Advertisement

ಕೋವಿಡ್ ವಿರುದ್ಧ ಎಲ್ಲರೂ ಕೂಡಿ ಹೋರಾಡೋಣ

12:28 PM Jun 01, 2020 | Suhan S |

ರಾಯಬಾಗ: ಕೋವಿಡ್ ವೈರಸ್‌ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಾಗಿಲ್ಲ, ಇದು ಇಡೀ ಜಗತ್ತನ್ನೇ ಆವರಿಸಿ, ಮಾನವ ಕುಲಕ್ಕೆ ಅಪಾಯ ತಂದೊಡ್ಡಿದ್ದು, ಎಲ್ಲರೂ ಕೂಡಿ ಕೋವಿಡ್ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

Advertisement

ರವಿವಾರ ತಾಲೂಕಿನ ನಸಲಾಪುರ ಗ್ರಾಮಕ್ಕೆ ಭೇಟಿ ನೀಡಿ, ಆಶಾ ಕಾರ್ಯಕರ್ತರು ಮತ್ತು ವೈದ್ಯರನ್ನು ಸತ್ಕರಿಸಿ ಮಾತನಾಡಿದರು. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್ ರೋಗ ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಹೊರ ರಾಜ್ಯಗಳಿಂದ ತಮ್ಮ ಗ್ರಾಮಕ್ಕೆ ಬರುವ ಸಂಬಂಧಿ ಕರ ಬಗ್ಗೆ ಆಡಳಿತಕ್ಕೆ ಮಾಹಿತಿ ಹಂಚಿಕೊಳ್ಳಬೇಕು ಎಂದರು. ಸಚಿವರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ ಲಸಿಕೆ ನೀಡಿದ ಡಾ| ಸಂಜಯ ಪಾಟೀಲ, ಡಾ| ಸ್ನೇಹಾ ಪಾಟೀಲ ಹಾಗೂ ಆಶಾ ಕಾರ್ಯಕರ್ತೆಯರನ್ನು ಸತ್ಕರಿಸಿದರು.

ಚಿದಾನಂದ ಬಸಪ್ರಭು ಕೋರೆ ಸಕ್ಕರೆ ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ, ಡಿವೈಎಸ್‌ಪಿ ಆರ್‌.ಕೆ. ಪಾಟೀಲ, ತಾಲೂಕು ಪಂಚಾಯತ ಸದಸ್ಯ ಚೌಗೌಡ ಪಾಟೀಲ, ಗ್ರಾ.ಪಂ ಅಧ್ಯಕ್ಷ ಮುಬಾರಕ ತಾಂಬಟ, ಪಾಸಗೌಡ ಪಾಟೀಲ, ಬಾಳಾಸಾಬ ಪಾಟೀಲ, ರಾಜಗೌಡ ಪಾಟೀಲ, ಜಯಪಾಲ ಬನವಣೆ, ಸುಖಮಾರ ಪರಮಾಜೆ, ಸಂಜು ರಾಯಮಾನೆ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next