Advertisement

Karnataka: ಸಚಿವ ರಾಜಣ್ಣರಿಂದ ಸಿಎಂ ಕ್ಷಮೆ ಕೇಳಿಸಲಿ: ಸದಾನಂದ ಗೌಡ ಆಗ್ರಹ

09:22 PM Jan 18, 2024 | Pranav MS |

ಬೆಂಗಳೂರು: ರಾಮ ಇಲ್ಲ ಎಂದು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದ ಅಯೋಗ್ಯರು ರಾಮನ ವಿರುದ್ಧ ಹೇಳಿಕೆ ನೀಡುವುದು ಅಚ್ಚರಿಯಲ್ಲ. ರಾಮನನ್ನು ಬೊಂಬೆ ಎಂದಿರುವ ಸಚಿವ ಕೆ.ಎನ್‌.ರಾಜಣ್ಣ ಅವರಿಂದ ಸಿಎಂ ಕ್ಷಮೆ ಕೇಳಿಸಬೇಕು ಅಥವಾ ಸಿಎಂ ಸಿದ್ದರಾಮಯ್ಯ ಅವರೇ ರಾಮಭಕ್ತರ ಕ್ಷಮೆ ಯಾಚಿಸಬೇಕೆಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಆಗ್ರಹಿಸಿದರು.
ಪಕ್ಷದ ಕಚೇರಿಯಲ್ಲಿ ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸಿದ ಬಿಜೆಪಿ ನಾಯಕರು, ರಾಮನ ವಿರುದ್ಧ ಮಾತನಾಡುತ್ತಿರುವ ಕಾಂಗ್ರೆಸ್‌ ನಾಯಕರಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

Advertisement

ರಾಜಣ್ಣ ಅವರಿಗೆ ಕಾಲ ಮಿಂಚಿಲ್ಲ. ಅವರು ಹೇಳಿರುವ ಆ ಬೊಂಬೆಯೇ ಮುಂದಿನ ದಿನಗಳಲ್ಲಿ ಉರುಳಾಗಿ ಕಾಡಲಿದೆ. ರಾಜಣ್ಣನಂಥ ಕಾಮಾಲೆ ಕಣ್ಣಿರುವವರನ್ನು ಸಚಿವರನ್ನಾಗಿ ಮಾಡಿ ಸಿಎಂ ತಪ್ಪು ಮಾಡಿದ್ದಾರೆ. ಈ ವ್ಯವಸ್ಥೆಯಿಂದ ಕಾಂಗ್ರೆಸ್‌ 3 ಹೋಳಾಗಲಿದೆ. ಬಹಳ ದಿನ ಕಾಂಗ್ರೆಸ್‌ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ವಿಶ್ಲೇಷಿಸಿದರು.

ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ರಾಜಣ್ಣ ಹಾಗೂ ಪ್ರಿಯಾಂಕ್‌ ಖರ್ಗೆಯವರು ಮನ ಬಂದಂತೆ ಮಾತನಾಡಿದ್ದು, ಇದಕ್ಕೆಲ್ಲ ಜನತೆ ಸೂಕ್ತ ಸಂದರ್ಭದಲ್ಲಿ ಉತ್ತರ ಕೊಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next