Advertisement

ಪಶ್ಚಿಮ ಬಂಗಾಳ : ಮುಖ್ಯಮಂತ್ರಿ V/S ರಾಜ್ಯಪಾಲ

09:39 PM Jun 28, 2021 | Team Udayavani |

ಕೋಲ್ಕತ್ತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಮಮತಾ ಬ್ಯಾನರ್ಜಿ ರಾಜ್ಯಪಾಲರನ್ನು ಭ್ರಷ್ಟಾಚಾರಿ ಎಂದು ಕರೆದ ಬೆನ್ನಿಗೆ  ರಾಜ್ಯಪಾಲ ಜಗದೀಪ್ ಧಂಕರ್ ಬ್ಯಾನರ್ಜಿಗೆ ತಿರುಗೇಟು  ನೀಡಿದ್ದಾರೆ.

Advertisement

ನಿಮ್ಮಂತಹ ನಾಯಕರು  “ಸುಳ್ಳು ಮತ್ತು ತಪ್ಪು ಮಾಹಿತಿಯನ್ನೇ ಎತ್ತಿ ಹಿಡಿಯುತ್ತೀರಿ” ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ :  ವಿಶ್ವದೆಲ್ಲೆಡೆ ಕೋ”ವಿನ್”

ಹವಾಲಾ ಪ್ರಕರಣದಲ್ಲಿ ಯಾರೂ ಶಿಕ್ಷೆಗೊಳಗಾಗಲಿಲ್ಲ. ಯಾವ ಚಾರ್ಜ್‌ ಶೀಟ್? ರಾಜ್ಯಪಾಲರ ಹೆಸರು ಎಲ್ಲಿದೆ ? ನಿಮ್ಮ ರಾಜ್ಯಪಾಲರು ಎಲ್ಲಿದ್ದಾರೆ ? ಚಾರ್ಜ್‌ ಶೀಟ್ ಮಾಡಲಾಗಿಲ್ಲ. ಯಾವುದೇ ದಾಖಲೆಗಳಿಲ್ಲ. ಇದು ಶುದ್ಧ ತಪ್ಪು ಮಾಹಿತಿ. ಹವಾಲಾ ಪ್ರಕರಣದಲ್ಲಿ ನಾನು ಯಾವುದೇ ಹಣವನ್ನು ತೆಗೆದುಕೊಂಡಿಲ್ಲ. ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಏನೂ ತಪ್ಪ ಮಾಡದವ ನನ್ನ ಮೇಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಉದ್ಧಟತನದ ಆರೋಪ ಇದು ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Advertisement

ಇನ್ನು, ಇಂದು (ಸೋಮವಾರ ಜೂನ್ 28) ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ ಪಶ್ಚಿಮ ಬಂಗಾಳದ ರಾಜ್ಯಪಾಲರನ್ನು ಕಿತ್ತೊಗೆಯುವಂತೆ ನಾನು ಮೂರು ಪತ್ರ ಬರೆದಿದ್ದೇನೆ. ಅವರು ಭ್ರಷ್ಟಾಚಾರಿ. 1996 ಹವಾಲ ಜೈನ್‌ ಪ್ರಕರಣದ ಚಾರ್ಜ್‌ ಶೀಟ್‌ನಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ,‘ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ : ಮುಂಬೈನ ಅರ್ಧದಷ್ಟು ಮಕ್ಕಳಲ್ಲಿ ಪ್ರತಿಕಾಯ ಸೃಷ್ಟಿ : ಸೀರೋ ಸರ್ವೇಯಿಂದ ಈ ಮಾಹಿತಿ ಬಹಿರಂಗ

Advertisement

Udayavani is now on Telegram. Click here to join our channel and stay updated with the latest news.

Next