Advertisement

ಮಾತುಕತೆಯಿಂದ ಜಲವಿವಾದ ಬಗೆಹರಿಯಲಿ

11:51 AM Aug 18, 2017 | |

ವಿಜಯಪುರ: ಪರಸ್ಪರ ಸೌಹಾರ್ದ ಮೂಲಕ ಅಂತಾರಾಜ್ಯ ಜಲ ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜಲ ಸಂಪತ್ತಿದ್ದರೂ ಸದ್ಬಳಕೆ ಮಾಡಿಕೊಳ್ಳಲಾಗದೆ ಭಾರತದ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ ಎಂದು ಮಹಾರಾಷ್ಟ್ರದ ಜಲ ಸಾಕ್ಷಾತ್‌ ಕೇಂದ್ರದ ಮುಖ್ಯಸ್ಥ ಆನಂದ ಘೋಸಾವಳಿ ಅಭಿಪ್ರಾಯಪಟ್ಟರು. ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜಲ ಸಮಾವೇಶದಲ್ಲಿ ಗುರುವಾರ ನಡೆದ ಮಹಾನದಿ ಪುನರುಜ್ಜೀವನ ಯಾತ್ರಾ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ಮಹಾನದಿ ನೀರಿನ ವಿಷಯದಲ್ಲಿ ಓಡಿಸ್ಸಾ ಮತ್ತು ಛತ್ತೀಸಘಡ ರಾಜ್ಯಗಳ ಮಧ್ಯೆ ವಿವಾದ ಸೃಷ್ಟಿಗೆ ಡಿಸೆಂಬರ್‌ ತಿಂಗಳಲ್ಲಿ ನದಿಯಲ್ಲಿನ ನೀರಿನ ಕೊರತೆಯೇ ಪ್ರಮುಖ ಕಾರಣ. ವಿವಾದ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ದೇಶದ ಹಲವು ರಾಜ್ಯಗಳ ಜಲ ವಿವಾದಗಳ ಕಥೆಯೂ ಇದೇ ಆಗಿದೆ. ಕಾವೇರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಿವಾದ, ಕೃಷ್ಣೆಗಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳ ಮಧ್ಯೆ ದಶಕ-ದಶಕಗಳಿಂದ ವ್ಯಾಜ್ಯ ಇತ್ಯರ್ಥವಾಗಿಲ್ಲ. ಹೀಗಾಗಿ ಪರಸ್ಪರ
ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಮುಖ ನದಿಗಳ ಮಾಲಿನ್ಯ ನಿಯಂತ್ರಣ
ತಡೆಯಲು ಮೊದಲು ಹಳ್ಳಿಗಳಿಂದ ಹಳ್ಳಗಳ ಮಾಲಿನ್ಯ, ಸಣ್ಣ ನದಿಗಳ ಪುನಶ್ಚೇತನ, ಕಾರ್ಖಾನೆಗಳು ಅವೈಜ್ಞಾನಿಕವಾಗಿ ನದಿಗೆ ಹರಿಸುವ ರಾಸಾಯನಿಕ ತ್ಯಾಜ್ಯಕ್ಕೆ ಕಠಿಣ ಕಾನೂನಿನ ಮೂಲಕ ಕಡಿವಾಣ ಹಾಕಬೇಕಿದೆ ಎಂದರು. ಮತ್ತೂಂದೆಡೆ ಜನರಲ್ಲಿ ನೀರಿನ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಂಘಟನೆ ಕಳೆದ ಹಲವು ವರ್ಷಗಳಿಂದ ಜಲ ಸಾಕ್ಷಾತ್‌ ಕೇಂದ್ರ ಸಂಸ್ಥೆ ಸ್ಥಾಪಿಸಿಕೊಂಡು ಮಹಾರಾಷ್ಟ್ರದ ಹಳ್ಳಿಹಳ್ಳಿಗಳಲ್ಲಿ ಜಲ ಸಾಕ್ಷರತೆಗೆ ಮಾಡುತ್ತಿದೆ. ಪ್ರತಿ ಹಳ್ಳಿಯಲ್ಲೂ ಜಲ ಸೇವಕರ ಪಡೆಯನ್ನೇ ಸೃಷ್ಟಿಸಿದೆ. ದೇಶದ ಎಲ್ಲೆಡೆ ಇಂಥದ್ದೇ ಜಾಗೃತಿ ಪಡೆ ಕಟ್ಟುವುದು ಅಗತ್ಯವಿದೆ ಎಂದರು ಮಹಾನದಿ ಬಚಾವೋ ಆಂದೋಲನ ಓಡಿಸ್ಸಾ
ರಾಜ್ಯದ ಆಗಾಮಿ ಸಂಯೋಜಕ ಸುದರ್ಶನದಾಸ ಮಾತನಾಡಿ, ಮಹಾನದಿ ಬಚಾವೋ ಆಂದೋಲನವನ್ನು ಓಡಿಸಾ ಮಾತ್ರವಲ್ಲದೇ ರಾಷ್ಟ್ರವ್ಯಾಪ್ತಿಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ ದೇಶಾದ್ಯಂತ ಆಂದೋಲನ ರೂಪಿಸಿ, ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಓಡಿಸ್ಸಾ ರಾಜ್ಯದಲ್ಲಿ ಬಹುತೇಕ ರೈತ, ಮೀನುಗಾರರು ಮಾತ್ರವಲ್ಲ ಶೇ. 65ರಷ್ಟು ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇರಿ ಇಡೀ ಬದುಕು ಮಹಾನದಿಯನ್ನೇ ಅವಲಂಬಿಸಿವೆ. 9500 ಕಿ.ಮೀ ವ್ಯಾಪ್ತಿಯ ಈ ಜೀವನದಿ ಕಾರ್ಖಾನೆಗಳ ಮಾಲಿನ್ಯದಿಂದ ಉಸಿರುಗಟ್ಟಿ ಜೀವ ಕಳೆದುಕೊಳ್ಳುತ್ತಿದೆ. ಪರಿಣಾಮ ಜಲಚರ ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಬದುಕೂ ಅನಿಶ್ಚಿತ ಸ್ಥಿತಿಗೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಹಾನದಿ ಬಚಾವೋ ಆಂದೋಲನ ಓಡಿಸ್ಸಾ ಆಗಾಮಿ ಸಂಯೋಜಕ ಸುದರ್ಶನದಾಸ ಮಾತನಾಡಿದರು. ಸಂವಾದ ಗೋಷ್ಠಿಯಲ್ಲಿ ಛತ್ತೀಸಘಡ, ರಾಜಸ್ತಾನ, ಓಡಿಸ್ಸಾ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳ ಪ್ರತಿನಿ ಧಿಗಳು ಮತ್ತು ಜಲ ತಜ್ಞರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next