Advertisement
ಹಾಗಾಗಿ ಶನಿವಾರದ ಶ್ರದ್ಧಾಂಜಲಿ ಸಭೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶನಿವಾರದ ಗಡುವು ಮೀರಿದ್ದರೂ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರ ಮೇಲೆ ಒತ್ತಡ ತರುವ ಸದುದ್ದೇಶದಿಂದ ಹಳ್ಳಿಹಳ್ಳಿಗಳಿಂದ ಸಾವಿರಾರು ಜನರು ಶ್ರದ್ಧಾಂಜಲಿ ಸಭೆಗೆ ಜನ ಆಗಮಿಸಿದ್ದರು.
Related Articles
Advertisement
ಈ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಮಹಾಮಂಗಳಾರತಿ ಮಾಡಿ ಅನ್ನಸಂತರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಇತಿ ಹಾಡಲಾಯಿತು.
ಊರಿನ ಎಲ್ಲಾ ದೇವಸ್ಥಾನ ಸಮಿತಿಯವರು, ಕರವೇ, ಜಯಕರ್ನಾಟಕ, ರೈತ ಸಂಘ, ಹಿಂದೂ ಜಾಗರಣ ವೇದಿಕೆ, ಎಬಿವಿಪಿ ಹೀಗೆ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಗ್ರಾಮದಲ್ಲಿ ಅಘೋಷಿತ ಬಂದ್ಆಂಜನೇಯಸ್ವಾಮಿ ದೇವರ ಬಸವನ ಶ್ರದ್ಧಾಂಜಲಿ ಸಭೆಯ ಅಂಗವಾಗಿ ಗ್ರಾಮದಲ್ಲಿ ಅಘೋಷಿತ ಬಂದ್ ವಾತಾವರಣ ಸೃಷ್ಟಿಸಿತ್ತು. ಕಾರ್ಯಕ್ರಮದ ಸಂಘಟಕರು ಅಂಗಡಿ ಬಂದ್ ಮಾಡುವಂತೆ ಸೂಚಿಸದಿದ್ದರೂ ಬಹುಪಾಲು ಮಂದಿ ಮಧ್ಯಾಹ್ನದ ವರೆಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ವಾಹನ ಸಂಚಾರ ಎಂದಿನಂತಿತ್ತು. ಖಾಸಗಿ ಶಾಲೆಗಳಿಗೆ ರಜೆ ನೀಡಿದ್ದರೆ ಸರ್ಕಾರಿ ಶಾಲೆಗಳು ತೆರೆದಿದ್ದವು ಮೌನವಾಗಿದ್ದ ಮಾಜಿ ಶಾಸಕರು
ಇತ್ತೀಚೆಗೆ ನಡೆದ ಸಭೆಯಲ್ಲಿ ಆರೋಪಿಗಳ ಪತ್ತೆಗೆ ಶನಿವಾರ ಗಡುವು ನೀಡಿದ್ದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಈ ಸಂದರ್ಭದಲ್ಲಿ ತುಟಿಬಿಚ್ಚದೆ ಮೌನವಾಗಿದ್ದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಿರಣ್‌ಕುಮಾರ್ ಪೊಲೀಸರ ವಿಳಂಬ ಧೋರಣೆ ವಿರುದ್ಧ ಉಗ್ರ ಪ್ರತಿಭಟನೆಗೆ ಮುಹೂರ್ತ ನಿಗದಿ ಮಾಡುವ ನಿರೀಕ್ಷೆಯಲ್ಲಿ ಜನರಿದ್ದರು. ಆದರೆ ಮೆರವಣಿಗೆ ಮುಗಿದ ನಂತರ ಯಾವುದೇ ಪ್ರತಿಕ್ರಿಯೆ ನೀಡದೆ ನಿರ್ಗಮಿಸಿದರು ಪೊಲೀಸರ ಮೇಲೆ ನಂಬಿಕೆಯಿಡಿ
ಪೊಲೀಸರು ಸಣ್ಣ ಸುಳಿವು ಸಿಕ್ಕರೂ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ನಿಸ್ಸೀಮರು. ಕೆಲ ಪ್ರಕರಣಗಳು ಒಂದೆರಡು ಗಂಟೆಗಳಲ್ಲಿ, ಕೆಲವು ವರ್ಷಗಳ ಕಾಲ ಹಿಡಿದಿದೆ. ಇದಕ್ಕೆ ಪಕ್ಕ ಸಾಕ್ಷಾಧಾರ ಸಂಗ್ರಹಿಸಲು ತಡವಾಗುತ್ತದೆ ವಿನಃ ಯಾವುದೇ ದುರುದ್ದೇಶದಿಂದಲ್ಲ. ಹಾಗಾಗಿ ಬಸವಣ್ಣನ ಹತ್ಯೆಯ ಆರೋಪಿಗಳ ಸುಳಿವು ಈಗಾಗಲೇ ಸಿಕ್ಕಿದ್ದು ಕೆಲ ಸಾಕ್ಷಾಧಾರಗಳ ಸಂಗ್ರಹದಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ಹಾಗಾಗಿ ಪೊಲೀಸರ ಮೇಲೆ ಅಪನಂಬಿಕೆ ಬೇಕ. ಘದಲ್ಲೆ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡುತ್ತೇವೆ ಎಂದು ತಿಪಟೂರು ಡಿವೈಎಸ್‌ಪಿ ವೇಣುಗೋಪಾಲ್ ತಿಳಿಸಿದರು.