Advertisement

Work from home ಬಿಡಿ, ಆರೋಗ್ಯಕ್ಕಾಗಿ ಆಫೀಸಿಗೆ ನಡಿ: ಅಧ್ಯಯನ

12:47 AM Oct 25, 2024 | Team Udayavani |

ಹೊಸದಿಲ್ಲಿ: ಕೋವಿಡ್‌-19 ಬಂದ ಮೇಲಂತೂ ಐಟಿ-ಬಿಟಿ ಕಂಪೆನಿಗಳಲ್ಲಿ ವರ್ಕ್‌ ಫ್ರಂ ಹೋಂ ಹೆಚ್ಚಾಗಿತ್ತು. ಇಷ್ಟಾದರೂ ಉದ್ಯೋಗಸ್ಥರಿಗೆ ಮಾನಸಿಕ ಒತ್ತಡ ಮಾತ್ರ ಕಡಿಮೆಯಾಗುತ್ತಿಲ್ಲ. “ಕೆಲಸ ಮತ್ತು ಜೀವನ’ ಸಮತೋಲನವಾಗಿಡಬೇಕು, ಒತ್ತಡವನ್ನು ತಗ್ಗಿಸಿಕೊಳ್ಳಬೇಕೆಂದರೆ ವರ್ಕ್‌ ಫ್ರಂ ಹೋಂಗಿಂತ ಕಚೇರಿಯಲ್ಲಿ ಕೆಲಸ ಮಾಡುವುದೇ ಉತ್ತಮ ಎಂದು ಜಾಗತಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಭಾರತಕ್ಕೆ ಸಂಬಂಧಿಸಿದಂತೆ ವರ್ಕ್‌ ಫ್ರಂ ಹೋಮ್‌ಗಿಂತ ಕಚೇರಿಗೆ ಹೋಗುವವರು ಉತ್ತಮ ಮಾನಸಿಕ ಆರೋಗ್ಯ ಹೊಂದಿ ದ್ದಾರೆ ಎಂಬ ಅಂಶ ಗೊತ್ತಾಗಿದೆ.

Advertisement

ಅಮೆರಿಕ ಮತ್ತು ಯುರೋಪ್‌ಗ್ಳಲ್ಲಿ ಇದಕ್ಕೆ ವ್ಯತಿರಿಕ್ತ ಅಂಶ ಬಂದಿದೆ. ಅಮೆರಿಕ ಮೂಲದ “ಮೈಂಡ್‌ ರಿಸರ್ಚ್‌ ಆರ್ಗನೈ ಸೇಶನ್‌ ಸೇಪಿಯನ್ಸ್‌ ಲ್ಯಾಬ್ಸ್’ ಅಧ್ಯ ಯನ ನಡೆಸಿದೆ. 65 ದೇಶದ 54,831 ಮಂದಿಯಿಂದ ಪಡೆದ ದತ್ತಾಂಶವನ್ನು ಬಳಸಿಕೊಂಡು ಈ ಅಧ್ಯಯನ ನಡೆ ಸಿತ್ತು. ಸಹೋದ್ಯೋಗಿಗಳೊಂದಿಗಿನ ಸಂಬಂಧ, ಕೆಲಸದ ಬಗೆಗಿನ ಹೆಮ್ಮೆ, ಏಕಾಂಗಿ ಕೆಲಸಕ್ಕಿಂತ, ಸಹೋದ್ಯೋಗಿಗ ಳೊಂದಿಗೆ ಕೆಲಸ ಮಾಡುವ ಅನು ಭವಗಳನ್ನು ಪರಿಗಣಿಸಲಾಗಿದೆ. ಭಾರತ ದಲ್ಲಿ 5,090 ಮಂದಿಯನ್ನು ಅಧ್ಯಯ ನಕ್ಕೊಳಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next