Advertisement

ನಿರುಪಯುಕ್ತ ಕಾಯ್ದೆಗಳ ರದ್ದತಿಗೆ ವಿಧಾನಸಭೆ ಅಸ್ತು

08:12 AM Nov 16, 2017 | |

ವಿಧಾನಸಭೆ: ರಾಜ್ಯ ಸರ್ಕಾರದ ವ್ಯಾಪ್ತಿಗೊಳಪಡುವ 134 ಅನುಪಯುಕ್ತ ಕಾಯ್ದೆಗಳನ್ನು ರದ್ದುಗೊಳಿಸಲು ಸರ್ಕಾರ ಮಂಡಿಸಿದ
ವಿಧೇಯಕಕ್ಕೆ ವಿಧಾನಸಭೆ ಬುಧವಾರ ಅಂಗೀಕಾರ ನೀಡಿತು. ಕರ್ನಾಟಕ ಧನ ವಿನಿಯೋಗ ಕಾಯ್ದೆ- 2012, ಪಂಚಾಯತ್‌
ರಾಜ್‌ ತಿದ್ದುಪಡಿ ವಿಧೇಯಕ, ಕರ್ನಾಟಕ ವಿಶ್ವ ವಿದ್ಯಾಲಯಗಳ ವಿಧೇಯಕ, ಶಿಕ್ಷಕರ ವರ್ಗಾವಣೆ ವಿಧೇಯಕ, ವಿಧಾನ ಮಂಡಲದ ಸಂಬಳದ ಶಾಸನ ಸೇರಿದಂತೆ 134 ಕಾನೂನುಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಲು ನಿರ್ಧರಿಸಿದ್ದು, ಅದಕ್ಕಾಗಿ ವಿಧೇಯಕ ಮಂಡಿಸಲಾಗಿದೆ ಎಂದು ವಿಧೇಯಕ ಮಂಡಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

Advertisement

ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಸರ್ಕಾರ ಯಾವ ಕಾರಣಕ್ಕಾಗಿ ಈ ಕಾನೂನುಗಳನ್ನು ಜಾರಿಗೊಳಿಸಿತ್ತು ಮತ್ತು ಈ ಸಂದರ್ಭದಲ್ಲಿ ಕಾನೂನುಗಳನ್ನು ರದ್ದುಪಡಿ ಸುವ ಉದ್ದೇಶವೇನು ಎಂದು ಪ್ರಶ್ನಿಸಿದರಲ್ಲದೆ, ಅದಕ್ಕೆ ಸೂಕ್ತಕಾರಣ ನೀಡುವಂತೆ ಆಗ್ರಹಿಸಿದರು.

ಕೆಲವು ಕಾನೂನುಗಳಿಗೆ ಪರ್ಯಾಯವಾಗಿ ಕಾನೂನುಗಳನ್ನುತರಲಾಗಿದೆ. ಜೊತೆಗೆ ಅನೇಕ ಕಾನೂನುಗಳು ಇದ್ದರೂ ನಿರುಪ 
ಯುಕ್ತವಾಗಿವೆ. ಕೆಲವು ಕಾನೂನುಗಳನ್ನು ಬಳಕೆ ಮಾಡಿ ದರೂ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಾಗದು.
ಹಾಗಾಗಿ ಹಳೆಯ ಕಾನೂನುಗಳನ್ನು ರದ್ದುಪಡಿಸುತ್ತಿರುವುದಾಗಿ ಸಚಿವ ಜಯಚಂದ್ರ ವಿವರಣೆ ನೀಡಿದರು. ಬಳಿಕ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.

ನಗರಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಅಂಗೀಕಾರ ಈ ಮಧ್ಯೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ 2017ಕ್ಕೆ ವಿಧಾನಸಭೆಯಲ್ಲಿ ಆಂಗೀಕಾರ ನೀಡಲಾಯಿತು. ಕೇಂದ್ರದ 2013ರ ಭೂಸ್ವಾಧೀನ ಕಾಯ್ದೆ ಆನ್ವಯ ಭೂ ಸ್ವಾಧೀನ, ಪುನರ್ವಸತಿ ಒದಗಿಸಲು ಮತ್ತು ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯ ಸಮ್ಮತವಾದ ಬೆಲೆ ನೀಡಲು
ನೂತನ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next