Advertisement
ಗ್ರಾಮದಲ್ಲಿ ಜನಸಂಖ್ಯೆ 4,079. 5,051.49 ಹಕ್ಟೇರ್ ವಿಸ್ತೀರ್ಣ. ಕೃಷಿ ಅವಲಂಬಿತ ಗ್ರಾಮ. ಶೇ. 50 ರಷ್ಟು ಪ್ರದೇಶ ಕಸ್ತೂರಿ ರಂಗನ್ ವರದಿ ಯಂತೆ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಸುಮಾರು 119 ಕುಟುಂಬಗಳು ಸರಕಾರಿ ನಿವೇಶನದಲ್ಲಿ ಮನೆ ನಿರ್ಮಿಸಿ ವಾಸ್ತವ್ಯವಿದ್ದರೂ ಸೂಕ್ತ ದಾಖಲೆಯ ಕೊರತೆ ಯಿಂದಾಗಿ ಹಕ್ಕು ಪತ್ರ ದೊರೆತಿಲ್ಲ.
Related Articles
Advertisement
ಮೊಳಹಳ್ಳಿಯ ಜಲಮೂಲಗಳಲ್ಲಿ ಒಂದಾದ ಸುಮಾರು 4 ಎಕರೆಗೂ ಅಧಿಕ ವಿಸ್ತೀರ್ಣದ ಹುಂತನಕೆರೆ, 4.15 ಎಕರೆ ವಿಸ್ತೀರ್ಣದ ಮರಾತೂರು ತೆಕ್ಕೋಡ್ ಕೆರೆ, ಮಾರುಕೆರೆಗಳನ್ನು ಉಳಿಸಿಕೊಳ್ಳಬೇಕಿದೆ. ತಂತ್ರಜ್ಞಾನ ಸಮರ್ಪಕ ವಾಗಿ ಬಳಸಿ ವೈಜ್ಞಾನಿಕವಾಗಿ ವಾರಾಹಿ ಕಾಲುವೆ ನೀರು ಹರಿಸಿದರೆ ಗ್ರಾಮದ ಅಂತರ್ಜಲ ವೃದ್ಧಿಯಾಗಿ ಬೇಸಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಬಹುದು.
ನೆಟ್‌ವರ್ಕ್ ಸಮಸ್ಯೆ
ಅಭಿವೃದ್ಧಿ ಹೊಂದುತ್ತಿರುವ ಈ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಬಹಳಷ್ಟಿದೆ. ರಾತ್ರಿ ವಿದ್ಯುತ್ ಹೋದರೆ ಬೆಳಗ್ಗೆಯಾದರೂ ಬಾರದು. ಇದ ರೊಂದಿಗೆ ಈಗ ವರ್ಕ್ ಫ್ರಂ ಹೋಂ ನಲ್ಲಿ ಸಾಕಷ್ಟು ಖಾಸಗಿ ಉದ್ಯೋಗಿಗಳು ಗ್ರಾಮದಲ್ಲಿ ಕಾರ್ಯ ನಿರತರಾಗಿದ್ದಾರೆ. ಆದರೆ ನೆಟ್ ವರ್ಕ್ ಕೊರತೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಸಮಸ್ಯೆಯೂ ಬಗೆಹರಿಯಬೇಕಿದೆ.
ದಟ್ಟ ಅಡವಿ ಪ್ರದೇಶ
ದಟ್ಟಡವಿಯಲ್ಲಿ ಮೋಳ ಇರುವ ಪ್ರದೇಶ ಕ್ರಮೇಣ ಮೊಳಹಳ್ಳಿಯಾಯಿತಂತೆ. ಗ್ರಾಮವು ಸುಮಾರು 400 ವರ್ಷದ ಹಿಂದೆ ದಟ್ಟ ಅಡವಿಯಿಂದ ಕೂಡಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸಲು ಯಾವುದೇ ಮಾರ್ಗಗಳಿರಲಿಲ್ಲ. ಆ ಕಾಲದಲ್ಲಿ ಮರತೂರು, ಬೆದ್ರಾಡಿ ಮಾರ್ಗವು ತುಂಬಾ ಪ್ರಸಿದ್ಧಿಯಾಗಿದ್ದು, ಇಲ್ಲಿನ ಗ್ರಾಮಸ್ಥರು ಬೆದ್ರಾಡಿಯಿಂದ ಹೊಳೆಯ ಮಾರ್ಗವಾಗಿ ದೋಣಿಯ ಮೂಲಕ ಸಂಚರಿಸುತ್ತಿದ್ದರು. ಈ ಪ್ರದೇಶವು ಸಂಪೂರ್ಣ ದಟ್ಟ ಡವಿಯಿಂದ ಕೂಡಿದ್ದು, ಕಾಡುಪ್ರಾಣಿಗಳಿಂದ ತುಂಬಿದ ಮೋಳ ರೀತಿಯಲ್ಲಿರುವುದರಿಂದ ಜನರು ಮೊಳಹಳ್ಳಿ ಎಂದು ಕರೆದು ಕಾಲಕ್ರಮೇಣ ಮೊಳಹಳ್ಳಿ ಗ್ರಾಮ ಎನ್ನುವ ಹೆಸರು ಅಸ್ತಿತ್ವಕ್ಕೆ ಬಂದು ಎನ್ನುವ ಪ್ರತೀತಿ ಇದೆ.
ಹಕ್ಕುಪತ್ರವಿಲ್ಲದೆ ಸಮಸ್ಯೆ: ಗ್ರಾಮದಲ್ಲಿ ಶೇ.50ರಷ್ಟು ಡೀಮ್ಡ್ ಫಾರೆಸ್ಟ್ ವ್ಯಾಪ್ತಿಗೆ ಬರುವುದರಿಂದ ಸಮರ್ಪಕ ದಾಖಲೆ ಸಮಸ್ಯೆಯಿಂದಾಗಿ ಇಲ್ಲಿನ ಬಡವರು ಹಕ್ಕುಪತ್ರವಿಲ್ಲದೇ ಸರಕಾರದ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.-ಇಂದಿರಾ ಯು. ಶೆಟ್ಟಿ, ಅಧ್ಯಕ್ಷೆ, ಗ್ರಾ.ಪಂ.ಮೊಳಹಳ್ಳಿ
ಸಂಪರ್ಕ ಸೇತುವೆ ಆಗಲಿ: ಮರತೂರಿನ ಕುಂದಬೆಟ್ಟು, ಕತ್ಕೋಡು ನಡುವೆ ವಾರಾಹಿ ನದಿಗೆ ಸಂಪರ್ಕ ಸೇತುವೆ ಆಗಲಿ. ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ವಾರಾಹಿ ನೀರು ಗ್ರಾಮದ ಕೆರೆಗಳಿಗೆ ನೀರು ಹರಿಸಿದರೆ ಅಂತರ್ಜಲ ವೃದ್ಧಿಯಾಗಲಿದೆ.-ಶಾಂತಾರಾಮ ಶೆಟ್ಟಿ , ಮರತೂರು.
-ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