Advertisement

ಮೀಸಲಾತಿ ನಿರ್ಧಾರದ ವಿರುದ್ಧಕಾನೂನು ಹೋರಾಟ: ಪ್ರಕಾಶ ರಾಠೊಡ್‌

11:18 PM Mar 26, 2023 | Team Udayavani |

ವಿಜಯಪುರ: ಅವೈಜ್ಞಾನಿಕವಾಗಿರುವ ಸದಾಶಿವ ಆಯೋಗದ ವರದಿ ಬಹಿರಂಗ ಮಾಡದೆ ಈಗ ಸಂಪುಟ ಸಭೆ ಯಲ್ಲಿ ತರಾತುರಿಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇದರ ವಿರುದ್ಧ ಕಾನೂನು ಸಮರ ಹಾಗೂ ಬೀದಿಗಿಳಿದು ಹೋರಾಟ ಮಾಡುವುದರ ಜತೆಗೆ ಸದನದಲ್ಲೂ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಕೆಪಿಸಿಸಿ ಪ್ರಧಾನ ವಕ್ತಾರ, ಮೇಲ್ಮನೆ ವಿಪಕ್ಷ ಮುಖ್ಯ ಸಚೇತಕ ಪ್ರಕಾಶ ರಾಠೊಡ್‌ ಹೇಳಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ರಾಥೋಡ್‌ ಅವರು, ಒಳ ಮೀಸಲಾತಿ ಪ್ರಕಟಿಸುವ ಹೆಸರಿನಲ್ಲಿ ಪರಿಶಿಷ್ಟ ಸಮು ದಾಯಗಳನ್ನು ಅವಮಾನಿ ಸುವ ಕೆಲಸವಾಗಿದೆ. ಸರಕಾರದ ಎಲ್ಲ ಸಚಿವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು.

ಕಾನೂನು ಹೋರಾಟ
ಈ ಕುರಿತು ಕಾನೂನು ಹೋರಾಟಕ್ಕೂ ಸಿದ್ಧ. ಪರಿಶಿಷ್ಟ ಜಾತಿ ಮೀಸಲು ವಿಷಯದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ಉಲ್ಲಂಘಿಸಿ, ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿರುವ ನಮ್ಮ ಸಮುದಾಯದ ಜನಪ್ರತಿನಿಧಿಗಳು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬರಬೇಕೆಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next