Advertisement

ನಿರೂಪಕ ಇಲ್ಯಾಸ್‌ಗೆ ಜೀವಾವಧಿ ಶಿಕ್ಷೆ

08:00 AM Dec 21, 2017 | Team Udayavani |

ನವದೆಹಲಿ: ದೇಶದ ಕಿರುತೆರೆ ಕ್ಷೇತ್ರದ ಜನಪ್ರಿಯ ನಿರ್ಮಾಪಕ ಮತ್ತು ನಿರೂಪಕ ಸುಹೈಬ್‌ ಇಲ್ಯಾಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.ಜತಗೆ ಎರಡು ಲಕ್ಷ ರೂ.ದಂಡ ವಿಧಿಸಲಾಗಿದೆ.17 ವರ್ಷಗಳ ಹಿಂದೆ ಪತ್ನಿಯನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನವದೆಹಲಿಯ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ ಈ ತೀರ್ಪು ನೀಡಿದೆ. “ಪತ್ನಿಯನ್ನು ಕೊಲೆ ಮಾಡಿದ ಬಳಿಕ ಅದಕ್ಕೆ ಆತ್ಮಹತ್ಯೆ ಕತೆ ಕಟ್ಟಲಾಗಿದೆ’ ಎಂದು ನ್ಯಾಯಾಧೀಶ ಎಸ್‌.ಕೆ.ಮಲ್ಹೋತ್ರಾ ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್‌ ಡಿ.16ರಂದು ಇಲ್ಯಾಸ್‌ ದೋಷಿ ಎಂದು ಸಾರಿತ್ತು. ಹತ್ತು ಲಕ್ಷ ರೂ. ಪರಿಹಾರವನ್ನು ಅಸುನೀಗಿದ ಪತ್ನಿ ಅಂಜು ಅವರ ಹೆತ್ತವರಿಗೆ ನೀಡಬೇಕು ಎಂದೂ ಆದೇಶಿಸಿದೆ ಕೋರ್ಟ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next