಿ ಮೀನುಗಾರಿಕೆ ಇಲಾಖೆಯವರು ಮೀನುಮರಿಗಳನ್ನು ಟೆಂಡರ್ ಮೂಲಕ ಬಿಡಲಾಗಿದೆ. ಮೀನುಗಳನ್ನು ತಿಂದು ಬದುಕುವಂತಹ ಕೊಕ್ಕರೆಗಳಿಗೆ ಮತ್ತು ಮೀನುಗಳಿಗೆ ಕೆರೆಯಲ್ಲಿರಬೇಕಾದಷ್ಟು ನೀರು ಇಲ್ಲದಿರುವುದು ವಿಪರ್ಯಾಸವಾಗಿದೆ.
Related Articles
Advertisement
ನೀರಿನ ಕೊರತೆಯಲ್ಲೂ ಆಹಾರ ಅರೆಸಿ ಬರುವಂತಹ ಕೊಕ್ಕರೆಗಳು ಕೆರೆಯಂಗಳದಲ್ಲಿಬಿಡಾರಹೂಡಿದ್ದು ನೋಡುಗರ ಕಣ್ಮನಸೆಳೆಯುತ್ತಿವೆ. ಕೆರೆಗೆ ಮರುಜೀವ ನೀಡಲು ಸರ್ಕಾರ
ಮುಂದಾಗಲಿ: ಬಿರು ಬೇಸಿಗೆಯಲ್ಲಿ ಬತ್ತಿಹೋಗುವ ಕೆರೆಗೆ ಮರುಜೀವ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಕೆರೆ ಅಭಿವೃದ್ಧಿಪಡಿಸಿ ವರ್ಷ ಕಳೆಯುತ್ತಿದ್ದರೂ ಸಹ ಕೆರೆಯ ಮಡಿಲು ಮಾತ್ರಬರಿದಾಗಿದೆ. ಕಳೆದ ವರ್ಷದಲ್ಲಂತೂ ಕೆರೆಯಲ್ಲಿಒಂದು ತೊಟ್ಟು ನೀರು ಸಹ ಇರಲಿಲ್ಲ. ಇದೀಗ ಮಳೆಯಿಂದಾಗಿ ಅಲ್ಪಸ್ವಲ್ಪ ನೀರು ಕಾಣಿಸುತ್ತಿದೆ. ಕೈಗಾರಿಕಾ ಪ್ರದೇಶವಾಗಿರುವ ದೊಡ್ಡಬಳ್ಳಾಪುರತಾಲೂಕಿನ ಗಡಿಯಂಚಿನಲ್ಲಿರುವ ಈ ಕೆರೆಯೂದೊಡ್ಡಬಳ್ಳಾಪುರದಿಂದ ಸುಮಾರು 10 ಕಿ.ಮೀ.ದೂರದಲ್ಲಿದೆ. ಆಲೂರುದುದ್ದನಹಳ್ಳಿ ಗ್ರಾಪಂಗೆಸೇರಿರುವ ಕೆರೆಗೆ ಮರುಜೀವ ನೀಡುವ ಕೈಂಕರ್ಯಕ್ಕೆ ಸರ್ಕಾರ ಮುಂದಾಗಬೇಕಾಗಿದೆ.
ಬಿರು ಬೇಸಿಗೆಯಲ್ಲಿ ಪಕ್ಷಿ ಪ್ರಭೇದಗಳಿಗೆ ಕೆರೆ, ಕುಂಟೆ ಮತ್ತು ಇತರೆ ನೀರಿನ ಮೂಲಗಳೇ ಜೀವಾಳ. ಆದರೆ, ಬನ್ನಿಮಂಗಲ ಕೆರೆಯಲ್ಲಿ ನೀರಿಲ್ಲದೆ ಬರಿದಾಗುತ್ತಿರುವುದು ಪಕ್ಷಿಗಳ ಅವನತಿಗೆ ಮತ್ತು ಕೆರೆಯ ನಿರ್ಲಕ್ಷ್ಯತನಕ್ಕೆ ಕೈಗನ್ನಡಿಯಾಗಿದೆ. – ಮೀನಾಕುಮಾರಿ, ಗ್ರಾಪಂ ಸದಸ್ಯೆ, ಆಲೂರುದುದ್ದನಹಳ್ಳಿ
ನೀರಿನ ಕೊರತೆಯಲ್ಲೂ ಮುಂಜಾನೆಯಲ್ಲಿ ಪಕ್ಷಿಗಳ ಕಲರವನ್ನು ಕೆರೆಯಲ್ಲಿ ನೋಡಬಹುದು. ಸರ್ಕಾರದ ನಿರ್ಲಕ್ಷ್ಯದಿಂದಕೆರೆಗೆ ನೀರು ಬಂದಿಲ್ಲ. ಆಲೂರು ದುದ್ದನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬನ್ನಿ ಮಂಗಲ ಕೆರೆಯೂ ದೊಡ್ಡಕೆರೆಯಾಗಿರುವು ದರಿಂದ ಈ ಕೆರೆಗೆ ಆದಷ್ಟು ಬೇಗ ನೀರು ತುಂಬಿಸಲು ಸರ್ಕಾರ ಮನಸ್ಸು ಮಾಡಬೇಕು. – ಆರ್.ರಘು, ಗ್ರಾಪಂ ಸದಸ್ಯ, ಆಲೂರುದುದ್ದನಹಳ್ಳಿ