Advertisement

ಕಾಪು ಬೀಚ್‌ ಬಳಿಯ ಸರಕಾರಿ ಭೂಮಿ ಮರು ಸ್ವಾಧೀನಪಡಿಸಿಕೊಳ್ಳೋಣ

08:10 AM Mar 27, 2018 | Team Udayavani |

ಕಾಪು: ಪುರಸಭಾ ವ್ಯಾಪ್ತಿ ಯಲ್ಲಿರುವ ಸರಕಾರಿ ಭೂಮಿಯ ಸರ್ವೆ ಕಾರ್ಯ ಸಮರ್ಪಕವಾಗಿ ನಡೆಯಬೇಕಿದೆ. ಕಾಪು ಬೀಚ್‌ ಸರಕಾರಿ ಹಿ. ಪ್ರಾ. ಶಾಲೆಯ ಮುಂಭಾಗ 2.33 ಎಕ್ರೆ ಜಾಗ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಕೈಯ್ಯಲ್ಲಿದ್ದು, ಅದನ್ನು ಪುರಸಭೆ ಮರು ಸ್ವಾಧೀನ ಪಡಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಬಳಸಿಕೊಳ್ಳುವುದರ ಚಿಂತನೆ ನಡೆಸಬೇಕಿದೆ ಎಂದು ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು ಹೇಳಿದರು.

Advertisement

ಸೋಮವಾರ  ಜರಗಿದ ಕಾಪು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪುರಸಭಾ ವ್ಯಾಪ್ತಿಯ ಸರಕಾರಿ ಜಮೀನಿನ ಸುತ್ತಮುತ್ತ ಇರುವ ಇತರ ಇಲಾಖೆಗಳಿಗೆ ಸೇರಿದ ಜಮೀನುಗಳ ಸರ್ವೆ ನಡೆಸುವಂತೆ ಆಗ್ರಹಿಸಿದರು. ಕೆಲವೆಡೆ ಸರಕಾರಿ ಜಾಗಗಳು ಪರಭಾರೆಯಾಗಿರುವ ಬಗ್ಗೆ ಗಮನ ಸೆಳೆದರು.

ಕಾಪು ಬೀಚ್‌ ಬಳಿಯಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಕಟ್ಟಡ ಪಾಳು ಬಿದ್ದು ನಿಷ್ಪÅಯೋಜಕವಾಗಿದೆ. ಇದನ್ನು ಪುರಸಭೆಯ ಅಧೀನಕ್ಕೆ ತಂದು ಪ್ರವಾಸೋದ್ಯಮದ ಮೂಲಕ ಅಭಿವೃದ್ಧಿ ಪಡಿಸಿದಲ್ಲಿ ಪುರಸಭೆಗೆ ಶಾಶ್ವತ ಆದಾಯ ಸಿಗಲಿದೆ ಎಂದರು.

ಸಾರ್ವಜನಿಕ ಬವಣೆ ಗಮನಿಸಿ
ರಾಷ್ಟ್ರೀಯ ಹೆದ್ದಾರಿ66ರಿಂದ ಹೊಸಮಾರಿಗುಡಿ ದ್ವಾರದಿಂದ ಕಾಪು ಬೀಚ್‌ವರೆಗೆ ಗರಡಿ ರಸ್ತೆ ಬದಿ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗೆ ಡೆಲ್ಟಾ ಯೋಜನೆಯಡಿ 255 ಲಕ್ಷ ರೂ. ಮಂಜೂರಾಗಿದ್ದು ಇದಕ್ಕೆ 63.75ಲಕ್ಷ ರೂ. ಅನುದಾನವನ್ನು ಪುರಸಭೆ ಹೊಂದಾಣಿಕೆ ಮಾಡಬೇಕಿದೆ. ಇಲ್ಲಿನ  ರಸ್ತೆ ಬಹಳ ಕಿರಿದಾಗಿದ್ದು ಫುಟ್‌ಪಾತ್‌ ನಿರ್ಮಾಣಕ್ಕೆ ಮೊದಲು ಜಾಗದ ಬದಿಯ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕು. ಖಾಸಗಿಯವರಿಗೆ ಅನ್ಯಾಯ ವಾಗದ  ರೀತಿಯಲ್ಲಿ ನ್ಯಾಯಯುತವಾದ ಪರಿಹಾರ ನೀಡಿ ಮತ್ತೆ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಅವರು  ಹೇಳಿದರು.

ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಡೆಲ್ಟಾ ಮೂಲಕ ಪಾದಚಾರಿ ಮಾರ್ಗ ನಿರ್ಮಾಣವಾಗಲಿದೆ. ನಾವು ಆರು ರಸ್ತೆಗಳ ಬಗ್ಗೆ ವರದಿ ನೀಡಿದ್ದೆವು. ಅವರೇ ಈ ರಸ್ತೆಯನ್ನು ಆಯ್ಕೆ ಮಾಡಿದ್ದಾರೆ. ಒಂದು ವಾರದಲ್ಲಿ ಸರ್ವೇ ನಡೆಸಿ ಮಾಹಿತಿ ಪಡೆಯಲಾಗುವುದು. ಯೋಜನೆಯ ಅನುದಾನ ಹಿಂದಕ್ಕೆ ಕಳುಹಿಸಲಾಗುವುದಿಲ್ಲ. ಸಮಸ್ಯೆಯಾಗುವುದಿದ್ದಲ್ಲಿ ಅದನ್ನು ಬೇರೆ ರಸ್ತೆಗೆ ವಿನಿಯೋಗಿಸಲಾಗುವುದು ಎಂದರು.

Advertisement

ಕಾಪು ಪೇಟೆ ಧೂಳುಮಯ
ಕಾಪು ಪೇಟೆಯಲ್ಲಿ  ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದು ಒಂದೂವರೆ ತಿಂಗಳಾಯಿತು. ರಸ್ತೆ ದುರಸ್ತಿ ಮಾಡದೆ ಇರುವುದರಿಂದ ಧೂಳಿನಿಂದಾಗಿ ಎಲ್ಲರಿಗೂ ತೊಂದರೆಯಾಗುತ್ತಿದೆ. ಸಾರ್ವಜನಿಕರು ನಮ್ಮನ್ನು ಕೇಳುತ್ತಿದ್ದಾರೆ ಎಂದು ಸದಸ್ಯ ಅನಿಲ್‌ ಅಳಲು ತೋಡಿಕೊಂಡರು.

ಈ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತರಲಾಗಿದೆ. ಅವರು ಕೆಲಸ ಸರಿಪಡಿಸದಿದ್ದಲ್ಲಿ ಪುರಸಭೆ ವತಿಯಿಂದಲೇ ಕಾಮಗಾರಿ ನಡೆಸಿ ಅದಕ್ಕೆ ಖರ್ಚಾದ ಮೊತ್ತವನ್ನು ಗುತ್ತಿಗೆದಾರರಿಂದ ಪಡೆಯಲಾಗುವುದು ಎಂದು ಮುಖ್ಯಾಧಿಕಾರಿ ರಾಯಪ್ಪ ಭರವಸೆ ನೀಡಿದರು.

ಕೋಳಿ ಅಂಗಡಿ ಬಗ್ಗೆ ಚರ್ಚೆ
ಕಾಪುವಿನಲ್ಲಿ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಕೋಳಿ,ಕುರಿ, ಆಡು ಮಾರಾಟ ಮಳಿಗೆ ತೆರೆಯಲು ಮಾರುಕಟ್ಟೆ ಪ್ರದೇಶದಲ್ಲಿ ಪ್ರತ್ಯೇಕ ಸ್ಥಳವನ್ನು ಗುರುತಿಸಲಾಗಿದೆ. ಹೊಸ ಮಾರಿಗುಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ನಿಲುಗಡೆ ಹಾಗೂ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವ ಉದ್ದೇಶದಿಂದಾಗಿ ಮಳಿಗೆಗಳನ್ನು ಸೂಕ್ತ ಸ್ಥಳದಲ್ಲಿ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಪೊಲೀಸರು ಪುರಸಭೆಗೆ ಮನವಿ ಮಾಡಿದ್ದಾರೆ ಎಂದು ರಾಯಪ್ಪ ತಿಳಿಸಿದರು.

