Advertisement
ಸದ್ದು ಎದೆಗೆ ಗುದ್ದಿದಂತಿತ್ತು: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ನರೇಶ್ ನಿಶಾದ್, “”ನಾವು ಊಟಕ್ಕೆ ಹೋಗದೇ ಇದ್ದಿದ್ದರೆ ನಮ್ಮ ಸಾವು ಖಚಿತವಾಗುತ್ತಿತ್ತು. ವಿಮಾನ ಪತನಗೊಂಡಿರುವ ಮಹಡಿಯ ಮೇಲೆ ಕೆಲಸ ಮಾಡುತ್ತಿದ್ದೆವು. ಒಮ್ಮೆಲೇ ಭಾರೀ ಸದ್ದು ಕೇಳಿಸಿತು. ಆ ಸದ್ದು ಎದೆಗೇ ಗುದ್ದಿದಂತಿತ್ತು. ಸುಟ್ಟು ಕರಕಲಾದ ಕೆಲ ಲೋಹದ ತುಂಡುಗಳು ನಾವಿದ್ದ ಕಡೆ ಬಂದು ಬಿದ್ದವು. ಒಮ್ಮೆಲೇ ಹೊಗೆ ಆವರಿಸಿಕೊಂಡಿತು. ಏನಾಯಿತು ಎಂದು ಗೊತ್ತಾ ಗಿದ್ದೇ ವಿಮಾನ ಕೆಳಕ್ಕೆ ಉರುಳಿ ಹೊತ್ತಿ ಉರಿಯು ತ್ತಿದುದನ್ನು ನೋಡಿದ ಮೇಲೆ” ಎಂದಿದ್ದಾರೆ.
ಪತನಗೊಂಡ ಲಘು ವಿಮಾನದಲ್ಲಿ ಟೇಕ್‌ಆಫ್ ಮಾಡುವುದಕ್ಕೂ ಕೆಲವೇ ಗಂಟೆಗಳ ಮೊದಲು, ಇಂಜಿನಿಯರ್ ಸೌರಭಿ ಗುಪ್ತಾ ಅವರು ತಮ್ಮ ತಂದೆಗೆ ಕರೆ ಮಾಡಿ “ರೋಗಗ್ರಸ್ತ ವಿಮಾನ’ದಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ಹೇಳಿದ್ದರು. ದುರದೃಷ್ಟವಶಾತ್ ಗುಪ್ತಾ ಘಟನೆಯಲ್ಲಿ ಬದುಕುಳಿದಿಲ್ಲ. ಗುಪ್ತಾ ವಿಮಾನದಲ್ಲಿದ್ದ ನಾಲ್ವರಲ್ಲಿ ಒಬ್ಬರಾಗಿದ್ದಾರೆ. ಪುತ್ರಿಯನ್ನು ಕಳೆದುಕೊಂಡ ಎಸ್.ಪಿ.ಗುಪ್ತಾ ಅವರು ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಹೇಳಿಕೊಂಡು ದು:ಖ ತೋಡಿಕೊಂಡಿದ್ದಾರೆ.