Advertisement

ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ

02:33 PM Jul 31, 2017 | |

ಗರಿಬೊಮ್ಮನಹಳ್ಳಿ: ಕೇಂದ್ರ ಸರ್ಕಾರ ಯೋಜನೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ಬಲವಾಗಿ ಸಂಘಟಿಸೋಣ ಎಂದು ಬಿಜೆಪಿ ಬಿಲ್‌1 ಪ್ರಮುಖ ಪೊಲೀಸ್‌ ರಾಮನಾಯ್ಕ ಹೇಳಿದರು.

Advertisement

ಪಟ್ಟಣದ ರಾಮ್‌ರಹೀಂ ನಗರದಲ್ಲಿ ಬಿಜೆಪಿಯ ಬೂತ್‌ ಮಟ್ಟದ 133ನೇ ಬೂತ್‌ ಕಮಿಟಿ ಸಭೆ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಧಾನಿ ಮೋದಿಯವರು ರಾಷ್ಟ್ರ ರಕ್ಷಣೆಗೆ ಪಣತೊಟ್ಟಿದ್ದು, ವಿದೇಶಗಳೊಂದಿಗೆ ಅನೋನ್ಯ ಸಂಬಂಧ
ಗಟ್ಟಿಗೊಳಿಸಿಕೊಂಡಿದ್ದಾರೆ. ಏಕರೂಪ ತೆರಿಗೆ ಜಿಎಸ್‌ಟಿ ಜಾರಿಗೊಳಿಸಿ ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಸೀಡ್‌ಬಾಲ್‌ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ರಾಜ್ಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಕೆಳಹಂತದಿಂದ ಪ್ರಯತ್ನಿಸಬೇಕು. ಕ್ಷೇತ್ರದಿಂದ ಬಿಜೆಪಿ ಪಕ್ಷ ಯಾರಿಗೆ ಟಿಕೆಟ್‌ ನೀಡಿದರು, ಒಗ್ಗಟ್ಟಿನಿಂದ ಅವರ ಗೆಲುವಿಗೆ ಶ್ರಮಿಸೋಣ ಎಂದರು. 

ಬೂತ್‌ ಕಮಿಟಿ ಅಧ್ಯಕ್ಷ ಸ್ವಚ್ಛ ಭಾರತ್‌ ಎಲ್‌. ಗಣೇಶ್‌ ಮಾತನಾಡಿ, ಕಾಂಗ್ರೆಸ್‌ ಸರಕಾರ ಜನವಿರೋಧಿ ಆಡಳಿತ ನೀಡುತ್ತಿದ್ದು, ವಸತಿ ರಹಿತರಿಗೆ ವಸತಿಗಳನ್ನು ನೀಡಲು ಮೀನಮೇಷ ಎಣಿಸುತ್ತಿದೆ. ಪಟ್ಟಣದ ಪುರಸಭೆ ನಿರ್ಲಕ್ಷದಿಂದ ಸ್ವತ್ಛತೆ ಮಾಯಾವಾಗಿದೆ. ಬಿಜೆಪಿ ಕಾರ್ಯಕರ್ತರು ಬೂತ್‌
ಮಟ್ಟಗಳಲ್ಲಿ ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರ ಉಳಿಸಬೇಕು. ರಾಮ್‌ರಹಿಂ ನಗರದ ನಿರಾಶ್ರಿತರಿಗೆ ಮನೆಗಳನ್ನು ಕಲ್ಪಿಸಿಕೊಡದಿದ್ದಲ್ಲಿ ಪುರಸಭೆ ಕಚೇರಿ ಮುಂಭಾಗ ಬೃಹತ್‌ ಪ್ರತಿಭಟನೆ ಮಾಡಲಾಗುವುದು ಎಂದರು. 

ಇದೇವೇಳೆ ರಾಮ್‌ರಹಿಂ ನಗರದ ವಿವಿಧೆಡೆ 100 ಸಸಿಗಳನ್ನು ನೆಟ್ಟರು. ಬಿಜೆಪಿ ಮಂಡಲ ಅಧ್ಯಕ್ಷ ನರೇಗಲ್‌ ಕೊಟ್ರೇಶ್‌, ಮುಖಂಡ ತಿರುಮಲೇಶ್‌, ಎಸ್‌ಟಿ ಘಟಕದ ಜಿಲ್ಲಾ ಕಾರ್ಯದರ್ಶಿ ಮಹೇಂದ್ರ ಮಾತನಾಡಿದರು. ಬಿಜೆಪಿ ಎಸ್‌ಸಿ ಮೋರ್ಚಾದ ಅಧ್ಯಕ್ಷ ಚಿಮ್ನಳ್ಳಿ ಸಿದ್ದಪ್ಪ, ನಗರ ಘಟಕದ ಅಧ್ಯಕ್ಷ ಸಂದೀಪ್‌ ಶಿವಮೊಗ್ಗ, ಅಲ್ಪ ಸಂಖ್ಯಾತರ ಘಟಕದ ವಾಜೀದ್‌, ನಾಗಯ್ಯಸ್ವಾಮಿ, ಎಸ್‌.ಬಾಳಪ್ಪ, ಕೊಟ್ರಪ್ಪ,  ದೇವರಮನಿ ನೀಲಪ್ಪ, ಅಮೀನ್‌ದ್ದೀನ್‌ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next