Advertisement
ಲಕ್ಷ್ಮೀಕಾಂತ ಡಿ. ಬೊಬ್ರೇಕರ್, ಸುನೀಲ ಆರ್. ಮಾಜಾಳಿಕರ್, ದೇವಾನಂದ ಬೊಬ್ರೇಕರ್, ಅಶೋಕ ಕೋಡಾರಕರ್, ರಾಮಾ ಬಿ. ದುಗೇಕರ್ ಮುಂತಾದವರ ನೇತೃತ್ವದಲ್ಲಿ ನೂರಾರು ಮೀನುಗಾರರು ಜಿಲ್ಲಾ ಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಮತ್ತು ಅನೇಕ ರಾಜ್ಯಗಳು ರಾತ್ರಿ ವೇಳೆ ಲೈಟ್ ಫಿಶ್ಶಿಂಗ್ ನಿಷೇಧ ಹೇರಿವೆ. ಮೀನು ಸಂತತಿಯನ್ನುಉಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಆದರೆ ಉತ್ತರ ಕನ್ನಡದಲ್ಲಿ ರಾತ್ರಿ ವೇಳೆ ಬುಲ್ ಟ್ರಾಲ್ ಬಳಸಿ ಮೀನುಗಾರಿಕೆ ನಡೆದಿದೆ. ಬೆಳಕು ಬಿಟ್ಟು ಸಮುದ್ರದಲ್ಲಿ ಮೀನು ಬೇಟೆ ಮಾಡುವುದರಿಂದ ಬೆಳಕಿಗೆ ಸಣ್ಣ ಸಣ್ಣ ಮೀನು ಮರಿ ಸಹಿತ ಎಲ್ಲ ಮೀನುಗಳು ಬಲೆಗೆ ಬೀಳುತ್ತವೆ. ಇದರಿಂದಾಗಿ ಮೀನಿನ ಸಂತತಿ ಬಹುಬೇಗ ನಾಶವಾಗಲಿದೆ. ನಾಡದೋಣಿ ಮೀನುಗಾರರಿಗೆ ಈ ಹಿಂದೆ ಸಿಗುತ್ತಿದ್ದ ಸಣ್ಣ ಮೀನುಗಳು ಸಿಗುತ್ತಿಲ್ಲ. ತಿಪ್ಪೆ, ಬಣಗು, ಸಮುದಾಳೆ, ಜಾಲಿ ಮೀನುಗಳು ಬಲೆಗೆ ಬೀಳುತ್ತಿಲ್ಲ. ಈ ಸಂತತಿ ವಿನಾಶದ ಅಂಚಿನಲ್ಲಿವೆ.
ಭಾಗವಹಿಸಿದ್ದರು.