Advertisement

ಮೈಸೂರು ವಿಶ್ವ ವಿದ್ಯಾಲಯ ಹೆಸರೇ ಇರಲಿ

12:33 PM Nov 03, 2018 | |

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯಕ್ಕೆ “ನಾಲ್ವಡಿ ಕೃಷ್ಣರಾಜ ಒಡೆಯರ್‌’ ಹೆಸರಿಡುವ ಬದಲು ಮೈಸೂರು ವಿವಿ ಎಂಬ ಹೆಸರಿನ್ನೇ ಉಳಿಸಿಕೊಳ್ಳಬೇಕೆಂದು ದಲಿತ ವೇಲ್‌ ಫೇರ್‌ ಟ್ರಸ್ಟ್‌ನ ಅಧ್ಯಕ್ಷ ಶಾಂತರಾಜು ಒತ್ತಾಯಿಸಿದರು.

Advertisement

ಶತಮಾನದ ಇತಿಹಾಸವಿರುವ ಮೈಸೂರು ವಿಶ್ವವಿದ್ಯಾನಿಲಯ ದೇಶ-ವಿದೇಶಗಳಲ್ಲಿ ಮೈಸೂರು ವಿವಿ ಎಂದೇ ಪ್ರಖ್ಯಾತಿ ಪಡೆದಿದೆ. ಒಂದೊಮ್ಮೆ ಮೈಸೂರು ವಿವಿಗೆ ರಾಜವಂಶಸ್ಥರ ಹೆಸರಿಡಬೇಕಿದ್ದರೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ವಿವಿ ಸ್ಥಾಪನೆಯಾದ ಸಂದರ್ಭದಲ್ಲೇ ಬೇರೆ ಹೆಸರಿಡುತ್ತಿದ್ದರು.

ಹೀಗಾಗಿ ವಿಶ್ವವಿದ್ಯಾನಿಲಯಕ್ಕೆ ಪ್ರಸ್ತುತ ಇರುವಂತೆ ಮೈಸೂರು ವಿವಿ ಎಂಬ ಹೆಸರನ್ನೇ ಉಳಿಸಿಕೊಳ್ಳಬೇಕಿದೆ. ಇದರ ಬದಲು ಮೈಸೂರು ವಿಮಾನ ನಿಲ್ದಾಣ ಅಥವಾ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರಿಡಲಿ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. 

ಕ್ಷಮೆಯಾಚನೆಗೆ ಆಗ್ರಹ: ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಪ್ರತಾಪ್‌ಸಿಂಹ, ಟಿಪ್ಪು ಜಯಂತಿ ಬಗ್ಗೆ ನೀಡಿರುವ ಹೇಳಿಕೆ ಖಂಡನೀಯ. ಸಂಸದ ಪ್ರತಾಪ ಸಿಂಹ ಸ್ಥಳೀಯ ಚರಿತ್ರೆಯನ್ನು ಆಳವಾಗಿ ಅರಿಯಬೇಕಿದ್ದು, ಟಿಪ್ಪು ಒಬ್ಬ ಸ್ವತಂತ್ರ ಸೇನಾನಿಯಾಗಿದ್ದು ಇತಿಹಾಸ ತಿರುಚಲಾಗಿದೆ.

ಆತನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಸಂಸದರು ನಿಲ್ಲಿಸಬೇಕಿದೆ. ಅಂತೆಯೇ ಪ್ರತಾಪ ಸಿಂಹ ಒಬ್ಬ ದಲಿತ ವಿರೋಧಿಯಾಗಿದ್ದು, ದಲಿತರು ನಡೆಸುವ ಪ್ರತಿ ಆಚರಣೆಯನ್ನು ವಿರೋಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಾಪಸಿಂಹ ಟಿಪ್ಪು ಹಾಗೂ ಮಹಿಷಾಸುರನ ಕುರಿತಂತೆ ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕಿದೆ.

Advertisement

ಹಾಗೆಯೇ ವಿಧಾನ ಪರಿಷತ್‌ ಸದಸ್ಯೆ, ನಟಿ ತಾರಾ ಅನುರಾಧ ಮಹಿಷಾಸುರನ ಬಗ್ಗೆ ಹಗುರವಾಗಿ ಮಾತನಾಡಿದ್ದು, ಇದೇ ರೀತಿ ಮುಂದುವರಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಮಹದೇವಮೂರ್ತಿ, ಪ್ರೊ.ಟಿ.ಎಂ.ಮಾದೇವ್‌, ಎಂ.ರಾಜಣ್ಣ, ಚಿಕ್ಕಂದಾನಿ ಹಾಜರಿದ್ದರು. 

ಟಿಪ್ಪು ಜಯಂತಿ ಆಚರಣೆ: ದಲಿತ ವೇಲ್‌ ಫೇರ್‌ ಟ್ರಸ್ಟ್‌ ಹಾಗೂ ಇತರ ಸಂಘಟನೆಗಳ ಸಹಯೋಗದಲ್ಲಿ ನವೆಂಬರ್‌ ತಿಂಗಳಲ್ಲಿ ಮೈಸೂರಿನ ಕಲಾಮಂದಿರದಲ್ಲಿ ಟಿಪ್ಪು ಜಯಂತಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ದಲಿತ ವೇಲ್‌ ಫೇರ್‌ ಟ್ರಸ್ಟ್‌ನ ಅಧ್ಯಕ್ಷ ಶಾಂತರಾಜು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ಮಟ್ಟದಲ್ಲಿ ಟಿಪ್ಪು ಜಯಂತಿಗೆ ಆದೇಶ ಹೊರಡಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಇದೇ ವೇಖೆ ದಲಿತ ನೌಕರರಿಗೆ ಸುಪ್ರೀಂಕೋರ್ಟ್‌ ಜಾರಿಗೊಳಿಸಿರುವ ಹಿಂಬಡ್ತಿ ತೀರ್ಪು ಮಾರಕವಾಗಿದ್ದು, ಈ ಬಗ್ಗೆ ಸೂಕ್ತ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next