Advertisement
‘The happiest man is he who learns from nature the lesson of worship” ಎಮರ್ಸನ್ ಎಂಬ 19ನೆಯ ಶತಮಾನದ ಕವಿ, ತಣ್ತೀಜ್ಞಾನಿ ನೇಚರ್ ಎಂಬ ಪ್ರಬಂಧದಲ್ಲಿ ಖrಚnscಛಿnಛಛಿnಠಿಚl -ಅಚಿಂತ್ಯ ಭಾವದಿಂದ ಹೀಗೆ ಪ್ರಕೃತಿಯನ್ನು ವರ್ಣಿಸಿದ್ದಾರೆ. ಪ್ರಕೃತಿಗೆ ಜಡತ್ವವಿಲ್ಲ, ತನ್ನದೇ ಆತ್ಮವನ್ನು ಹೊಂದಿ ರುವ ಅದು ಹರಿಯುವ ನೀರಿನಂತೆ ನಿರಂತರ, ಅದರ ಗುಣವೇ ಹಾಗೆ.
Related Articles
Advertisement
ಪ್ರಕೃತಿಯ ಒಂದೇ ಒಂದು ಸ್ಪರ್ಶ ಈ ಪ್ರಪಂಚವನ್ನೇ ಬಂಧಿಸುತ್ತದೆ ಎಂದು ಶೇಕ್ಸ್‌ಪಿಯರ್ ಹೇಳಿದ್ದಾನೆ. ಸಾಗುವ ಹಾದಿ ದೂರವಾದರೂ ಇರುವೆಗಳು ಸಾಲಿನಲ್ಲಿಯೇ ಸಂಚರಿಸುವ ಶಿಸ್ತನ್ನು ಅವುಗಳಿಗೆ ಕಲಿಸಿದವರ್ಯಾರು?
ಮನುಷ್ಯನಿಗೂ ಪ್ರಕೃತಿಯ ಪ್ರಾಣಿಪಕ್ಷಿ ಗಳಿಗೂ ಇರುವ ಒಂದೇ ವ್ಯತ್ಯಾಸವೆಂದರೆ ಮನುಷ್ಯ ಸ್ವಾರ್ಥಿ, ಪ್ರಾಣಿಪಕ್ಷಿಗಳು ನಿಸ್ವಾರ್ಥಿಗಳು. ಪ್ರಕೃತಿಯಿಂದ ನಾವು ಕಲಿತದ್ದೇನು? ಪ್ರಕೃತಿಗೆ ನಾವು ಕೊಟ್ಟ ದ್ದೇನು? ಭೋಗ ಜೀವನದಿಂದ ಪ್ರಕೃತಿಯ ವಿನಾಶಕ್ಕೆ ಕಾರಣನಾದ ಮನುಷ್ಯ ನೆಲ,ಜಲ ಮತ್ತು ಗಾಳಿಯಲ್ಲಿ ವಿಷ ತುಂಬಿದ. ಇದರ ಫಲವನ್ನು ನಾವಿಂದು ಉಣ್ಣುತ್ತಿ ದ್ದೇವೆ. ಜಾಗತಿಕ ತಾಪಮಾನ ಹೆಚ್ಚುತ್ತಿದೆ.
ವರ್ಷಗಳುರುಳಿದಂತೆಯೇ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಲೇ ಸಾಗಿವೆ. ಪ್ರತಿ ಯೊಂದೂ ದುರಂತ ಸಂಭವಿಸಿದಾಗಲೂ ಕೆಲವು ದಿನ, ವಾರಗಳ ಕಾಲ ಈ ಬಗ್ಗೆ ತಲೆಕೆಡಿಸಿಕೊಳ್ಳುವ ನಾವು ಮತ್ತದೇ ಹಳೇ ಚಾಳಿಯನ್ನು ಪುನರಾವರ್ತಿಸುತ್ತೇವೆ. ನಮಗೆ ಇದು ಖಯಾಲಿಯಂತಾಗಿದೆ. “ನಿಸ್ವಾರ್ಥನಾಗಿ ಬದುಕಿ ಸಕಲ ಪ್ರಾಣಿಗಳಿಗೆ ದಯೆ ತೋರಿ ಸಂಯಮದಿಂದಿರು’ ಎನ್ನುವ ಸಂದೇಶವನ್ನು ಸಾರುವ ಪ್ರಕೃತಿಯ ಕರೆಗೆ ನಾವು ಓಗೊಡಬೇಕು. ಇನ್ನೂ ಅಪಾರವಾಗಿರುವ ವನಸಿರಿಗಳ ಸಂರಕ್ಷಿಸಿ, ಪಕ್ಷಿಸಂಕುಲವನ್ನು ಪೋಷಿಸ ಬೇಕು. ಬದುಕೆಂದರೆ ಮನುಷ್ಯರು ಒಟ್ಟಾಗಿ ಒಗ್ಗಟ್ಟಿನಿಂದ ಮಾತ್ರ ಜೀವಿಸು ವುದಲ್ಲ, ಪ್ರಕೃತಿಯೊಡನೆ ಬೆರೆತು ಯೋಗಿ ಯಂತೆ ಜೀವಿಸುವುದು. ಅನ್ಯರಿಗೆ ಕರುಣೆ ತೋರುವುದು, ಕೈಲಾದಷ್ಟು ನೆರವಾಗು ವುದು ನಮ್ಮೆಲ್ಲರ ಕರ್ತವ್ಯ. - ಮಯೂರಲಕ್ಷ್ಮೀ