Advertisement

BJP ರಾಜ್ಯಾಧ್ಯಕ್ಷ ಯಾರು ಅಂತ ಬಹಿರಂಗಗೊಳಿಸಲಿ: ಶೆಟ್ಟರ್ ಸವಾಲು

03:57 PM Oct 25, 2023 | Team Udayavani |

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬರೀ‌ ಹೆಸರು ಕೇಳಿ ಬರೋದೆ ಆಯಿತು. ಯಾರು ಅಧ್ಯಕ್ಷರು ಅಂತ ಬಹಿರಂಗಗೊಳಿಸಲಿ, ದೆಹಲಿ ವರಿಷ್ಠರು ಒಂದು ಹೆಸರು ಬಿಟ್ಟು ಅದರ ಪ್ಲಸ್, ಮೈನಸ್ ನೋಡಿ ಅದು ಫೇಲ್ ಆಯಿತು ಅಂದರೆ ಮತ್ತೆ ಬೇರೆ ಹೆಸರು ಬಿಡುತ್ತಾರೆ. ಇದನ್ನು ಪ್ರಯೋಗ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಅಧ್ಯಕ್ಷ ಸ್ಥಾನದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಇದು ಊಹಾಪೋಹವೆಂದು ಹೇಳಿದ್ದಾರೆ. ಇದನ್ನು ಹೇಗೆ ಅಧಿಕೃತ ಎಂದು ಹೇಳುತ್ತಿರಿ. ಇದಕ್ಕೆ ಯಾವುದೇ ಅರ್ಥವಿಲ್ಲ. ಒಂದು ರಾಷ್ಟ್ರೀಯ ಪಕ್ಷ ಫೇಲೂವರ್ ಆಗಬೇಕು ಅನ್ನುವ ಉದಾಹರಣೆಗೆ ಇದ್ದರೆ ಇದಕ್ಕೆ ರಾಜ್ಯ ಬಿಜೆಪಿ ಪರಿಸ್ಥಿತಿಯೇ ಸಾಕ್ಷಿ ಎಂದರು.

ರಾಜ್ಯಾಧ್ಯಕ್ಷ, ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ಮಾಡದ ಶೋಚನಿಯ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಇದನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ಸಂಕ್ರಾಂತಿ ನಂತರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಏನು ಆಗುವುದಿಲ್ಲ. ಈ ಸರ್ಕಾರ ಗಟ್ಟಿಮುಟ್ಟಾಗಿ ಐದು ವರ್ಷ ಇರುತ್ತೆ. 104 ಇದ್ದಾಗಾಲೇ ಏನು ಮಾಡಲು ಆಗಿಲ್ಲ. ಈಗ ಏನು ಮಾಡಲು ಸಾಧ್ಯ. ಆದರೆ ಸಂಕ್ರಾಂತಿ ನಂತರ ಅಲ್ಲೋಲ ಕಲ್ಲೋಲ ಆಗುತ್ತೆ ಎಂದು ಆಶಾಭಾವನೆ ಮೂಡಿಸಿ ಕಾರ್ಯಕರ್ತರನ್ನು, ಪಕ್ಷ ಬಿಟ್ಟು ಹೋಗುತ್ತಿರುವ ನಾಯಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next