ದೋಹಾ: ಬುಧವಾರ ತಡರಾತ್ರಿ ಪೋಲಂಡ್ ವಿರುದ್ಧ ಲಿಯೋನೆಲ್ ಮೆಸ್ಸಿ ನಾಯಕತ್ವದ ಆರ್ಜೆಂಟೀನಾ ಗೆದ್ದಿದ್ದು ಮಾತ್ರವಲ್ಲ, ನಾಕೌಟ್ಗೂ ನೆಗೆಯಿತು. ಇಂತಹ ಸಂಭ್ರಮದ ಹೊತ್ತಿನಲ್ಲೇ ಮೆಸ್ಸಿ ಮರೆಯಲಾಗದ ದಾಖಲೆ ಯೊಂದನ್ನು ಮಾಡಿದ್ದಾರೆ.
Advertisement
35 ವರ್ಷದ ವಿಶ್ವಶ್ರೇಷ್ಠ ಆಟಗಾರ ಮೆಸ್ಸಿ, ಆರ್ಜೆಂಟೀನಾ ಪರ ಗರಿಷ್ಠ 22 ಬಾರಿ ವಿಶ್ವಕಪ್ ಪಂದ್ಯಗಳಲ್ಲಿ ಕಾಣಿಸಿಕೊಂಡ ಸಾಧನೆ ಮಾಡಿ ದ್ದಾರೆ. ಇದು ಮೆಸ್ಸಿ ಅವರಿಗೆ ಐದನೇ ವಿಶ್ವಕಪ್.
ಬಹುಶಃ ಕೊನೆಯ ವಿಶ್ವಕಪ್ ಕೂಡ ಹೌದು. ಇಲ್ಲಿ ಟ್ರೋಫಿ ಗೆದ್ದು ವಿಶ್ವಕಪ್ ನೆನಪನ್ನು ಸ್ಮರಣೀಯ ಗೊಳಿಸಿಕೊಳ್ಳುವುದು ಅವರ ಉದ್ದೇಶ.