Advertisement

ನಿರ್ಜೀವ ಪಾಲಿಸಿಗಳಿಗೆ ಮತ್ತೆ ಚಾಲನೆ ನೀಡಲು ಮುಂದಾದ ಎಲ್‌ಐಸಿ

05:56 PM Aug 23, 2021 | Team Udayavani |

ಮುಂಬಯಿ : ಈಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವ ವಿಮೆ ಪಾಲಿಸಿಯ ರಿಸ್ಕ್ ಕವರ್‌ ಮುಂದುವರಿಸಲು ಭಾರತೀಯ ಜೀವ ವಿಮಾ ನಿಗಮವು ಹೊಸ ಅವಕಾಶವೊಂದನ್ನು ನೀಡಲು ಮುಂದಾಗಿದೆ. ಅದರಂತೆ ಯಾವುದೇ ಕಾರಣಗಳಿಂದ ಲ್ಯಾಪ್ಸ್‌ ಆಗಿರುವ ಪಾಲಿಸಿಗಳಿಗೆ ಮತ್ತೆ ಜೀವ ತುಂಬುವ ಅಭಿಯಾನವನ್ನು ಆ. 23ರಿಂದ ಅ. 22ರ ವರೆಗೆ ನಡೆಸಲು ನಿರ್ಧರಿಸಿದೆ.

Advertisement

ಈ ಅಭಿಯಾನದಲ್ಲಿ ಪಾವತಿಗೆ ಬಾಕಿ ಇರುವ ಮೊತ್ತದ ಮೇಲಿನ ವಿಳಂಬ ಶುಲ್ಕದಲ್ಲೂ ರಿಯಾಯಿತಿ ನೀಡಲಾಗುವುದು. ಆದರೆ ಈ ಕೊಡುಗೆಯು ಟರ್ಮ್ ಅಶ್ಶೂರೆನ್ಸ್‌ ಹಾಗೂ ಹೈ ರಿಸ್ಕ್ ಪ್ಲಾನ್‌ಗಳಿಗೆ ಅನ್ವಯಿಸುವುದಿಲ್ಲ. ಜತೆಗೆ ಮೆಡಿಕಲ್‌ ಸಂಬಂಧಿಸಿದ ದಾಖಲೆಗಳಲ್ಲೂ ರಿಯಾಯಿತಿ ನೀಡಲಾಗುವುದಿಲ್ಲ. ಈ ವಿಶೇಷ ಅಭಿಯಾನದಲ್ಲಿ 5 ವರ್ಷಗಳಿಂದೀಚೆಗೆ ಲ್ಯಾಪ್ಸ್‌ ಆಗಿರುವ ಅರ್ಹ ಪಾಲಿಸಿಗಳಿಗೆ ಮತ್ತೆ ಚಾಲನೆ ನೀಡಬಹುದು.

ಇದನ್ನೂ ಓದಿ :ಚಿತ್ರಮಂದಿರಗಳಲ್ಲಿ ಶೇ. 50 ರಷ್ಟು ಪ್ರೇಕ್ಷಕರಿಗೆ ಅವಕಾಶ: ಗೋವಾ ಸರ್ಕಾರ

ಪಾವತಿಗೆ ಬಾಕಿಯಿರುವ 1 ಲಕ್ಷ ರೂ. ಮೊತ್ತಕ್ಕೆ ವಿಳಂಬ ಶುಲ್ಕದಲ್ಲಿ ಶೇ. 20ರಷ್ಟು (ಗರಿಷ್ಠ 2 ಸಾವಿರ ರೂ.), 1ರಿಂದ 3 ಲಕ್ಷ ರೂ. ವರೆಗಿನ ಮೊತ್ತಕ್ಕೆ ಶೇ. 25 (ಗರಿಷ್ಠ 2,500 ರೂ.) ಹಾಗೂ 3 ಲಕ್ಷಕ್ಕಿಂತ ಮೇಲ್ಪಟ್ಟ ಮೊತ್ತಕ್ಕೆ ಶೇ. 30 (ಗರಿಷ್ಠ 3 ಸಾ.ರೂ.) ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ www.licindia.in ಅನ್ನು ಪರಿಶೀಲಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next