Advertisement

ಹಿಂಸೆಯಿಲ್ಲದ ಸಂತಸದ ನಗರಿಯಾಗಲಿ ಮಂಗಳೂರು: ಶ್ರೀ ರವಿಶಂಕರ್‌ ಗುರೂಜಿ

12:29 AM Feb 20, 2024 | Team Udayavani |

ಮಂಗಳೂರು: ಇದನ್ನು ಸಂತಸದ ನಗರವನ್ನಾಗಿ ಮಾಡೋಣ…. ಹಿಂಸೆ ಇಲ್ಲದ ನಗರವನ್ನಾಗಿಸೋಣ… ಹದಿಮೂರು ವರ್ಷಗಳ ಬಳಿಕ ನಗರಕ್ಕೆ ಭೇಟಿ ನೀಡಿದ ಆರ್ಟ್‌ ಆಫ್‌ ಲಿವಿಂಗ್‌ ಸ್ಥಾಪಕ ಶ್ರೀ ರವಿಶಂಕರ್‌ ಗುರೂಜಿ ಅವರ ಮಾತು..

Advertisement

ಇಲ್ಲಿನ ಟಿಎಂಎ ಪೈ ಸಭಾಂಗಣದಲ್ಲಿ ಅವರು ಸೋಮವಾರ ಸಂಜೆ “ಹ್ಯಾಪಿನೆಸ್‌ ಮಹೋತ್ಸವ‘ ಸಮಾವೇಶ ದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಂಗಳೂರನ್ನು ಬೆಂಗಳೂರು ಥರಾ ಮಾಡಬೇಡಿ, ಅದು ಸ್ವಲ್ಪ ಕೆಟ್ಟಿದೆ. ಮಂಗಳೂರನ್ನು ಆರು ಭಾಗಗಳಾಗಿ ವಿಂಗಡಿಸಿ. ಪ್ರತಿ ಭಾಗದಲ್ಲೂ ಒಂದು ಶಾಲೆಯನ್ನೋ ಅಥವಾ ಮಂದಿರವನ್ನೋ ಕೇಂದ್ರವನ್ನಾಗಿಸಿ. ಅಲ್ಲಿ ಶಿಬಿರಗಳನ್ನು ಮಾಡಿ, ಧ್ಯಾನ ಕಲಾಪ ಏರ್ಪಡಿಸಿ. ಹೀಗೆ ಇಡೀ ಮಂಗಳೂರಿನಲ್ಲಿ ಪರಿವರ್ತನೆಯನ್ನು ತನ್ನಿ, ಆ ಮೂಲಕ ಇಲ್ಲಿಗೊಂದು ಹೊಸ ಚೈತನ್ಯವನ್ನು ತುಂಬೋಣ, ಹಿಂಸೆ ಕಡಿಮೆಯಾಗಲಿ ಎಂದು ನುಡಿದರು.

ಬೇಕು ಧ್ಯಾನ
ಜೀವನದಲ್ಲಿ ಪ್ರಸನ್ನತೆ ಬೇಕು. ಯಾಕೆಂದರೆ ಬದುಕಿನ ಉದ್ದೇಶವೇ ಸಂತಸ ವಾಗಿರಬೇಕೆನ್ನುವುದು.ಆದರೆ ಮಗುವಾಗಿ ಹುಟ್ಟಿದಂದಿನಿಂದ ಕೊನೆ ವರೆಗೂ ನಾವು ಸಂತಸವಾಗಿರುವ ವಿಚಾರವನ್ನು ಮುಂದೂಡುತ್ತಲೇ ಇರುತ್ತೇವೆ ಎಂದ ಅವರು, ಬದುಕಿನ ಜಂಜಡ, ದುಮ್ಮಾನದಿಂದ ಮುಕ್ತ ವಾಗಲು ಧ್ಯಾನದ ಹಾದಿ, ಸುದರ್ಶನ ಕ್ರಿಯೆಯಂತಹ ಚಟುವಟಿಕೆಗಳು ಅತ್ಯಗತ್ಯ. ಹಾಗಾಗಿ ಪ್ರತಿದಿನ ಅರ್ಧಗಂಟೆಯಷ್ಟಾದರೂ ಹೊತ್ತು ಧ್ಯಾನಕ್ಕೆ ವಿನಿಯೋಗಿಸಿದರೆ ಬೇಸರ ದೂರವಾಗುತ್ತದೆ, ಜನರೊಂದಿಗಿನ ಸಂಬಂಧ ಉತ್ತಮಗೊಳ್ಳುತ್ತದೆ, ಇಷ್ಟಾರ್ಥಗಳ ಸಿದ್ಧಿ ಖಚಿತ ಎಂದರು.

ಸೆಕ್ಯುಲರ್‌ ಮಾಡಲು ಹೋದರೆ…
ಜೀವನವನ್ನು ಉತ್ಸವವಾಗಿ ಸ್ವೀಕರಿಸ ಬೇಕು. ನಮ್ಮನ್ನು ಎಲ್ಲರೂ ಪ್ರೀತಿಸಬೇಕು ಎಂದು ಬಯಸುತ್ತದೆ ನಮ್ಮ ಮನಸ್ಸು. ನಾವು ಪ್ರೀತಿ ಹಂಚಿದಾಗ ಮಾತ್ರ ಅದರ ದುಪ್ಪಟ್ಟು ಪ್ರೀತಿ ವಾಪಸು ಸಿಗುತ್ತದೆ. ಇದನ್ನು ಸಾಧಿಸಲು ಅಧ್ಯಾತ್ಮ ಪಥ ಅವಶ್ಯಕ. ನಾವು ಮಕ್ಕಳನ್ನು ಜಾತ್ಯತೀತ ರನ್ನಾಗಿಸಲು ಇಂತಹ ಆಚರಣೆಗಳಿಂದ ದೂರವಿ ರಿಸಿದರೆ, ಮುಂದೆ ಅವರು ಹೆತ್ತವರನ್ನೂ ದೂರವಿರಿಸಿ ಮರೆಯುವ ಅಪಾಯವಿದೆ ಎಂದರು. ಚಿಕ್ಕ ಮಕ್ಕಳು,
ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿ ದ್ದಾರೆ. ಮನಸ್ಸಿನ ಹತೋಟಿ ಇಲ್ಲದೆ ಇದು ಆಗುತ್ತಿದೆ, ಅದಕ್ಕಾಗಿಯೇ ಮಕ್ಕಳಿಗೆ ಆಧ್ಯಾತ್ಮ ಬೇಕಿದೆ ಎಂದರು.

Advertisement

ಜೀವನದಲ್ಲಿ ಖುಷಿಯಾಗಿರಲು ಐದು ಅಂಶ
-ನಮಗಿರುವ ವಿರೋಧವನ್ನು ಪೂರಕವಾಗಿ ಸ್ವೀಕರಿಸಿಕೊಳ್ಳುವುದು.
– ಪರಿಸ್ಥಿತಿಯನ್ನು ಹೇಗಿದೆಯೋ ಹಾಗೇ ಸ್ವೀಕರಿಸುವುದು
– ಬೇರೆಯವರ ಅಭಿಪ್ರಾಯಕ್ಕೆ ನಾವು ಚೆಂಡಾಗದಿರುವುದು
– ಬೇರೆಯವರ ತಪ್ಪನ್ನು ಮನ್ನಿಸಿಬಿಡುವುದು.
-ವರ್ತಮಾನದಲ್ಲಿ ಬದುಕು ಸಾಗಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next