Advertisement

Koratagere: ಗೃಹ ಸಚಿವರ ಸ್ವ ಕ್ಷೇತ್ರದಲ್ಲೇ ಮಲ ಹೊತ್ತ 10 ವರ್ಷದ ಬಾಲಕ!

10:06 PM Nov 07, 2024 | Team Udayavani |

ಕೊರಟಗೆರೆ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿನ ಶೌಚದ ಗುಂಡಿಯಿಂದ ತುಂಬಿ ಹರಿಯುತ್ತಿದ್ದ ಮಲವನ್ನು ಬಾಲಕನಿಂದ ಸ್ವಚ್ಛ ಗೊಳಿಸಿರುವ ಅಮಾನವೀಯ ಘಟನೆ ಗೃಹ ಸಚಿವ ಡಾ. ಜಿ.ಪರಮೇಶ್ವರ್‌  ಸ್ವಕ್ಷೇತ್ರ ಕೊರಟಗೆರೆಯಲ್ಲಿ ಬೆಳಕಿಗೆ ಬಂದಿದೆ.

Advertisement

ನಿಲ್ದಾಣದ ಒಳಗಿರುವ ಸಾರ್ವಜನಿಕ ಶೌಚಾಲಯದ ಪಿಟ್‌ ತುಂಬಿ ಹರಿಯುತ್ತಿದ್ದು ತುಮಕೂರು ಮೂಲದ 10 ವರ್ಷದ ಬಾಲ ಕಾರ್ಮಿಕ ಹಾಗೂ ಓರ್ವ ವ್ಯಕ್ತಿ ಮಲವನ್ನು ಸ್ವಚ್ಛಗೊಳಿಸುತ್ತಿದ್ದ ವಿಡಿಯೋ ವೈರಲ್‌ ಆಗಿದೆ. ಶೌಚಾಲಯದ ನಿರ್ವಹಣೆ ಮಾಡುತ್ತಿದ್ದ ಗುತ್ತಿಗೆದಾರ ಕುಮಾರಣ್ಣ ಎಂಬವರು ನಮಗೆ ಈ ಕೆಲಸ ಮಾಡುವಂತೆ ಹೇಳಿದ್ದಾರೆ ಎಂದು ಬಾಲಕ ಹೇಳಿದ್ದಾನೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಿ.ಯಮುನಾ, ಪಟ್ಟಣ ಪಂಚಾಯಿತಿ ಸಿಬ್ಬಂದಿಯೊಂದಿಗೆ ತೆರಳಿ ಸ್ಥಳ ಪರಿಶೀಲಿಸಿದ್ದೇವೆ. ಕೆಎಸ್‌ಆರ್‌ಟಿಸಿಗೆ ನೋಟಿಸ್‌ ಕೊಡಲಾಗಿದ್ದು, ಏಜೆನ್ಸಿಯವರು ಬಾಲಕ ಯಾರೆಂದೇ ಗೊತ್ತಿಲ್ಲ ಎಂದಿದ್ದಾರೆ. ಈ ಕುರಿತು ಶುಕ್ರವಾರ ಸಿಸಿ ಕ್ಯಾಮೆರಾ ಪರಿಶೀಲಿಸಿ ತಹಶೀಲ್ದಾರ್‌ರ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಕಠಿನ ಕಾನೂನು ಅನಿವಾರ್ಯ

ಇಂತಹ ಘಟನೆ ರಾಜ್ಯದ ಯಾವುದೇ ಗ್ರಾಮಗಳಲ್ಲೂ ಸಂಭವಿಸಬಾರದು. ಈ ಘಟನೆ ನಾಗರಿಕ ಸಮಾಜದ ತಲೆ ತಗ್ಗಿಸುವಂತದ್ದು, ಸ್ವಾತಂತ್ರ್ಯ ಬಂದು 75  ವರ್ಷ ಕಳೆದರೂ ಮಲ ಹೊರುವ ಪದ್ದತಿ ಜಾತಿ ಪದ್ದತಿ ಜೀವಂತವಾಗಿರುವುದಕ್ಕೆ ಘಟನೆಯೇ ಸಾಕ್ಷಿ. ನಾನು ಈ ಘಟನೆಯ ತೀವ್ರವಾಗಿ ಖಂಡಿಸುತ್ತೇನೆ ಹಾಗೂ  ಸಮಾಜ ಕಲ್ಯಾಣ ಇಲಾಖೆಯು ಇಂತಹ ಘಟನೆಗಳಿಗೆ  ಅಂತ್ಯ ಕಾಣಿಸಲು ಇನ್ನೂ ಕಠಿನ ಕಾನೂನು ತರುವುದು ಅನಿವಾರ್ಯವಾಗಿದೆ ಎಂದು ಜೆಟ್ಟಿ ಸಾಮಾಜಿಕ ಹೋರಾಟಗಾರ ಅಗ್ರಹಾರ ನಾಗರಾಜು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next