Advertisement
ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ (ತಿದ್ದುಪಡಿ)ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್, ನಾಗರಾಜ್ ಯಾದವ್, ಪಿ.ಆರ್. ರಮೇಶ್, ಪ್ರಕಾಶ ರಾಥೋಡ್, ಜೆಡಿಎಸ್ ಸದಸ್ಯರಾದ ಮರಿತಿಬ್ಬೇಗೌಡ, ಭೋಜೇಗೌಡ ಅವರು ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಮಸೂದೆಗೆ ತಿದ್ದುಪಡಿ ತರಲಾಗಿದೆ. ಸರ್ಕಾರದ ಈ ನಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮಾಡುವ ಕೆಲಸ ಎಂದು ಸಿಟ್ಟು ಹೊರಹಾಕಿದರು.
Related Articles
Advertisement
ಈ ಮಾತಿಗೆ ಆಕ್ಷೇಪಿಸಿದ ಹರಿಪ್ರಸಾದ್, ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಂವಿಧಾನಾತ್ಮಕ ಕಾಯ್ದೆ ಅನ್ನು ಇದೀಗ ಸಡಿಲಗೊಳಿಸಲಾಗಿದೆ. ಮಡೆಸ್ನಾನ ತಾಂತ್ರಿಕವಾಗಿ ಜೀವಂತವಾಗಿದೆ. ನಿಮ್ಮ ತಂತ್ರ-ಕುತಂತ್ರ ನಮಗೆ ಅರ್ಥ ವಾಗುವುದಿಲ್ಲ ಎಂದು ಛೇಡಿಸಿದರು. ಸಿದ್ದರಾಮಯ್ಯ ಆಡಳಿತ ಅವಧಿಯದ್ದು ಎಂದು ನಮ್ಮ ಮೇಲೆ ಗೂಬೆ ಕೂರಿಸಲು ಹೋಗಬೇಡಿ ಎಂದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಬಲವಂತದ ಮತಾಂತರ ರಾಜ್ಯದಲ್ಲಿ ಇಲ್ಲ. ಆತ್ಮ ವಂಚನೆ ಮಾಡಿಕೊಂಡು ಕಾಯ್ದೆ ವಿರೋಧಿಸುತ್ತಿಲ್ಲ ಇದು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳುವ ಕೆಲಸವಾಗಿದೆ. ಮತಾಂತರವನ್ನು ಘೋಷಣೆ ಮಾಡಿದ ಆ ನಂತರ ಮತ್ತೂಂದು ಮತವನ್ನ ಸ್ವೀಕರಿಸಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದೆ. ಇದು ಮೂಲಭೂತವಾದಿಗಳ ಮಸೂದೆಯಾಗಿದೆ. ಸರ್ಕಾರ ಅಂತರ್ ಜಾತಿಗಳ ವಿವಾಹವನ್ನು ಪ್ರೋತ್ಸಾಹಿಸುವ ಕೆಲಸಮಾಡಬೇಕು, ಆದರೆ ಇಲ್ಲಿ ಕಾಯ್ದೆ ಮೂಲಕ ಅದನ್ನು ಕಸಿದುಕೊಳ್ಳುವ ಕೆಲಸ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ತಿರುಗೇಟು ನೀಡಿದ ಸಚಿವ ಆರಗ ಜ್ಞಾನೇಂದ್ರ, ಕೆಲವರು ಎಸ್‌ಸಿ ಪ್ರಮಾಣ ಪತ್ರಗಳನ್ನು ನೀಡಿ ಸವಲತ್ತು ಪಡೆಯುತ್ತಿದ್ದಾರೆ. ಸರ್ಕಾರದ ಸವಲತ್ತುಗಳ ದುರುಪಯೋಗವಾಗುತ್ತಿದೆ, ಸ್ವಯಂ ಘೋಷಣೆ ಮಾಡಿಕೊಂಡು ಅವರು ಬೇರೆ ಧರ್ಮ ಸ್ವೀಕಾರ ಮಾಡಲಿ, ನಮ್ಮ ಅಭ್ಯಂತರವಿಲ್ಲ. ಇವರು ಪಡೆಯುವ ಸವಲತ್ತುಗಳು ಸೌಲಭ್ಯ ವಂಚಿತರಿಗೆ ಸಿಗಲಿದೆ ಇದು ಕೂಡ ಮಸೂದೆಯ ಆಶಯವಾಗಿದೆ ಎಂದರು. ಆಡಳಿತ ಪಕ್ಷದ ಪರವಾಗಿ ಮಾತನಾಡಿದ ಛಲವಾದಿ ನಾರಾಯಣ ಸ್ವಾಮಿ, ಭಾರತಿ ಶೆಟ್ಟಿ ಮತ್ತು ತೇಜಸ್ವಿನಿಗೌಡ ಕಾಯ್ದೆಯನ್ನು ಸಮರ್ಥಿಸಿಕೊಂಡರು. ದಲಿತ ಸಮುದಾಯವನ್ನು ಗುರಿಯಾಗಿ ಸಿಕೊಂಡು ಶಿಕ್ಷಣ, ಆರೋಗ್ಯದ ಜತೆಗೆ ಇನ್ನಿತರ ಸವಲತ್ತುಗಳನ್ನು ನೀಡುವ ಆಸೆ ತೋರಿಸಿ ಮತಾಂತರ ನಡೆಸಲಾಗುತ್ತಿದೆ. ಹಲವರು ಆ ಆಸೆಗಳಿಗೆ ಬಲಿಯಾಗಿದ್ದಾರೆ. ಅವರು ಮತ್ತೆ ಘರ್ ವಾಪಸಿ ಆಗಬೇಕು ಎಂದು ಚಲವಾದಿ ನಾರಾಯಣ ಸ್ವಾಮಿ ಮನವಿ ಮಾಡಿದರು.