Advertisement
ಕೈವಾರದ ಯೋಗಿನಾರೇಯಣ ಮಠದಲ್ಲಿ ಬೆಂಗಳೂರಿನ ರಾಮಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿರುವ “ಗ್ರಾಮೀಣ ಭಾರತಕ್ಕೆ ವಿಜ್ಞಾನ, ಶಿಕ್ಷಣ ಮತ್ತು ತಂತ್ರಜ್ಞಾನ” ವಿಷಯದ ಬಗ್ಗೆ ಏಳು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಎಲ್ಲಾ ಗ್ರಾಮಗಳಲ್ಲಿ ಉತ್ಪನ್ನಗಳನ್ನು ಮನೆ ಮನೆಗಳಲ್ಲಿ ತಯಾರಿಸುವಂತೆ ಆಗಬೇಕು. ಇದೇ ಕೆಲಸವನ್ನು ನಾನು ನನ್ನ ಗ್ರಾಮದಲ್ಲಿ ಮಾಡುತ್ತಿದ್ದು, ದಕ್ಷಿಣ ಆಫ್ರಿಕಾಕ್ಕೆ ನಾವು ತಯಾರಿಸುವ ವಸ್ತುಗಳನ್ನು ರಫ್ತು ಮಾಡುತ್ತಿದ್ದೇನೆ.
ಗ್ರಾಮ ಕೈಗಾರಿಕೆ, ಗುಡಿ ಕೈಗಾರಿಕೆಗಳನ್ನು ಬೆಳೆಸಬೇಕು ಎನ್ನುವುದು ಮಹಾತ್ಮ ಗಾಂಧೀಜಿರವರ ಕನಸು. ಸ್ವಂತವಾಗಿ ಉತ್ಪಾದಿಸಬೇಕು, ಸ್ವಂತವಾಗಿ ಬಳಸಬೇಕು. ಗಾಂಧೀಜಿಯವರು ಇದನ್ನು ದೈವಿ ಸಂತೋಷ ಎಂದು ಕರೆದಿದ್ದಾರೆ. ಮಾನವನು ಸಂತೋಷಕ್ಕಾಗಿ ಬದುಕಬೇಕಾಗಿದೆ. ಕಬ್ಬಿನಹಾಲು ರಾಷ್ಟ್ರೀಯ ಪಾನೀಯವಾಗಬೇಕೆಂದು ಬಯಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ರಾಮಯ್ಯ ತಾಂತ್ರಿಕ ವಿದ್ಯಾಲಯದ ಉಪ ಪ್ರಾಂಶುಪಾಲ ಡಾ.ಸಿ.ಜಿ.ಪುಟ್ಟಪ್ಪ, ಚೇಂಬರ್ ಆಫ್ ಕಾಮರ್ಸ್‌ನ ಮಾಜಿ ಅಧ್ಯಕ್ಷ ತಲ್ಲಂ ವೆಂಕಟೇಶ್, ಡಾ.ರಾಜೀ ಜಾರ್ಚ್, ಕಾರ್ಯಾಗಾರದ ಸಂಯೋಜಕರಾದ ಡಾ.ಬಿ.ಪಿ.ಹರಿಚಂದ್ರ, ಡಾ.ದಿನೇಶ್, ಡಾ.ನಾಗಭೂಷಣ್ ಉಪಸ್ಥಿತರಿದ್ದರು.
ಡಾ.ರಾಜೀ ಜಾರ್ಚ್ ಸ್ವಾಗತಿಸಿ, ಡಾ.ಎನ್.ಎಲ್.ರಮೇಶ್ ವಂದಿಸಿದರು. ಕಾರ್ಯಾಗಾರದಲ್ಲಿ ಕರ್ನಾಟಕ, ಮಧ್ಯಪ್ರದೇಶ, ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಮುಂತಾದ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ಶಿಬಿರಾರ್ಥಿಗಳಾಗಿ ಪಾಲ್ಗೊಂಡಿದ್ದರು. ಒಂದು ವಾರಗಳ ಕಾಲ ಈ ಕಾರ್ಯಾಗಾರವು ನಡೆಯಲಿದೆ.
ಪ್ರಕೃತಿಯ ಧರ್ಮ ಶ್ರೇಷ್ಠ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಮಾತನಾಡಿ, ಪ್ರಕೃತಿಯ ಧರ್ಮ ಶ್ರೇಷ್ಠವಾದುದು. ಮಾನವರು ಪ್ರಕೃತಿಯ ಧರ್ಮವನ್ನು ನಾಶಮಾಡಿ ಕಷ್ಟಗಳನ್ನು ಇಂದಿನ ದಿನಗಳಲ್ಲಿ ಅನುಭವಿಸುವಂತಾಗಿದೆ.
ಅನೇಕ ವರ್ಷಗಳಿಂದ ಪೂರ್ವಜರು ಕಾಪಾಡಿಕೊಂಡು ಬಂದಿದ್ದ ಪ್ರಾಕೃತಿಕ ಸಂಪತ್ತನ್ನು ಕೇವಲ 200 ವರ್ಷಗಳಲ್ಲಿ ಹಾಳಾಗಿರುವುದು ದುರಂತ. ಈ ಬಗ್ಗೆ ಚಿಂತನೆ ನಡೆಸಿ ಸಮಾಜಮುಖೀಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ.
ಪ್ರಸ್ತುತ ವಿಜ್ಞಾನವನ್ನು ಪ್ರತಿಪಾದಿಸುತ್ತಿರುವ ವಿಧಾನವನ್ನು ಸರಿಪಡಿಸಿಕೊಳ್ಳಬೇಕು. ವಿಜ್ಞಾನವು ಮಾನವನ ಎಲ್ಲಾ ಆಸೆಗಳನ್ನು ಪೂರೈಸಲು ಸಾಧ್ಯವಿಲ್ಲ. ವಿಜ್ಞಾನದ ಸಹಾಯವಿಲ್ಲದೇ ಸಾವಿರಾರು ವರ್ಷಗಳ ಹಿಂದೆಯೇ ಅನೇಕ ದೇವಾಲಯಗಳನ್ನು ಕಬ್ಬಿಣದ ಸಹಾಯದಿಂದ ಕಟ್ಟಿದ್ದಾರೆ.
ಅವುಗಳಲ್ಲಿ ಒರಿಸ್ಸಾ ಕೋನಾರ್ಕ್‌ನ ಸೂರ್ಯ ದೇವಾಲಯವು ಒಂದು ಎಂದರು. ಇಡೀ ವಿಶ್ವಕ್ಕೆ ಹವಾಮಾನ ವೈಪರೀತ್ಯ ಸವಾಲಾಗಿ ಪರಿಣಮಿಸಿದೆ. ಸ್ವಾಭಾವಿಕ ಅರಣ್ಯದಿಂದ, ಕಾಂಕ್ರೀಟ್ ಅರಣ್ಯವನ್ನು ನಿರ್ಮಿಸುತ್ತಿರುವುದೇ ಇದೆಲ್ಲಕ್ಕೂ ಮೂಲ ಕಾರಣವಾಗಿದೆ. ಪ್ರಕೃತಿಯನ್ನು ದುರುಪಯೋಗ ಪಡಿಸಿಕೊಳ್ಳದೆ ರಕ್ಷಿಸಬೇಕಾಗಿದೆ ಎಂದರು.