Advertisement
ಬೆಂಗಳೂರು ನಗರ, ಗ್ರಾಮಾಂತರ, ಬೆಳಗಾವಿ, ಬಾಗಲಕೋಟೆ ಮೊದಲಾದ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ನೇಕಾರರಿದ್ದಾರೆ. ನೇಕಾರರು ನೇಯ್ದ ಸೀರೆಗಳು ರಾಜ್ಯವಲ್ಲದೇ ನೆರೆಯ ಆಂಧ್ರ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ಮಾರಾಟವಾಗುತ್ತಿದ್ದವು. ಆದರೆ ಮಾರಾಟಗಾರರು ಸೀರೆ ಖರೀದಿಸುತ್ತಿಲ್ಲ. ಜತೆಗೆ ಹಿಂದಿನ ಖರೀದಿಯ ಹಣ ನೀಡದೇ ಕಾರಣ ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ನೇಕಾರರನ್ನು ಉಳಿಸಲು ನೇಕಾರರಿಂದ 50 ಲಕ್ಷ ಸೀರೆಗಳನ್ನು ಸರ್ಕಾರ ಖರೀದಿ ಮಾಡಿ, ಸರ್ಕಾರಿ ನೌಕರರು, ಪಂಚಾಯಿತಿಗಳು,ಅಂಗನವಾಡಿ ಕಾರ್ಯಕರ್ತರು ಮೊದಲಾದ ಸರ್ಕಾರಿ ಹಾಗೂ ಅರೆ ಸರ್ಕಾರಿ ಸಿಬ್ಬಂದಿಗೆ ಮಾರಾಟ ಮಾಡುವ ಮೂಲಕ ನೆರವಾಗಬೇಕಿದೆ. ಸುಮಾರು 50 ಕೋಟಿ
ಅದಕ್ಕೆ ವೆಚ್ಚವಾಗಲಿದೆ. ಸರ್ಕಾರ ಮೊದಲು ಬಟ್ಟೆ ಖರೀದಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಲಾಗಿದೆ. ನೇಕಾರರು ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಈ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರ ಪಟ್ಟಿಗೆ ನೇಯ್ಗೆ ಕಾರ್ಮಿಕರನ್ನು ಸೇರಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ನೇಕಾರ ಹೋರಾಟ ಸಮಿತಿ ಕೆ.ಜಿ.ಗೋಪಾಲ್, ರಂಗಸ್ವಾಮಿ ಮತ್ತಿತರರು ಹಾಜರಿದ್ದರು.