Advertisement

ಖಾಸಗಿಯಲ್ಲೂ ಉದ್ಯೋಗ ಮೀಸಲಾತಿ ಕಲ್ಪಿಸಲಿ

12:46 PM May 12, 2017 | Team Udayavani |

ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ದಲಿತ ಸಮುದಾಯಗಳ ಬಗ್ಗೆ ನಿಜವಾಗಿಯೂ ಕಾಳಜಿಯಿದ್ದಲ್ಲಿ ಖಾಸಗಿ ಕ್ಷೇತ್ರದಲ್ಲಿಯೂ ಉದ್ಯೋಗ ಮೀಸಲಾತಿ ಕಾಯ್ದೆ ಜಾರಿಗೆ ತರಲಿ ಎಂದು ಬಿಎಸ್ಪಿ ರಾಜ್ಯ ಸಂಚಾಲಕ ಮಾರಸಂದ್ರ ಮುನಿಯಪ್ಪ ಒತ್ತಾಯಿಸಿದ್ದಾರೆ. 

Advertisement

ಶುಕ್ರವಾರ ರಸ್ತೆ ಸಾರಿಗೆ ಸಂಸ್ಥೆ ದಾವಣಗೆರೆ ವಿಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಸಂಘದ ಬೆಳ್ಳಿ ಹಬ್ಬದ ಮಹೋತ್ಸವ ಮತ್ತು ಡಾ| ಬಿ.ಆರ್‌. ಅಂಬೇಡ್ಕರ್‌ರವರ 126ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಈಚೆಗೆ ದಲಿತ ಸಮುದಾಯದ ಮೀಸಲಾತಿ ಸೌಲಭ್ಯ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ಸರ್ಕಾರಿ ಉದ್ಯೋಗ ಎನ್ನುವುದು ದಲಿತ  ಸಮುದಾಯಕ್ಕೆ ಸಿಗುವುದೇ ಇಲ್ಲ. ಹಾಗಾಗಿ ಐಟಿ, ಬಿಟಿಯಂತಹ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದರು. 

ಭಾರತದಲ್ಲಿ 4 ವರ್ಗ, 6 ಸಾವಿರ ಜಾತಿ, 1 ಲಕ್ಷ ಉಪಜಾತಿ ಇವೆ. ಶತ ಶತಮಾನದಿಂದ ದಲಿತ ಸಮುದಾಯಗಳ ಮೇಲೆ ಒಂದಿಲ್ಲ ಒಂದು ರೀತಿಯ ದೌರ್ಜನ್ಯ, ಶೋಷಣೆ, ದಬ್ಟಾಳಿಕೆ ನಡೆಯುತ್ತಲೇ ಇದೆ.  ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ತೀರಾ ಹಿಂದುಳಿದಿರುವ ದಲಿತ ಸಮುದಾಯಕ್ಕೆ ಸಲಾತಿ ಸೌಲಭ್ಯ ಬೇಕೇ ಬೇಕು ಎಂದು ಪ್ರತಿಪಾದಿಸಿದರು.

ದೇಶದಲ್ಲಿ 30 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ದಲಿತ ಸಮುದಾಯದವರು ಅನುಭವಿಸುತ್ತಿದ್ದ ಶೋಷಣೆ, ದೌರ್ಜನ್ಯ, ದಬ್ಟಾಳಿಕೆ ತಪ್ಪಿಸಲಿಕ್ಕೆ 360 ಕೋಟಿಯಷ್ಟಿವೆ ಎನ್ನುವ ಯಾವುದೇ ದೇವರು ಬರಲಿಲ್ಲ. ಅಂಬೇಡ್ಕರ್‌ ಮಾತ್ರವೇ ದಲಿತ ಸಮುದಾಯಗಳ ಶೋಷಣೆ ತಪ್ಪಿಸಲು ಬಂದವರು.

Advertisement

1950ರಲ್ಲಿ ಜಾರಿಗೆ ಬಂದ ಸಂವಿಧಾನದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಮೂಲಕ ದಲಿತರು ಸಹ ಕೆಲವಾರು ಹುದ್ದೆ, ರಾಜಕೀಯ ಅಧಿಕಾರ ಪಡೆಯಲು ನೆರವಾದರು. ಅಂಬೇಡ್ಕರ್‌ ದಲಿತರಿಗೆ ಮಾತ್ರವೇ ಮೀಸಲಾತಿ ಸೌಲಭ್ಯ ನೀಡಲಿಲ್ಲ. ಎಲ್ಲ ಸಮುದಾಯಕ್ಕೆ ನೀಡಿದ ಕಾರಣಕ್ಕೆ ದೇವೇಗೌಡ ಪ್ರಧಾನಿ ಆದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ ಎಂದು ತಿಳಿಸಿದರು. ಈಚೆಗೆ ಸರ್ವೋತ್ಛ ನ್ಯಾಯಾಲಯದ ನೀಡಿರುವ ತೀರ್ಪಿನಿಂದ ರಾಜ್ಯದಲ್ಲಿ 16 ಸಾವಿರಕ್ಕೂ ಹೆಚ್ಚು ದಲಿತ ಅಧಿಕಾರಿಗಳು, ನೌಕರರು ಮುಂಬಡ್ತಿಯಿಂದ ಹಿಂಬಡ್ತಿ ಪಡೆಯುವ ಆತಂಕದ ಸ್ಥಿತಿಯಲ್ಲಿದ್ದಾರೆ.

ರಾಜ್ಯ ಸರ್ಕಾರ ಮುಂಬಡ್ತಿ ಸೌಲಭ್ಯ ಕುರಿತಂತೆ ನ್ಯಾಯಾಲಯದಲ್ಲಿ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸಿ, ಸಮರ್ಥ ವಾದ ಮಂಡಿಸಬೇಕು. ಕೇಂದ್ರ ಸರ್ಕಾರ ಮುಂಬಡ್ತಿ ಮೀಸಲಾತಿಸೌಲಭ್ಯ ಕುರಿತಂತೆ ಮಸೂದೆ ಮಂಡನೆ ಮಾಡಿ, ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next