Advertisement

ವಿದ್ಯಾರ್ಥಿಗಳು ಓದುವ ಛಲ ಬೆಳೆಸಿಕೊಳ್ಳಲಿ: ಮಾಲಕರೆಡ್ಡಿ

05:08 PM Aug 14, 2017 | Team Udayavani |

ಯಾದಗಿರಿ: ಜೀವನದಲ್ಲಿ ಗುರಿ ತಲುಪಬೇಕಾದರೆ ವಿದ್ಯಾರ್ಥಿಗಳಲ್ಲಿ ಓದುವ ಛಲ ಬೆಳೆಸಿಕೊಳ್ಳಬೇಕು ಎಂದು ಶಾಸಕ ಡಾ| ಎ.ಬಿ. ಮಾಲಕರೆಡ್ಡಿ ಹೇಳಿದರು. ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2017-18ನೇ ಸಾಲಿನ ಸಾಹಿತ್ಯ ಮತ್ತು ಸಾಂಸ್ಕೃತಿಕ, ಎನ್‌ಎಸ್‌ ಎಸ್‌ ಚಟುವಟಿಕೆಗಳ ಉದ್ಘಾಟನೆ ಹಾಗೂ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗೆ
ಏರ್ಪಡಿಸಲಾಗಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ನಿರ್ಧಿಷ್ಟಗುರಿ
ತುಲುಪಿದಾಗ ಜೀವನ ಸಾರ್ಥಕವಾಗುತ್ತದೆ. ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು. ಇನ್ನೂ ಕಾಲೇಜಿನಲ್ಲಿ
ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿದ್ದೇನೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗುರು ಲಿಂಗಪ್ಪ ಮಿಣಜಿಗಿ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಮಾನವಿಯ ಮೌಲ್ಯಗಳು ಅತಿಮುಖ್ಯ.
ಉತ್ತಮವಾದ ಮಾನವಿಯ ಮೌಲ್ಯಗಳನ್ನು ಬೆಳೆಸಿಕೊಂಡು ಇನ್ನೊಬ್ಬರಿಗೆ ಮಾದರಿ ಆಗಬೇಕು ಎಂದರು. ಸರಕಾರಿ ಮಹಿಳಾ ಪದವಿ
ಮಹಾವಿದ್ಯಾಲಯದ ಉಪನ್ಯಾಸಕ ಡಾ|ಶಿವಪುತ್ರ ಸರ್ವೋದಯ ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮವಾದ ಗುಣಗಳನ್ನು ಅಳವಡಿಕೊಳ್ಳುವುದರಿಂದ ಮಾತ್ರ ಜೀವನದ ಗುರಿ ಮುಟ್ಟಲು ಸಾಧ್ಯ ಎಂದರು. ಎನ್‌.ಎಸ್‌.ಎಸ್‌ ಅಧಿ ಕಾರಿ ರುದ್ರಗೌಡ ಮಾಲಿಪಾಟಿಲ್‌ ಮಾತನಾಡಿ, ರಾಷ್ಟ್ರಕ್ಕೆ ಮತ್ತು ಸಮಾಜ ಬೆಳವಣಿಗಾಗಿ ಪ್ರತಿಯೊಬ್ಬ ವಿದ್ಯಾರ್ಥಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಚನ್ನಬಸಪ್ಪ ಕುಳಗೇರಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮುಖ್ಯ, ಶಿಸ್ತು ಪಾಲನೆ ಮಾಡುವುದರ ಮೂಲಕ ವಿದ್ಯಾರ್ಥಿಗಳು
ಕಾಲೇಜು ಪೋಷಕರಿಗೆ ಕೀರ್ತಿಯನ್ನು ತರುವಂತಹ ವ್ಯಕ್ತಿಗಳಾಗಬೇಕೆಂದು ಸಲಹೆ ನೀಡಿದರು. ಡಾ| ಸುಭಾಸ್‌ ಕರಣಿಗಿ, ಶ್ರೀನಿವಾಸರಡ್ಡಿ ಕಂದಕೂರ, ರವಿ ಮಾಲಿಪಾಟೀಲ್‌, ಉಪನ್ಯಾಸಕ ಎಚ್‌.ಡಿ. ಹಳ್ಳಿ, ಶಂಕರಲಿಂಗಪ್ಪ ಗೂಳಿ, ಹೊಳೆಯಪ್ಪ ಎಚ್‌.ಎಸ್‌, ಸುನೀಲ್‌ ರಾಠೊಡ್‌, ಶ್ರೀಮತಿ ರಹತುನ್ನಿಸಾ, ಶ್ರೀಮತಿ ಪಂಕಜ, ಶ್ರೀಮತಿ ಗುರಬಾಯಿಕಟ್ಟಿ, ಕುಮಾರಿ ಶೃತಿ, ಕುಮಾರಿ ಅಂಬಿಕಾ, ಸುಭಾಶ್ಚಂದ್ರ ಮಾನೇಗಾರ ಇದ್ದರು. ಕಾಲೇಜಿನ ಉಪನ್ಯಾಸಕಿ ನಿರ್ಮಲಾ ಸಿನ್ನೂರ ನಿರೂಪಿಸಿದರು. ಬಸವರಾಜ ಮಯೂರ
ಸ್ವಾಗತಿಸಿದರು. ದಶರಥ ಕೆ. ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next