ಇಲ್ಲಿ ಒಟ್ಟು 32 ಮಳಿಗೆಗಳಿದ್ದು, ಎಲ್ಲಾ ಮಳಿಗೆಗಳನ್ನು ಪುರಸಭೆ ವತಿಯಿಂದಲೇ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿ ನೀಡಲಾಗುವುದು. ಯಾವುದೇ ಕಾರಣಕ್ಕೂ ಮಳಿಗೆಗಳನ್ನು ಹರಾಜು ಹಾಕಲಾಗುವುದಿಲ್ಲ. ಕೋಳಿ ಹಾಗೂ ಮಾಂಸ ಮಾರಾಟಗಾರರು ಸ್ವತ್ಛತೆಗೆ ಒತ್ತು ನೀಡಬೇಕು. ಸ್ವತ್ಛತೆಗಾಗಿ ಪೌರಕಾರ್ಮಿಕರು ಮಂಗಳವಾರ ಬೆಳಗ್ಗೆ ಯಿಂದಲೇ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದರು.

ಸದಸ್ಯರಾದ ರಮೇಶ್‌ ಹೆಗ್ಡೆ, ಕಿರಣ್‌ ಆಳ್ವ, ಅಶ್ವಿ‌ನಿ, ಲಕೀÒ$¾ಶ ತಂತ್ರಿ, ಮಹಮ್ಮದ್‌ ಇಮ್ರಾನ್‌, ಶಾಬು ಸಾಹೇಬ್‌, ಅಬ್ದುಲ್‌ ಹಮೀದ್‌, ನಾಗೇಶ್‌ ಸುವರ್ಣ, ಸುಲೋಚನಾ ಬಂಗೇರ, ಶಾಂಭವಿ ಕುಲಾಲ್‌, ಮೋಹಿನಿ ಶೆಟ್ಟಿ ವಿವಿಧ ವಾರ್ಡುಗಳ ಸಮಸ್ಯೆಯನ್ನು ಸಭೆಯ ಮುಂದಿಟ್ಟರು.ಕಾಪು ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್‌. ಉಸ್ಮಾನ್‌, ಸ್ಥಾಯೀ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಉಪಸ್ಥಿತರಿದ್ದರು.

ಸಮಗ್ರ ಸರ್ವೆ ನಡೆಯಲಿ
ಕಾಪು ಪುರಸಭಾ ವ್ಯಾಪ್ತಿಯ ಎಲ್ಲಾ 23 ವಾರ್ಡುಗಳಲ್ಲಿ ರಸ್ತೆ, ಸರಕಾರಿ ಭೂಮಿ, ಕಟ್ಟಡ, ಚರಂಡಿಗಳ ಸಮಗ್ರ ಸರ್ವೇ ಕಾರ್ಯವನ್ನು ಮಾಡಬೇಕಾಗಿದ್ದು ಸಾಮಾನ್ಯ ಸಭೆಯ ಮಂಜೂರಾತಿ ನಿರೀಕ್ಷಕರ ಮೇರೆಗೆ ಕೊಟೇಶನ್‌ ಕರೆಯುವಾಗ ಪುರಸಭಾ ವ್ಯಾಪ್ತಿಯ ಇತರ ಇಲಾಖೆಯ ಅಧೀನದಲ್ಲಿರುವ ಭೂಮಿಯ ಸರ್ವೇ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next