Advertisement
ಪೂಜ್ಯತೆ ಎಂದು ಹೇಳಿದ್ದು ಇದೇ ಕಾರಣಕ್ಕಾಗಿ. ಪ್ರಶ್ನಾತೀತಬೇಕು. ಪ್ರಶ್ನಾತೀತ ಎನ್ನುವುದಕ್ಕೆ ಪ್ರಮಾಣ ಬೇಕು. ವೇದವು ಪ್ರಶ್ನಾತೀತ, ನಿರ್ದುಷ್ಟವಾದುದು, ಪುರುಷದೋಷವಿಲ್ಲ. ಜೀವ ಹುಟ್ಟಲೇ ಇಲ್ಲ, ಅನಾದಿ ನಿತ್ಯದಂತೆ ಕಾಲವೂ ಅನಾದಿ ಅಲ್ಲವೆ? ಹೌದು, ದೇಶವೂ ಅನಾದಿ. ಅಂಟಾರ್ಟಿಕಾ ಅನಂತರ ಮತ್ತೇನು? ದೇಶ, ಕಾಲ ಅನಂತ ಎಂದು ಒಪ್ಪಲೇಬೇಕು. ದೇಶವೆಂದರೆ ಭಾರತ, ಅಮೆರಿಕ, ಆಫ್ರಿಕಾ ಅಂತಲ್ಲ, ದೇಶ ಎಂದರೆ ಅವಕಾಶ, ಆಕಾಶ. ಹೋಗ್ತಾ ಹೋಗ್ತಾ ಇನ್ನು ಹೋಗಲಿಕ್ಕೆ ಇಲ್ಲ ಎಂದಾಗುತ್ತದೋ ಅದು ಅವಕಾಶ. ದೇವರಿಗೆ ಇನ್ನೊಂದು ದೃಷ್ಟಾಂತ ಇಲ್ಲ. ವೇದಕ್ಕೂ ಇನ್ನೊಂದು ದೃಷ್ಟಾಂತ ಇಲ್ಲ. ಹೀಗೆಂದು ದೃಷ್ಟಾಂತ ಇಲ್ಲವೆಂದಾಗ ಅದು ಇಲ್ಲ ಎಂದಾಗದು. ದೇಶ, ಕಾಲ ಅನಾದಿ, ಅನಂತ ಎಂದಾದರೆ ದೇಶ, ಕಾಲವನ್ನು ಸೃಷ್ಟಿಸಿದವರು ಯಾರು? ಹಾಗೆಯೇ ವೇದವೂ ಅನಾದಿ, ಅನಾದಿಯಾದದ್ದು ಅಪೌರುಷೇಯ. “ವೇದೋ—ಖೀಲಂ ಧರ್ಮಮೂಲಂ’ ಎನ್ನುವುದು ಇದಕ್ಕಾಗಿಯೇ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811